ನವದೆಹಲಿ:ನಮ್ಮ ಭಾರತೀಯರು ಪ್ರಪಂಚದ ಎಲ್ಲ ಕಡೆಗಳಲ್ಲೂ ತಮ್ಮದೇ ಛಾಪು ಮೂಡಿಸುತ್ತಿರುವುದು ಹೊಸದೇನಲ್ಲ. ಜಗತ್ತಿನ ಯಾವುದೇ ಮೂಲೆಗೆ ಹೋಗಿ ಅಲ್ಲಿ ವಿದೇಶಿಗರ ಸ್ಥಾನದಲ್ಲಿ ಭಾರತೀಯರ ಮೊದಲ ಸ್ಥಾನದಲ್ಲಿದ್ದಾರೆ. ಯಾವುದೇ ಕ್ಷೇತ್ರದಲ್ಲೂ ಭಾರತೀಯರು ವಿಶೇಷ ಗಮನ ಸೆಳೆಯುತ್ತಾರೆ. ಪ್ರಸ್ತುತ ಇಸ್ರೇಲ್​ ಮತ್ತು ಹಮಾಸ್​ ಉಗ್ರರ ನಡುವೆ ಭೀಕರ ಯುದ್ಧ ನಡೆಯುತ್ತಿದೆ. ಇಸ್ರೇಲ್​ ಸೇನೆಯಲ್ಲೂ ಭಾರತ ಮೂಲದ ಸಹೋದರಿಯರಿಬ್ಬರು ತಮ್ಮ ಗಮನ ಸೆಳೆದಿದ್ದಾರೆ.
ಅ.7ರಂದು ಪ್ಯಾಲೆಸ್ತೀನ್​ನ ಹಮಾಸ್​ ಉಗ್ರರು ಇಸ್ರೇಲ್​ ಮೇಲೆ ಮಾಡಿದ ದಿಢೀರ್​ ದಾಳಿಗೆ ಪ್ರತಿಯಾಗಿ ಇಸ್ರೇಲ್​ ಹಮಾಸ್​ ಉಗ್ರರ ರುಂಡ ಚೆಂಡಾಡುತ್ತಿದೆ. ಗಾಜಾ ಪಟ್ಟಿ ಮೇಲೆ ವಾಯು, ಜಲ, ಭೂಪ್ರದೇಶ ಎಲ್ಲ ಕಡೆಗಳಿಂದ ನಿರಂತರ ದಾಳಿ ಮಾಡುತ್ತಿದೆ. ಇದೇ ಯುದ್ಧದಲ್ಲಿ ಗುಜರಾತ್​ ಮೂಲದ ಇಬ್ಬರು ಸಹೋದರಿಯರು ಇಸ್ರೇಲ್​ ಪರ ಹೋರಾಡುತ್ತಿದ್ದಾರೆ. ಅಂದರೆ, ಇಸ್ರೇಲ್​ ಆರ್ಮಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ನಿಶಾ ಮುನಿಯಾಸಿಯಾ ಎಂಬುವರು ಕಮ್ಯುನಿಕೇಷನ್​ ಆ್ಯಂಡ್​ ಸೈಬರ್​ ಸೆಕ್ಯುರಿಟಿ ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ರಿಯಾ ಮುನಿಯಾಸಿಯಾ ಎಂಬಾಕೆ ವಿಶ್ವದ ಬಲಿಷ್ಠ ಸೇನೆಯಲ್ಲಿ ಖಾಯಂ ಸ್ಥಾನ ಪಡೆಯಲು ಕಮಾಂಡೋ ತರಬೇತಿ ಪಡೆಯುತ್ತಿದ್ದಾರೆ.
ಜುನಾಗಢದ ಮಾನವದರ್ ತಾಲೂಕಿನ ಕೊಥಾಡಿ ಗ್ರಾಮದ ಜೀವಭಾಯಿ ಮುಲಿಯಾಸಿಯಾ ಅವರು ಹಲವು ವರ್ಷಗಳ ಹಿಂದೆ ಇಸ್ರೇಲ್​ಗೆ ವಲಸೆ ಹೋಗಿ, ಅಲ್ಲಿನ ಪೌರತ್ವ ಪಡೆದಿದ್ದಾರೆ. ಅವರ ಮಗಳಿಬ್ಬರು ಈಗ ಇಸ್ರೇಲಿ ರಕ್ಷಣಾ ಪಡೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. 18 ವರ್ಷ ಮೇಲ್ಪಟ್ಟ ಎಲ್ಲ ನಾಗರಿಕರು ಕಡ್ಡಾಯ ಮಿಲಿಟರಿ ಸೇವೆ ಸಲ್ಲಿಸುವುದು ಇಸ್ರೇಲ್​ನ ನಿಯಮ. ದೈಹಿಕ ಮತ್ತು ಮಾನಸಿಕ ವಿಕಲಾಂಗ ವ್ಯಕ್ತಿಗಳಿಗೆ ಮಾತ್ರ ವಿನಾಯಿತಿಗಳನ್ನು ನೀಡಲಾಗುತ್ತದೆ.
ಪ್ರಸ್ತುತ ಜೀವಭಾಯಿ ಮುಲಿಯಾಸಿಯಾ ಅವರು ಇಸ್ರೇಲ್​ ರಾಜಧಾನಿ ಟೆಲ್​ಅವೀವ್​ನಲ್ಲಿ ಜನರಲ್​ ಸ್ಟೋರ್​ ಒಂದನ್ನು ನಡೆಸುತ್ತಿದ್ದಾರೆ. ತಮ್ಮ ಮಗಳು ನಿಶಾ ಬಗ್ಗೆ ಮಾತನಾಡಿರುವ ಜೀವಭಾಯಿ, ಕಳೆದ ಎರಡು ವರ್ಷಗಳಿಂದ ಲೆಬನಾನ್, ಸಿರಿಯಾ, ಜೋರ್ಡಾನ್ ಮತ್ತು ಈಜಿಪ್ಟ್ ಗಡಿಗಳಲ್ಲಿ ಮಗಳು ಕೆಲಸ ಮಾಡಿದ್ದಾಳೆ. 2021ರಲ್ಲಿ ಗಾಜಾದಲ್ಲಿ ಇಸ್ರೇಲಿ ಪಡೆಗಳು ಹಮಾಸ್ ಮೇಲೆ ದಾಳಿ ನಡೆಸಿದ್ದಾಗ ಅವಳು ಯುದ್ಧಭೂಮಿಯಲ್ಲಿ ಕೆಲಸ ಮಾಡಿದ್ದಳು. ಆದರೆ ಈಗ ಅವಳು ಯುದ್ಧದ ಭಾಗವಾಗಿಲ್ಲ ಎಂದು ಮುಲಿಯಾಸಿಯಾ ಹೇಳಿದ್ದಾರೆ.
ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ಮತ್ತು ಅವರ ಪತ್ನಿ ಅಂಜಲಿಬೆನ್ ಅವರು ಈ ಹಿಂದೆ ಇಸ್ರೇಲ್​ಗೆ ಭೇಟಿ ನೀಡಿದ ಸಮಯದಲ್ಲಿ ಟೆಲ್ ಅವೀವ್‌ನಲ್ಲಿರುವ ಜೀವಭಾಯಿ ಅವರ ನಿವಾಸಕ್ಕೆ ಭೇಟಿ ನೀಡಿದ್ದರು ಎಂದು ವಿವಿಧ ಮಾಧ್ಯಮ ವರದಿಗಳು ಮಾಡಿವೆ.(ಏಜೆನ್ಸೀಸ್​)
ಕರೊನಾ ಸಂಕಷ್ಟ ಕಾಲದಲ್ಲಿ ಊರಿಗೆ ಬಂದು ಕೃಷಿಯಲ್ಲಿ ತೊಡಗಿದ್ದ ಯುವಕರಿಗೆ ಬರಸಿಡಿಲು: ಮಳೆ, ವಿದ್ಯುತ್ ಇಲ್ಲದೆ ಕಂಗಾಲು

ಮುಂದಿನ 4 ದಿನಗಳಲ್ಲಿ ಈ ರಾಜ್ಯಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ; ಕೇರಳದಲ್ಲಿ ಯೆಲ್ಲೋ ಅಲರ್ಟ್‌

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:3 × two =
Remember me
