ಜೆರುಸಲೆಂ:ಕರೊನಾ ಲಸಿಕೆ ವಿಶ್ವದ ಹಲವು ಭಾಗಗಳಿಗೆ ತಲುಪಿದ್ದು, ಎಲ್ಲೆಡೆ ಲಸಿಕೆ ವಿತರಣೆ ಕಾರ್ಯ ಆರಂಭವಾಗಿದೆ. ಆದರೆ ಈ ಸಮಯದಲ್ಲೇ ಇಸ್ರೇಲ್​ನ ರಬ್ಬಿ (ಧಾರ್ಮಿಕ ಗುರು) ಒಬ್ಬರು ಲಸಿಕೆಯ ಬಗ್ಗೆ ವದಂತಿ ಹಬ್ಬಿಸಿದ್ದಾರೆ. ಲಸಿಕೆ ಪಡೆದರೆ ಸಲಿಂಗ ಕಾಮಿಗಳಾಗುತ್ತೀರಿ ಎನ್ನುವ ಸುಳ್ಳು ಮಾಹಿತಿಯನ್ನು ಅವರು ಕೊಟ್ಟಿದ್ದಾರೆ.
ಇದನ್ನೂ ಓದಿ:ಏಷ್ಯನ್ ಪೇಂಟ್ಸ್ ಘಟಕಕ್ಕೆ ಭೂಮಿ ಮಾರಾಟ ಮಾಡಿದರಿಗೆ ಉದ್ಯೋಗ!
ಇಸ್ರೇಲ್​ನ ರಬ್ಬಿ ಡೇನಿಯೆಲ್​ ಅಸೊರ್​ ಈ ರೀತಿ ವದಂತಿ ಹಬ್ಬಿಸಿದ್ದಾರೆ. ಲಸಿಕೆಯನ್ನು ಭ್ರೂಣದ ತಲಾಧಾರವನ್ನು ಬಳಸಿ ಮಾಡಲಾಗುತ್ತದೆ. ಭ್ರೂಣದ ತಲಾಧಾರಗಳಿಂದ ಮನುಷ್ಯನಲ್ಲಿ ವಿರುದ್ಧವಾದ ಪ್ರವೃತ್ತಿ ಉಂಟಾಗುತ್ತದೆ ಎನ್ನುವುದಕ್ಕೆ ನಮ್ಮಲ್ಲಿ ಪುರಾವೆಗಳಿವೆ. ಈ ಲಸಿಕೆ ಪಡೆದರೆ ನೀವು ಸಲಿಂಗಕಾಮಿಗಳಾಗಿ ಬದಲಾಗಿಬಿಡಬಹುದು. ಹಾಗಾಗಿ ಯಾರೂ ಲಸಿಕೆ ಸ್ವೀಕರಿಸಬೇಡಿ ಎಂದು ಅವರು ತಮ್ಮ ಅನುಯಾಯಿಗಳಿಗೆ ಹೇಳಿದ್ದಾರೆ.
ಲಸಿಕೆ ಜಾಗತಿಕವಾಗಿ ದುರುದ್ದೇಶಪೂರಿತವಾಗಿ ಮಾಡಿದ್ದಾಗಿದೆ. ಪೂರ್ತಿ ಜಗತ್ತನ್ನು ಇದರಿಂದ ಬದಲಿಸುವ ಪ್ರಯತ್ನ ಮಾಡಲಾಗುತ್ತಿದೆ. ನಮ್ಮ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಕೂಡ ಅದೇ ಉದ್ದೇಶವನ್ನು ಹೊಂದಿದ್ದಾರೆ. ಇಲ್ಲಿನ ಜನರನ್ನು ಮೈಕ್ರೋ ಚಿಪ್​ಗಳಂತೆ ಮಾಡಲು ಅವರು ಬಯಸಿದ್ದಾರೆ ಎಂದು ಅವರು ದೂರಿದ್ದಾರೆ.
ಇದನ್ನೂ ಓದಿ:PHOTO GALLERY| ರಮೇಶ್ ಪುತ್ರಿಯ ಆರತಕ್ಷತೆ ಕಾರ್ಯಕ್ರಮದಲ್ಲಿ ಸ್ಯಾಂಡಲ್​ವುಡ್ ಸಮಾಗಮ..
ಲಸಿಕೆಗಳಲ್ಲಿ ಭ್ರೂಣದ ತಲಾಧಾರವನ್ನು ಬಳಸಲಾಗುತ್ತದೆ. ಅದರಲ್ಲಿ ಹೆಚ್ಚು ಪೌಷ್ಠಿಕಾಂಶ ಇರುವುದರಿಂದ ಔಷಧಗಳಲ್ಲಿ ಬಳಸಿಕೊಳ್ಳಲಾಗುತ್ತದೆ ಹಾಗೂ ಇದು ಲೈಂಗಿಕತೆಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. (ಏಜೆನ್ಸೀಸ್​)
ಆಸೀಸ್‌ಗೆ ಸಿರಾಜ್-ಶಾರ್ದೂಲ್ ಬ್ರೇಕ್, ಅಂತಿಮ ದಿನದಾಟಕ್ಕೆ ಕುತೂಹಲ

ಹಾಸನ ಜಿಲ್ಲೆಯಲ್ಲಿ ಬಿಜೆಪಿ ಕಾರ್ಯಕರ್ತನ ಕೊಲೆ, ಬೆನ್ನಿಗೆ ಕಲ್ಲು ಕಟ್ಟಿ ಬಾವಿಗೆ ಎಸೆದ ದುಷ್ಕರ್ಮಿಗಳು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 1 =
Remember me
