ಟೆಲ್​ಅವೀವ್​:ಯಾಮಿನಾ ಪಕ್ಷದ ನಾಯಕ ನ್ತಾಲಿ ಬೆನೆಟ್​ (49) ಇಸ್ರೇಲ್​ನ ನೂತನ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸುವ ಮೂಲಕ ಬೆಂಜಮಿನ್​ ನೆತಾನ್ಯಾಹು ಅವರ 12 ವರ್ಷದ ಸುದೀರ್ ಆಳ್ವಿಕೆಯನ್ನು ಅಂತ್ಯಗೊಳಿಸಿದರು. ಕಳೆದ ಮಾರ್ಚ್​ನಲ್ಲಿ ನಡೆದ ಚುನಾವಣೆ ಬಳಿಕ ಅತಂತ್ರ ಸ್ಥಿತಿ ನಿರ್ಮಾಣವಾಗಿತ್ತು. ಸರ್ಕಾರ ಉಳಿಸಿಕೊಳ್ಳಲು ನೆತಾನ್ಯಾಹು ಹರಸಾಹಸಪಟ್ಟರೂ, ಕೊನೆಗೆ ಪ್ರತಿಪಕ್ಷಗಳ ಮೈತ್ರಿಕೂಟಕ್ಕೆ ಅಧಿಕಾರದ ಚುಕ್ಕಾಣಿ ಸಿಕ್ಕಿದೆ.
ದೇಶದಲ್ಲಿ ವಿಭಿನ್ನ ವಿಚಾರಧಾರೆಯವರ ಜೊತೆಗೂಡಿಸಿ ಆಡಳಿತ ನಡೆಸುವುದಾಗಿ ಬೆನೆಟ್​ ಅಧಿಕಾರ ಸ್ವೀಕರಿಸಿದ ಬಳಿಕ ಹೇಳಿದ್ದಾರೆ. ಹೀಗಾಗಿ ಅವರ ಆಡಳಿತ ಹೇಗಿರಲಿದೆ ಎಂಬ ಬಗ್ಗೆ ಜಾಗತಿಕ ಮಟ್ಟದಲ್ಲಿ ಕುತೂಹಲ ಮೂಡಿಸಿದೆ. ಇಸ್ರೇಲ್​ ಸಂಸತ್ತು 120 ಸದಸ್ಯರನ್ನು ಹೊಂದಿದೆ. ಇವರಲ್ಲಿ 60 ಸದಸ್ಯರ ಬೆಂಬಲ ಪಡೆಯುವ ಮೂಲಕ ಬೆನೆಟ್​ ಪ್ರಧಾನಿಯಾಗಿದ್ದಾರೆ. ಬಹುಮತ ಸಾಬೀತು ವೇಳೆ ಒಬ್ಬ ಸದಸ್ಯ ಗೈರಾಗಿದ್ದರು. ಕನಿಷ್ಠ ಬಹುಮತದಲ್ಲಿ ಸರ್ಕಾರ ರಚನೆ ಆಗಿರುವ ಕಾರಣ ಬೆನೆಟ್​ ಸುಗಮವಾಗಿ ಆಡಳಿತ ನಡೆಸಬಲ್ಲರೇ ಎಂಬ ಪ್ರಶ್ನೆಯೂ ಎದುರಾಗಿದೆ. ಅವರ ಸಂಪುಟದಲ್ಲಿ 27 ಸಚಿವರಿದ್ದಾರೆ. ಇವರಲ್ಲಿ 9 ಮಂದಿ ಮಹಿಳೆಯರು. ಯಹೂದಿ ಸಮುದಾಯಕ್ಕೆ ಸೇರಿದ ಬೆನೆಟ್​, ತಮ್ಮ ಸಂಪುಟದಲ್ಲಿ ಎಲ್ಲ ಸಮುದಾಯ, ವಿಚಾರಧಾರೆಯ ನಾಯಕರಿಗೂ ಸ್ಥಾನ ನೀಡಿದ್ದಾರೆ.
ಸೇನೆಯಲ್ಲಿ ಕಮಾಂಡೋ ಹುದ್ದೆಯಿಂದ ಪ್ರಧಾನಿವರೆಗೆಬೆನೆಟ್​ ಇಸ್ರೇಲ್​ ಸೇನೆಯಲ್ಲಿ ಕಮಾಂಡರ್​ ಆಗಿದ್ದರು. 2006ರಲ್ಲಿ ಅವರು ನೆತಾನ್ಯಾಹು ನೇತೃತ್ವದಲ್ಲಿ ರಾಜಕೀಯ ಪ್ರವೇಶಿಸಿದರು. ಬಳಿಕ ಅವರನ್ನು ಸೇನೆಯ ಮುಖ್ಯಸ್ಥರನ್ನಾಗಿ ಮಾಡಲಾಯಿತು. 2012ರಲ್ಲಿ ಅವರು ಮೊದಲ ಬಾರಿಗೆ ಚುನಾವಣೆಗೆ ಸ್ಪಧಿರ್ಸಿ ನ್ಯೂ ರೈಟ್​ ಹಾಗೂ ಯಾಮಿನಾ ಪಕ್ಷದಿಂದ ಸ್ಪಧಿರ್ಸಿ ಸಂಸದರಾದರು. ಅವರು ಒಟ್ಟು 5 ಬಾರಿ ಇಸ್ರೇಲ್​ ಸಂಸದರಾಗಿ ಆಯ್ದೆಯಾಗಿದ್ದಾರೆ. 2019& 20ರಲ್ಲಿ ರಕ್ಷಣಾ ಸಚಿವರಾಗಿ ಕೆಲಸ ಮಾಡಿದ ಅವರು, ತಂತ್ರಜ್ಞಾನ ಸಂಬಂಧಿತ ಉದ್ಯಮವನ್ನೂ ನಡೆಸುತ್ತಿದ್ದಾರೆ.
ಕೇವಲ 7 ಕ್ಷೇತ್ರ ಗೆದ್ದರೂ ಪ್ರಧಾನಿಯಾದರು!ಇಸ್ರೆಲ್​ನಲ್ಲಿ ಕಳೆದ 2 ವರ್ಷದಿಂದ ರಾಜಕೀಯ ಅಸ್ತಿರತೆ ಇದೆ. ಈ ಎರಡು ವರ್ಷದಲ್ಲಿ 4 ಬಾರಿ ಚುನಾವಣೆ ನಡೆದಿದೆ. ಬೆನೆಟ್​ ಅವರ ಯಾಮಿನಾ ಪಕ್ಷ ಕೇವಲ 7 ಕ್ಷೇತ್ರದಲ್ಲಿ ಗೆದ್ದಿದೆ. ಅದರಲ್ಲೂ ಒಬ್ಬ ಸಂಸದ ಬೆನೆಟ್​ ನಡೆ ಬಗ್ಗೆ ಅಸಮಾಧಾನಗೊಂಡು ರಾಜೀನಾಮೆ ನೀಡಿದ್ದಾರೆ. ಆದರೂ ಪ್ರತಿಪಕ್ಷಗಳನ್ನು ಒಂದುಗೂಡಿಸಿ ಬೆನೆಟ್​ ಪ್ರಧಾನಿ ಹುದ್ದೆಗೆ ಏರಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅಭಿನಂದನೆಇಸ್ರೇಲ್​ ನೂತನ ಪ್ರಧಾನಿಯಾಗಿ ಬೆನೆಟ್​ ಅಧಿಕಾರ ಸ್ವೀಕರಿಸುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿ ಟ್ವೀಟ್​ ಮೂಲಕ ಅಭಿನಂದನೆ ತಿಳಿಸಿದ್ದಾರೆ. ಉಭಯ ದೇಶಗಳ ರಾಜತಾಂತ್ರಿಕ ಸಂಬಂಧ 30 ವರ್ಷ ಪೂರೈಸಿದ ಈ ಸಂದರ್ಭದಲ್ಲಿ ಬೆನೆಟ್​ ಅವರನ್ನು ಭೇಟಿ ಮಾಡಲು ಉತ್ಸುಕನಾಗಿದ್ದೇನೆ. ಉಭಯ ದೇಶಗಳ ವ್ಯೂಹಾತ್ಮಕ ಸಂಬಂಧ ಇನ್ನಷ್ಟು ಹೆಚ್ಚಲಿದೆ ಎಂದು ಪ್ರಧಾನಿ ಹೇಳಿದ್ದಾರೆ. ಇದೇ ವೇಳೆ 12 ವರ್ಷ ಅಧಿಕಾರ ಪೂರೈಸಿದ ನೆತಾನ್ಯಾಹು, ಭಾರತದ ಜತೆಗಿನ ಸಂಬಂಧಕ್ಕೆ ವೈಯಕ್ತಿಕ ಆದ್ಯತೆ ನೀಡಿದ ಹಿನ್ನೆಲೆಯಲ್ಲಿ ಅವರಿಗೆ ಕೃತಜ್ಞತೆಯನ್ನೂ ಮೋದಿ ತಿಳಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 + 2 =
Remember me
