ಜೆರುಸಲೆಮ್:ಇಲ್ಲಿಯ ವಿದ್ಯಾರ್ಥಿಗಳು ಮತ್ತು ಶಾಲಾ ಸಿಬ್ಬಂದಿಗೆ ಕರೊನಾ ವೈರಸ್ ಸೋಂಕು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಡಜನ್​ಗಟ್ಟಲೆ ಶಿಕ್ಷಣ ಸಂಸ್ಥೆಗಳನ್ನು ಮುಚ್ಚಲಾಗಿದ್ದು, ಗುರುವಾರ 20 ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳನ್ನು ಬಂದ್ ಮಾಡಲು ಒತ್ತಾಯಿಸಲಾಗಿದೆ.ಇಸ್ರೇಲ್​​​ನಲ್ಲಿ ಮತ್ತೆ ವಕ್ಕರಿಸಿದ ಕರೊನಾ ವೈರಸ್​​​ನಿಂದಾಗಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರೇ ಹೆಚ್ಚು ಭಾದೆಗೊಳಗಾದಂತಾಗಿದೆ.ಅಂದಾಜು 9 ಸಾವಿರ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಐಸೋಲೇಷನ್​​ನಲ್ಲಿದ್ದಾರೆ. ಇತ್ತೀಚೆಗೆ ಜೆರುಸಲೆಮ್, ಟೆಲ್ ಅವೀವ್, ಪೆಟಾಚ್ ಟಿಕ್ವಾ, ಎಶ್ಡೋಡ್, ಟಜ್​​ಫಸ್ ಮತ್ತು ಸರ್​​ಡೋಟ್ ಪ್ರದೇಶಗಳಲ್ಲಿ ಶಾಲೆಗಳನ್ನು ಮುಚ್ಚಲಾಗಿದೆ.ಆರೋಗ್ಯ ಸಚಿವ ಯೂಲಿ ಎಡೆಲ್​​ಸ್ಟೈನ್, ಜೆರುಸಲೆಮ್​​ನಲ್ಲಿ ಮಾತ್ರ ಮಾಧ್ಯಮಿಕ ಮತ್ತು ಪ್ರೌಢಶಾಲೆಗಳನ್ನು ಮಾತ್ರ ಮುಚ್ಚಲು ಶಿಫಾರಸು ಮಾಡುತ್ತಿದ್ದರೆ, ಅವರ ವೃತ್ತಿಪರ ಸಿಬ್ಬಂದಿ ಅವುಗಳನ್ನು ದೇಶಾದ್ಯಂತ ಮುಚ್ಚಲು ಸಲಹೆ ನೀಡುತ್ತಿದ್ದಾರೆ.
ಇದನ್ನೂ ಓದಿ:ಮಾಲ್, ಹೋಟೆಲ್ ದೇಗುಲ ಎಂಟ್ರಿ ಟೈಟ್: ವೃದ್ಧರು, ಮಕ್ಕಳು, ಗರ್ಭಿಣಿಯರಿಗಿಲ್ಲ ಪ್ರವೇಶ
ಏತನ್ಮಧ್ಯೆ, ಜೂನ್ 8 ರಂದು ಇಂಟರ್ಸಿಟಿ ರೈಲು ಮತ್ತೆ ಪೂರ್ಣ ಪ್ರಮಾಣದಲ್ಲಿ ಪ್ರಾರಂಭವಾಗಲಿದೆ ಎಂದು ಆರೋಗ್ಯ ಮತ್ತು ಸಾರಿಗೆ ಸಚಿವಾಲಯಗಳು ಘೋಷಿಸಿವೆ.ಸಾರಿಗೆ ಸಚಿವೆ ಮಿರಿ ರೆಗೆವ್ ಅವರು ಹೇಳಿಕೆ ನೀಡಿದ್ದು, ರೈಲು ವ್ಯವಸ್ಥೆ ಆರಂಭಿಸುವುದರಿಂದ ಬಸ್ ಸಂಚಾರ ವ್ಯವಸ್ಥೆಯ ಮೇಲಿನ ಒತ್ತಡವನ್ನು ನಿವಾರಿಸಲು ಸಹಾಯ ವಾಗುವುದಷ್ಟೇ ಅಲ್ಲದೆ ಸಾರ್ವಜನಿಕರಿಗೆ ಸುಲಭ ಸಂಚಾರಕ್ಕೆ ಅನುವು ಮಾಡಿಕೊಟ್ಟಂತಾಗುತ್ತದೆ ಎಂದಿದ್ದಾರೆ.“ಸಾಮಾಜಿಕ ಅಂತರ ನಿಯಮ ಪಾಲನೆ, ಮಾಸ್ಕ್ ಕಡ್ಡಾಯಗೊಳಿಸುವಿಕೆ ಮತ್ತು ನಿಲ್ದಾಣದ ಸಂಕೀರ್ಣದಲ್ಲಿ ಪ್ರಯಾಣಿಕರಿಗೆ ಥರ್ಮಲ್ ಸ್ಕ್ರೀನಿಂಗ್ ಸೇರಿದಂತೆ ಆರೋಗ್ಯ ಸಚಿವಾಲಯದ ನಿಯಮಗಳನ್ನು ಪಾಲಿಸುತ್ತೇವೆ ಎಂದು ಅವರು ಹೇಳಿದರು.
27 ಸಾವಿರ ಕ್ಯಾಬ್ ಡ್ರೈವರ್​​ಗಳಿಗೆ ರಾಜ್ಯ ಸರ್ಕಾರದ ಪರಿಹಾರ ಧನ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 − 5 =
Remember me
