ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಕೈಗೊಂಡಿರುವ ಮಹತ್ವದ ಯೋಜನೆಯಾದ ಚಂದ್ರಯಾನ-3ರ ಅಂತಿಮ ರೋಚಕ ಕ್ಷಣಗಳ ನಿರೀಕ್ಷೆಯಲ್ಲಿ ದೇಶ ಕಾತರದಿಂದ ಕಾಯುತ್ತಿದೆ.
ಚಂದ್ರಯಾನ-3 ಯಶಸ್ವಿಯಾಗಲಿ ಎಂದು ತಿರುಪತಿಯಲ್ಲಿ ಪೂಜೆ ಮಾಡಲಾಗಿತ್ತು. ಆ ಬಳಿಕ ಮೊನ್ನೆ ಕುಕ್ಕೆ ಶ್ರೀಸುಬ್ರಹಣ್ಯ ದೇವಸ್ಥಾನದಲ್ಲೂ ಪೂಜೆ ನಡೆದಿತ್ತು. ಮಾತ್ರವಲ್ಲ ನಿನ್ನೆಯಿಂದ ಹಲವರು ಚಂದ್ರಯಾನ ಯಶಸ್ವಿಯಾಗಲಿ ಎಂದು ಪೂಜೆ ಮಾಡಿದ್ದಾಗಿ ಹೇಳಿಕೊಂಡಿದ್ದಾರೆ.
ಭಾರತದ ಸಿಂಗಾಪುರ ಹೈ ಕಮಿಷನರ್ ಕೂಡ ‘ಕೋಟ್ಯಂತರ ಭಾರತೀಯರು ಚಂದ್ರಯಾನ-3 ಯಶಸ್ವಿ ಆಗಲಿ ಎಂದು ಪ್ರಾರ್ಥನೆ ಮಾಡುತ್ತಿದ್ದಾರೆ. ನಾನೂ ಅವರೊಂದಿಗೆ ಜೊತೆಯಾಗುತ್ತಿದ್ದೇನೆ’ ಎಂದು ಅಗರಬತ್ತಿ ಹಚ್ಚಿ ಪ್ರಾರ್ಥಿಸಿದ್ದಾರೆ.
ಇದನ್ನೂ ಓದಿ:ಟ್ರೋಲ್ ಮಾಡುವವರಿಗೆ ಗೊತ್ತಿರುವುದು ಒಂದೇ ಚಾಯ್​ವಾಲಾ: ನಟ ಪ್ರಕಾಶ್ ರಾಜ್​
ಚಂದ್ರಯಾನ-3 ಯಶಸ್ಸಿಗೆ ಜನರು ಪ್ರಾರ್ಥಿಸುತ್ತಿದ್ದು, ಈ ಸಲ ಯಶಸ್ವಿ ಆಗಿಯೇ ಆಗುತ್ತದೆ ಎಂದು ತಮ್ಮದೇ ಲೆಕ್ಕಾಚಾರದಲ್ಲಿ ತೊಡಗಿಕೊಂಡಿದ್ದಾರೆ. ಆ ನಿಟ್ಟಿನಲ್ಲಿ ಕೆಲವರು ಹೀಗೂ ಯೋಚನೆ ಮಾಡುತ್ತಿರುವುದು ಕಂಡುಬಂದಿದೆ.
ಇಸ್ರೋ ಅಧ್ಯಕ್ಷ ಡಾ.ಎಸ್.ಸೋಮನಾಥ್ ಅವರ ಹೆಸರಿನೊಂದಿಗೆ ತಳುಕು ಹಾಕಿಕೊಂಡು ಕೆಲವರು ಚಂದ್ರಯಾನದ ಯಶಸ್ಸಿನ ಕುರಿತು ಕಾತರದಿಂದ ಕಾಯುತ್ತಿದ್ದಾರೆ. ಇಸ್ರೋ ಅಧ್ಯಕ್ಷರ ಹೆಸರಿನಲ್ಲಿರುವ ಸೋಮ ಎಂದರೆ ಚಂದ್ರ ಎಂದರ್ಥ. ಸೋಮನಾಥ ಎಂದರೆ ಚಂದ್ರನಿಗೆ ಅಧಿಪತಿ, ಇದೊಂದು ಆಶಾದಾಯಕ ಕಾಕತಾಳೀಯ ಎಂದು ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಚಂದ್ರಯಾನ-3: ರೋಮಾಂಚಕ ಆಗಿರಲಿವೆ ಆ ಇಪ್ಪತ್ತು ನಿಮಿಷಗಳು!

ಒಬ್ಬನಲ್ಲೇ ಇದ್ದವು ಎರಡೂ ಜನನಾಂಗ; ದೇಶದಲ್ಲಿ ಇಂಥ ಇಪ್ಪತ್ತು ಪ್ರಕರಣ!

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:20 − sixteen =
Remember me
