ನವದೆಹಲಿ:ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ)ಯ ಮುಖ್ಯಸ್ಥ ಎಸ್​. ಸೋಮನಾಥ್​ ಅವರ ತಿಂಗಳ ಸಂಬಳದ ಮಾಹಿತಿಯನ್ನು ಆರ್​ಪಿಜಿ ಗ್ರೂಪ್​ ಮುಖ್ಯಸ್ಥ ಹರ್ಷ ಗೋಯೆಂಕ ಅವರು ತಮ್ಮ ಎಕ್ಸ್​ ಖಾತೆಯಲ್ಲಿ ಶೇರ್​ ಮಾಡಿಕೊಂಡಿರುವುದು ಜಾಲತಾಣದಲ್ಲಿ ಭಾರೀ ಚರ್ಚೆಯನ್ನು ಹುಟ್ಟುಹಾಕಿದೆ.
ಇಸ್ರೋ ಚೇರ್ಮನ್​ ಸೋಮನಾಥ್​ ಅವರ ತಿಂಗಳ ಸಂಬಳ 2.5 ಲಕ್ಷ ರೂ. ಇದೆ. ಇದು ಸರಿಯೇ ಮತ್ತು ನ್ಯಾಯೋಚಿತವೇ? ಅವರಂತಹ ಜನರು ಹಣವನ್ನು ಮೀರಿದ ಅಂಶಗಳಿಂದ ಪ್ರೇರಿತರಾಗಿದ್ದಾರೆಂದು ನಾವು ಅರ್ಥಮಾಡಿಕೊಳ್ಳೋಣ. ಅವರು ಏನು ಮಾಡುತ್ತಿದ್ದಾರೋ ಅದನ್ನು ತಮ್ಮ ಉತ್ಸಾಹಕ್ಕಾಗಿ, ವಿಜ್ಞಾನ ಮತ್ತು ಸಂಶೋಧನೆಗೆ ಅರ್ಪಿಸಿಕೊಂಡಿದ್ದಾರೆ. ರಾಷ್ಟ್ರದ ಹೆಮ್ಮೆಗಾಗಿ ತಮ್ಮ ದೇಶಕ್ಕೆ ಕೊಡುಗೆ ನೀಡುತ್ತಿದ್ದಾರೆ ಮತ್ತು ತಮ್ಮ ಉದ್ದೇಶಗಳನ್ನು ಸಾಧಿಸುವುದೇ ಅವರ ವೈಯಕ್ತಿಕ ನೆರವೇರಿಕೆಗಳಾಗಿವೆ. ಅವರಂತ ಸಮರ್ಪಣಾ ಮನೋಭಾವವುಳ್ಳ ಜನರ ಮುಂದೆ ನಾನು ತಲೆಬಾಗುತ್ತೇನೆ ಎಂದು ಹರ್ಷ ಗೋಯೆಂಕ ಎಕ್ಸ್​ನಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ:ಕೇರಳದಲ್ಲಿ ನಿಪಾ ವೈರಸ್: ಏಳು ಕಂಟೇನ್ಮೆಂಟ್ ಝೋನ್ ಘೋಷಣೆ, ಯಾವುದಕ್ಕೆ ಅನುಮತಿ, ಯಾವುದಕ್ಕೆ ಇಲ್ಲ?
Chairman of ISRO, Somanath’s salary is Rs 2.5 lakhs month. Is it right and fair? Let’s understand people like him are motivated by factors beyond money. They do what they do for their passion and dedication to science and research, for national pride to contribute to their…
— Harsh Goenka (@hvgoenka)September 11, 2023
ಹರ್ಷ ಗೋಯೆಂಕ ಅವರ ಈ ಒಂದು ಅಭಿಪ್ರಾಯ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಉದ್ಯಮಿಯ ಅಭಿಪ್ರಾಯವನ್ನು ಮೆಚ್ಚಿಕೊಂಡಿದ್ದಾರೆ. ಪ್ರತಿ ತಿಂಗಳು 25 ಲಕ್ಷ ರೂ. ಸಂಬಳವಾದರೂ ನೀಡಬೇಕು ಎಂದು ಕೆಲವರು ಆಗ್ರಹಿಸಿದ್ದಾರೆ. ಹೆಚ್ಚಿನ ಸಂಬಳಕ್ಕೆ ಇಸ್ರೋ ವಿಜ್ಞಾನಿಗಳು ಅರ್ಹರು ಎಂದು ಬೆಂಬಲ ಸೂಚಿಸಿದ್ದಾರೆ.
ಇದನ್ನೂ ಓದಿ:“ಮದುವೆಯಾಗಲು ವರ ಬೇಕಾಗಿದ್ದಾನೆ”..ಬೋರ್ಡ್ ಹಿಡಿದು ರಸ್ತೆಗಿಳಿದ ಯುವತಿ.. ಅರ್ಧ ಗಂಟೆ ನಂತರ ಏನಾಯ್ತು ಗೊತ್ತಾ?
ಒಂದು ವೇಳೆ ಇಸ್ರೋ ಖಾಸಗಿ ಕಂಪನಿಯಾಗಿ, ನೀವು ಇಸ್ರೋ ಓನರ್​ ಆಗಿದ್ದರೆ ನೀವು ಎಷ್ಟು ಸಂಬಳ ನೀಡುತ್ತಿದ್ದೀರಿ ಎಂದು ನೆಟ್ಟಿಗನೊಬ್ಬ ಹರ್ಷ ಗೋಯೆಂಕ ಅವರನ್ನು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಉತ್ತರಿಸಿರುವ ಅವರು 5 ಕೋಟಿ ರೂಪಾಯಿ ನೀಡುತ್ತಿದೆ ಎಂದು ಹೇಳಿದ್ದಾರೆ.
5 cr
— Harsh Goenka (@hvgoenka)September 12, 2023

ಅವರಿಗೆ ಸಂಬಳ ಕಡಿಮೆ ಇರಬಹುದು, ಆದಾಗ್ಯೂ, ಅವರಿಗೆ ಉಚಿತ ವಸತಿ, ಡ್ರೈವರ್‌ನೊಂದಿಗೆ ಕಾರು ಮತ್ತು ಉಚಿತ ಪ್ರಯಾಣ ಇತ್ಯಾದಿಗಳಂತಹ ಬಹಳಷ್ಟು ಸೇವೆಗಳನ್ನು ಒದಗಿಸಲಾಗಿದೆ ಎಂದು ನಾನು ಭಾವಿಸುತ್ತೇನೆಂದು ಮತ್ತೊಬ್ಬ ನೆಟ್ಟಿಗ ಕಾಮೆಂಟ್​ ಮಾಡಿದ್ದಾರೆ. ಹೀಗೆ ಸಾಕಷ್ಟು ಮಂದಿ ಕಾಮೆಂಟ್​ಗಳ ಸುರಿಮಳೆಗೈದಿದ್ದು, ಚರ್ಚೆ ಬಹಳ ಜೋರಾಗಿ ನಡೆದಿದೆ.(ಏಜೆನ್ಸೀಸ್​)
ಅಪಘಾತದಲ್ಲಿ ಬಾಗಲಕೋಟೆ ವೃದ್ಧೆ ಸಾವು: ಪೊಲೀಸ್​ ತನಿಖೆಯಲ್ಲಿ ಮೊಮ್ಮಗನ ಕರಾಳ ಮುಖ ಬಯಲು

‘ಶೋಲೆ’ ನಟ ಬೀರ್​​​ಬಲ್ ಖೋಸ್ಲಾ ನಿಧನ, ಕಂಬನಿ ಮಿಡಿದ ಸಿನಿ ತಾರೆಯರು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen − two =
Remember me
