ಬೆಂಗಳೂರು:ಚಂದ್ರನ ಶಿಕಾರಿಗೆ ಹೊರಟಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಕೇಂದ್ರ (ಇಸ್ರೋ)ದ ಗಗನನೌಕೆ ಚಂದ್ರಯಾನ-3 ಚಂದ್ರನಿಗೆ ಮತ್ತಷ್ಟು ಹತ್ತಿರವಾಗಿದೆ. ಚಂದ್ರನ ಕಕ್ಷೆಯಲ್ಲಿ ಸುತ್ತುತ್ತಿರುವ ಚಂದ್ರಯಾನ-3 ಚಂದ್ರನಿಂದ ಕೇವಲ 1437 ಕಿ.ಮೀ. ದೂರದಲ್ಲಿದೆ. ಇನ್ನೊಂದು ವಾರದಲ್ಲಿ ಇದು 100 ಕಿ.ಮೀ. ಇಳಿಯಲಿದೆ ಎಂದು ಇಸ್ರೋ ತಿಳಿಸಿದೆ.
ಆಗಸ್ಟ್​ 1ರಂದು ಭೂಕಕ್ಷೆಯನ್ನು ತೊರೆದ ಚಂದ್ರಯಾನ ನೌಕೆ, ಆಗಸ್ಟ್​ 5ರಂದು ಚಂದ್ರನ ಕಕ್ಷೆಗೆ ಪ್ರವೇಶ ಪಡೆಯಿತು. ಅಂದಿನಿಂದ ಇಸ್ರೋ ಆರ್ಬಿಟ್​ ರಿಡಕ್ಷನ್​ ಮಾನ್ಯುವರ್ಸ್​ ಮಾಡುತ್ತಿದ್ದು, ನೌಕೆಯ ಅಂತರವನ್ನು ಕಡಿತಗೊಳಿಸುತ್ತಿದೆ. ಇತ್ತೀಚೆಗಷ್ಟೇ ಮತ್ತೊಂದು ಹಂತದ ರಿಡಕ್ಷನ್​ ಮಾನ್ಯುವರ್ಸ್​ ಅನ್ನು ಯಶಸ್ವಿಯಾಗಿ ಮುಗಿಸಿದೆ. ಆಗಸ್ಟ್​ 14 ಮತ್ತು 15ಕ್ಕೆ ಈ ಪ್ರಕ್ರಿಯೆಯು ಇನ್ನೂ ಎರಡು ಬಾರಿ ಪೂರ್ಣಗೊಳ್ಳಲಿದೆ.
ಈವರೆಗೂ ಯೋಜನೆಯಂತೆಯೇ ಚಂದ್ರಯಾನ-3 ನೌಕೆ ಸರಾಗವಾಗಿ ಸಾಗುತ್ತಿದೆ ಎಂದು ಇಸ್ರೋ ತಿಳಿಸಿದೆ. ಆದರೆ ಈ ಮಿಷನ್​ ಪೂರ್ಣಗೊಳ್ಳಬೇಕಾದರೆ, ಚಂದ್ರನ ಮೇಲೆ ಮೃದುವಾಗಿ ಲ್ಯಾಂಡ್​ ಆಗಬೇಕಿರುವುದು ತುಂಬಾ ಮುಖ್ಯ. ಈ ತಿಂಗಳ 23ರಂದು ಸಾಫ್ಟ್​ ಲ್ಯಾಂಡಿಂಗ್​ಗೆ ಪ್ರಯತ್ನ ಮಾಡುತ್ತೇವೆ ಎಂದು ಇಸ್ರೋ ತಿಳಿಸಿದೆ.
ಇದನ್ನೂ ಓದಿ:ನಾನು ಸಲಿಂಗಕಾಮಿ ಅಲ್ಲ ಎನ್ನುತ್ತಲೇ ಕಟ್ಟಡದಿಂದ ಹಾರಿದ ವಿದ್ಯಾರ್ಥಿ! ಹಾಸ್ಟೆಲ್‍ನಲ್ಲಿ ಅಂದು ಆಗಿದ್ದೇನು?
ಚಂದ್ರಯಾನ-2 ಮಿಷನ್​ ಲ್ಯಾಂಡಿಂಗ್​ ವೇಳೆಯೇ ವಿಫಲವಾಗಿತು. ಲ್ಯಾಂಡರ್​ ಇನ್ನೇನು ಚಂದ್ರನ ಮೇಲೆ ಇಳಿಯಬೇಕು ಅನ್ನುವಷ್ಟರಲ್ಲಿ ಪತನಗೊಂಡು ಸಂಪರ್ಕ ಕಡಿದುಕೊಂಡಿತು. ಇದರಿಂದ ಚಂದ್ರಯಾನ-2 ಯೋಜನೆ ವಿಫಲವಾಯಿತು. ಇದರಿಂದ ಪಾಠ ಕಲಿತಿರುವ ಇಸ್ರೋ ಈ ಬಾರಿ ಸಾಕಷ್ಟು ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಂಡಿದೆ. ಈ ಬಾರಿ ಯಾವುದೇ ತೊಂದರೆ ಇರುವುದಿಲ್ಲ ಎಂಬ ಭರವಸೆ ವ್ಯಕ್ತಪಡಿಸಿದೆ.
ನಿರ್ಣಾಯಕ ಹಂತದಲ್ಲೂ ನೌಕೆಯ ಸೆನ್ಸಾರ್​ ಮತ್ತು ಇಂಜಿನ್​ ವಿಫಲವಾದರೂ ಚಿಂತಿಸಬೇಕಾಗಿಲ್ಲ. ಏಕೆಂದರೆ ಲ್ಯಾಂಡಿಂಗ್ ಯಶಸ್ವಿಯಾಗುವ ರೀತಿಯಲ್ಲಿ ಹೊಸ ಮಾದರಿಯನ್ನು ವಿನ್ಯಾಸಗೊಳಿಸಲಾಗಿದೆ. ಒಂದು ವೇಳೆ ಚಂದ್ರನ ಮೇಲೆ ಭಾರತ ಸಾಫ್ಟ್​ ಲ್ಯಾಂಡ್​ ಮಾಡಿದ್ದಲ್ಲಿ, ಅಮೆರಿಕ, ಚೀನಾ, ರಷ್ಯಾ ಮತ್ತು ಫ್ರಾನ್ಸ್​ ಸಾಲಿಗೆ ಭಾರತವೂ ಸೇರಿಕೊಳ್ಳಲಿದೆ.
ಅಂದಹಾಗೆ ಚಂದ್ರಯಾನ-3 ನೌಕೆಯನ್ನು ಜುಲೈ 14ರಂದು ಆಂಧ್ರ ಪ್ರದೇಶದ ಶ್ರೀಹರಿಕೋಟದ ಸತೀಶ್​ ಧವನ್​ ಉಡಾವಣಾ ಕೇಂದ್ರದಿಂದ ಉಡಾವಣೆ ಮಾಡಲಾಯಿತು.(ಏಜೆನ್ಸೀಸ್​)
ದೆಹಲಿಯಲ್ಲಿ ಬಿಸಿಲ ಝಳ ಹೆಚ್ಚಳ; ಈ 14 ರಾಜ್ಯಗಳಲ್ಲಿ ಭಾರೀ ಮಳೆಯ ಎಚ್ಚರಿಕೆ ನೀಡಿದ ಐಎಂಡಿ

ಕಡೂರು ಕಾಂಗ್ರೆಸ್​ ಶಾಸಕರ ವಿರುದ್ಧ ವಾಟ್ಸ್​ಆ್ಯಪ್​ ಸ್ಟೇಟಸ್​ ಹಾಕಿದ ಮಹಿಳಾ ಕಾನ್ಸ್​ಟೆಬಲ್​​ ಸಸ್ಪೆಂಡ್!​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen + 13 =
Remember me
