ಬೆಂಗಳೂರು:ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಚಂದ್ರಯಾನ-3ರ ಯಶಸ್ಸಿನೊಂದಿಗೆ ಭಾರಿ ಮೆಚ್ಚುಗೆಗೆ ಪಾತ್ರವಾಗಿದೆ. ಆದರೆ ಈ ಯಶಸ್ಸು ಆಡಳಿತ ಮತ್ತು ವಿರೋಧ ಪಕ್ಷಗಳ ಮಧ್ಯೆ ಕ್ರೆಡಿಟ್​ ಸಲುವಾಗಿ ಕೆಸರೆರಚಾಟಕ್ಕೆ ಕಾರಣವಾಗಿದೆ.
ಚಂದ್ರಯಾನ-3 ನಮ್ಮ ಸರ್ಕಾರದ ಕಾಲದಲ್ಲಿ ಯಶಸ್ವಿಯಾಯಿತು ಎಂದು ಬಿಜೆಪಿಗರು, ಇಸ್ರೋ ಆರಂಭವಾಗಿದ್ದೇ ನಮ್ಮ ಸರ್ಕಾರದ ಕಾಲದಲ್ಲಿ ಎಂದು ಕಾಂಗ್ರೆಸಿಗರು ಕ್ರೆಡಿಟ್ ಗಿಟ್ಟಿಸಿಕೊಳ್ಳಲು ಹೇಳಿಕೆಗಳನ್ನು ನೀಡುತ್ತಿದ್ದಾರೆ.
ಈ ಮಧ್ಯೆ ಮುಂದಿನ ಚುನಾವಣೆಯಲ್ಲಿ ಇಸ್ರೋವನ್ನೇ ಬಿಜೆಪಿ ಚುನಾವಣಾ ಪ್ರಚಾರದ ಸಾಧನವನ್ನಾಗಿ ಬಳಸಿಕೊಳ್ಳಲಿದೆ ಎಂದು ತೃಣಮೂಲ ಕಾಂಗ್ರೆಸ್​ನ ಸಂಸದೆ ಮಹುವಾ ಮೊಯಿತ್ರಾ ಆರೋಪಿಸಿದ್ದಾರೆ.
ಇದನ್ನೂ ಓದಿ:ಮೋದಿ-ಬೆಂಬಲಿಗರ ಕಾಲೆಳೆಯುತ್ತಲೇ ಇದ್ದಾರೆ ನಟ ಪ್ರಕಾಶ್ ರಾಜ್; ಚಲನಚಿತ್ರ ರಾಷ್ಟ್ರೀಯ ಪ್ರಶಸ್ತಿ ವಿಚಾರದಲ್ಲೂ ತಕರಾರು!
ಇಸ್ರೋ ಈಗ ಬಿಜೆಪಿಯ 2024ರ ಪ್ರಚಾರದ ಸಾಧನವಾಗಿದೆ. ಚುನಾವಣೆಗೆ ಮುಂಚಿತವಾಗಿ ರಾಷ್ಟ್ರೀಯತೆಯ ಉನ್ಮಾದವನ್ನು ಪ್ರಚೋದಿಸಲು ಪ್ರತಿಯೊಂದು ತಂತ್ರವನ್ನು ಬಳಸಿಕೊಳ್ಳಲಾಗುತ್ತಿದೆ. ದಶಕಗಳ ಕಾಲದ ಭಾರತೀಯ ವೈಜ್ಞಾನಿಕ ಸಂಶೋಧನೆಯನ್ನು ಮೋದಿ ಇದ್ದರೆ ಮ್ಯಾಜಿಕ್ ಸಾಧ್ಯ ಎಂದು ಪ್ಯಾಕೇಜ್ ಮಾಡಲು ಭಕ್ತ ಮತ್ತು ಟ್ರೋಲ್ ಸೈನ್ಯವು ದಿನವಿಡೀ ಶ್ರಮಿಸುತ್ತಿದೆ. ಭಾರತೀಯರೇ ಜಾಗೃತರಾಗಿ ಎಂದಿರುವ ಈಕೆ, ನಾನು ದೇಶದ್ರೋಹಿಯಲ್ಲ ಎಂದೂ ಹೇಳಿಕೊಂಡಿದ್ದಾರೆ.
ISRO is now BJP’s 2024 campaign tool. Every mission will be used to whip up nationalistic frenzy before elections.Bhakt & troll army working 24-7 to package decades of Indian scientific research as Modi Hai Toh Mumkin Hai magic.
Wake up, India. And no, I am not anti-national.
— Mahua Moitra (@MahuaMoitra)August 26, 2023

ಇದಕ್ಕೂ ಮೊದಲು ಇನ್ನೊಂದು ಎಕ್ಸ್ ಮಾಡಿದ್ದ ಈಕೆ, ನಿಜ.. ಇಸ್ರೋ ಚಂದ್ರನ ಮೇಲೆ ಲ್ಯಾಂಡರ್ ಇಳಿಸಿದೆ, ಇದು ಮೊದಲನೆಯದ್ದೇನಲ್ಲ. ನರೇಂದ್ರ ಮೋದಿ ಚಂದ್ರನ ಮೇಲೆ ಇಳಿದಿಲ್ಲ ಅಥವಾ ಬಿಜೆಪಿ ಐಟಿ ಸೆಲ್ ಚಂದ್ರಯಾನಕ್ಕಾಗಿ ಸಂಶೋಧನೆ ಕೈಗೊಂಡಿಲ್ಲ ಎಂದು ನಾವು ಬಿಜೆಪಿಗೆ ನೆನಪಿಸಬೇಕಾಗಿದೆ ಎಂದಿದ್ದರು.
Yes, ISRO has a lander on the moon. Not the first time too.May we remind BJP that Narendra Modi has not landed on the moon. Nor has BJP IT Cell produced the research behind Chandrayaan.
Just saying.
— Mahua Moitra (@MahuaMoitra)August 26, 2023

ಮತ್ತೆ ಸುದ್ದಿಯಲ್ಲಿ ಇಸ್ರೋದವರ ಸಂಬಳ; ಈ ಸಲ ಬೇರೆಯದೇ ರೀತಿಯಲ್ಲಿ…

ಪ್ಲ್ಯಾಸ್ಟಿಕ್​ ಕಪ್​ನಷ್ಟೇ ಪೇಪರ್ ಕಪ್​ ಕೂಡ ಪರಿಸರಕ್ಕೆ ಹಾನಿಕರ; ಅಧ್ಯಯನದಲ್ಲಿ ಬಹಿರಂಗ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 3 =
Remember me
