ಚೆನ್ನೈ:ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಯ ವಿಜ್ಞಾನಿಗಳು ಶನಿವಾರ ಶ್ರೀಹರಿಕೋಟಾದ ಬಾಹ್ಯಾಕಾಶ ನಿಲ್ದಾಣದಿಂದ ಪಿಎಸ್‌ಎಲ್‌ವಿ-ಸಿ 54 ರಾಕೆಟ್‌ನಲ್ಲಿ ಭೂ ವೀಕ್ಷಣಾ ಉಪಗ್ರಹ – ಓಷನ್‌ಸ್ಯಾಟ್​ ಮತ್ತು ಇತರ ಎಂಟು ಉಪಗ್ರಹಗಳನ್ನು ಉಡಾವಣೆ ಮಾಡಿದ್ದಾರೆ.
ಚೆನ್ನೈನಿಂದ 115 ಕಿಮೀ ದೂರದಲ್ಲಿರುವ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಲ್ಲಿ ಪಿಎಸ್‌ಎಲ್‌ವಿ ರಾಕೆಟ್​ನ ಉಡಾವಣೆ ಶನಿವಾರ ಬೆಳಗ್ಗೆ 11:56ಕ್ಕೆ ನಿಗದಿಯಾಗಿತ್ತು. ಇದರ ಕೌಂಟ್​ಡೌನ್​ ಇಂದು ಬೆಳಗ್ಗೆ 10:26ಕ್ಕೆ ಆರಂಭವಾಗಿತ್ತು.
ರಾಕೆಟ್‌ನ ಪ್ರಾಥಮಿಕ ಪೇಲೋಡ್ ಓಷನ್‌ಸ್ಯಾಟ್ ಆಗಿದ್ದು, ಇದನ್ನು ಮೊದಲನೆ ಕಕ್ಷೆಯಲ್ಲಿ ಬೇರ್ಪಡಿಸಲಾಗುತ್ತದೆ. ಇತರ ಎಂಟು ನ್ಯಾನೊ-ಉಪಗ್ರಹಗಳನ್ನು ಗ್ರಾಹಕರ ಅಗತ್ಯತೆಗಳ ಆಧಾರದ ಮೇಲೆ ವಿಭಿನ್ನ ಕಕ್ಷೆಗಳಲ್ಲಿ ಇರಿಸಲಾಗುತ್ತದೆ.
ಏನಿದು ಓಷನ್​ಸ್ಯಾಟ್​?ಇದು ಒಂದು ವೀಕ್ಷಣಾ ಉಪಗ್ರಹವಾಗಿದ್ದು ಓಷನ್‌ಸ್ಯಾಟ್ ಸರಣಿಯ ಮೂರನೇ ತಲೆಮಾರಿನ ಉಪಗ್ರಹವಾಗಿದೆ. ಹೆಚ್ಚಿನ ಪೇಲೋಡ್ ಇರುವ ಓಷಿಯನ್​ಸ್ಯಾಟ್​-2, ಸಾಗರದ ಬಣ್ಣ ಮತ್ತು ಗಾಳಿಯ ವೆಕ್ಟರ್ ಡೇಟಾವನ್ನು ಗಮನಿಸಿ ದಾಖಲೆ ಮಾಡಿಕೊಳ್ಳುತ್ತದೆ. ಇದರಿಂದಾಗಿ ಸಮುದ್ರದಲ್ಲಿ ಉಂಟಾಗುವ ಬದಲಾವಣೆಗಳಿಂದ ಹವಾಮಾನ ಯಾವ ರೀತಿ ಬದಲಾಗಬಹುದು ಎಂಬುದನ್ನು ತಿಳಿದುಕೊಳ್ಳಬಹುದು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seven + four =
Remember me
