ನವದೆಹಲಿ:ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಇಂದು (ಮಾ.26) ಬೆಳಗ್ಗೆ 36 ಒನ್‌ವೆಬ್ ಉಪಗ್ರಹಗಳನ್ನು ಬಾಹ್ಯಾಕಾಶಕ್ಕೆ ಉಡಾವಣೆ ಮಾಡಿತು. ಭಾರತದ ಅತ್ಯಂತ ಭಾರದ ಉಡಾವಣಾ ನೌಕೆ ಲಾಂಚ್ ವೆಹಿಕಲ್ ಮಾರ್ಕ್ 3 (ಎಲ್​ವಿಎಂ-3) ಈ ಉಪಗ್ರಹಗಳನ್ನು ಭೂಮಿಯ ಕೆಳ ಕಕ್ಷೆಗೆ (ಲೋ ಅರ್ತ್ ಆರ್ಬಿಟ್-ಎಲ್​ಇಒ) ಕೊಂಡೊಯ್ಯಿತು.
ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆ ಮಾಡಲಾಯಿತು. ಈ ಉಡಾವಣೆಯೊಂದಿಗೆ, ಭೂಮಿಯ ಸುತ್ತ 648 ಉಪಗ್ರಹಗಳ ಗುಚ್ಛವನ್ನು ಹಾರಿಸುವ ಯುಕೆ ಕಂಪನಿಯ ಮಿಷನ್ ಪೂರ್ಣಗೊಂಡಿದೆ.
ಇದನ್ನೂ ಓದಿ:ಸಾವಿನ ಅಂಚಿನಲ್ಲಿದ್ದ ಯುವಕನ ರಕ್ಷಣೆ: ಕಾನ್​ಸ್ಟೆಬಲ್ ಸಮಯಪ್ರಜ್ಞೆಗೆ ಸಲ್ಯೂಟ್​ ಹೊಡೆಯಲೇಬೇಕು
ಉಪಗ್ರಹಗಳನ್ನು ವಿಮಾನಗಳಂತೆ ತಲಾ 12ರ ಮೂರು ಗುಂಪುಗಳಾಗಿ ವಿಂಗಡಿಸಲಾಗಿದೆ. ಅವುಗಳು ಭೂಮಿಯಿಂದ 1,200 ಕಿಲೋಮೀಟರ್ ಎತ್ತರದಲ್ಲಿ ಕಾರ್ಯಾಚರಿಸಲಿವೆ. ಈ ವಿಮಾನಗಳನ್ನು ತಲಾ ನಾಲ್ಕು ಕಿಲೋ ಮೀಟರ್ ಅಂತರದಲ್ಲಿ ಬಿಡಲಾಗುತ್ತದೆ. ಒಂದಕ್ಕೊಂದು ಡಿಕ್ಕಿ ಹೊಡೆಯುವುದನ್ನು ತಪ್ಪಿಸುವುದು ಅದರ ಉದ್ದೇಶವಾಗಿದೆ.
ಬ್ರಾಡ್​ಬ್ಯಾಂಡ್ ಸಂಪರ್ಕಒನ್​ವೆಬ್ ಗುಚ್ಛವು ಭೂಮಿಯ ಸುತ್ತ ಸುತ್ತುವ ಉಪಗ್ರಹಗಳ ಒಂದು ಜಾಲವಾಗಿದೆ. ಜಗತ್ತಿನಾದ್ಯಂತ ಬ್ರಾಡ್​ಬ್ಯಾಂಡ್ ಸಂಪರ್ಕ ಕಲ್ಪಿಸುವುದು ಇದರ ಉದ್ದೇಶವಾಗಿದೆ. ಯುಕೆ ಕಂಪನಿಯು ಉಪಗ್ರಹಗಳ ಎಲ್​ಇಒ ಗುಚ್ಛ ಅನುಷ್ಠಾನದ ಹೊಣೆ ಹೊತ್ತಿದೆ.(ಏಜೆನ್ಸೀಸ್​)

ನಂಗೇನು ನಾಚಿಕೆ ಇಲ್ಲ! ಮೋದಿ ಕುರಿತ ಹಳೇ ಟ್ವೀಟ್ ವೈರಲ್​, ಸಮರ್ಥನೆ ನೀಡಿದ ಖುಷ್ಬೂ ಸುಂದರ್

ತುಂಬಿದ ಮಾಲ್​ನಲ್ಲಿ ಯುವಕನಿಂದ ಅಶ್ಲೀಲ ವರ್ತನೆ: ಕೊನೆಗೂ ಸತ್ಯಾಂಶ ತಿಳಿಸಿದ ನಟಿ ಸಾನಿಯಾ!

ಜುಲೈನಲ್ಲಿ ಧನುಷ್​ ಜತೆ ಮದುವೆ! ನಟಿ ಮೀನಾ ಕೊಟ್ಟ ಪ್ರತಿಕ್ರಿಯೆ ಹೀಗಿದೆ….

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × one =
Remember me
