ಶ್ರೀಹರಿಕೋಟ:ಚಂದ್ರಯಾನ-3 ಬೆನ್ನಲ್ಲೇ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಇಂದು ಮತ್ತೊಂದು ರಾಕೆಟ್​ ಉಡಾವಣೆ ಮಾಡಿದೆ. ಸಿಂಗಾಪೂರದ 6 ಉಪಗ್ರಹಗಳನ್ನು ಹೊತ್ತ ಪಿಎಸ್​ಎಲ್​ವಿ-ಸಿ56 ರಾಕೆಟ್​ ಅನ್ನು​ ಇಂದು ಬೆಳಗ್ಗೆ 6.30ಕ್ಕೆ ಆಂಧ್ರ ಪ್ರದೇಶದದ ಶ್ರೀಹರಿಕೋಟಾದಲ್ಲಿರುವ ಸತೀಶ್​ ಧವನ್​ ಬಾಹ್ಯಾಕಾಶ ಕೇಂದ್ರ (ಎಸ್​ಡಿಎಸ್​ಸಿ) ದಿಂದ ಯಶಸ್ವಿಯಾಗಿ ಉಡಾವಣೆ ಮಾಡಲಾಯಿತು.
ಇಸ್ರೋ ತನ್ನ 56ನೇ ಕಾರ್ಯಾಚರಣೆಯಲ್ಲಿ ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್ ಅನ್ನು ಯಶಸ್ವಿಯಾಗಿ ಉಡಾವಣೆ ಮಾಡಿದೆ. ಸದ್ಯ ಉಡಾವಣೆ ಮಾಡಲಾಗಿರುವ ರಾಕೆಟ್​ನ ಮೇಲಿನ ಹಂತವನ್ನು ಕಡಿಮೆ ಕಕ್ಷೆಯಲ್ಲಿ ಇರಿಸಿ, ಅದರಲ್ಲಿರುವ ಉಪಗ್ರಹಗಳನ್ನು ಸ್ಥಾಪಿಸಲಾಗುತ್ತದೆ.
ಇಸ್ರೋ ಪ್ರಕಾರ PSLV-C56 ರಾಕೆಟ್​ ಅನ್ನು ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಲ್ಲಿರುವ ಮೊದಲ ಉಡಾವಣಾ ಪ್ಯಾಡ್ (FLP) ನಿಂದ ಯಶಸ್ವಿಯಾಗಿ ಉಡಾವಣೆ ಮಾಡಲಾಯಿತು. PSLV-C56 / DS-SAR ಎಂಬುದು ಸಿಂಗಾಪುರದ ST ಇಂಜಿನಿಯರಿಂಗ್‌ಗಾಗಿ ನ್ಯೂಸ್ಪೇಸ್ ಇಂಡಿಯಾ ಲಿಮಿಟೆಡ್‌ನ (NSIL) ಮೀಸಲಾದ ಕಮರ್ಷಿಯಲ್​ ಮಿಷನ್ ಆಗಿದೆ.
ಇದನ್ನೂ ಓದಿ:ಕರೊನಾ ಬಳಿಕ ಕಲಿಕೆ ಕುಸಿತ: ಶಿಕ್ಷಣ ಇಲಾಖೆ ನಡೆಸಿದ ಸಮೀಕ್ಷೆಯಲ್ಲಿ ಬಹಿರಂಗ; ಪ್ರಾಥಮಿಕ ಶಾಲೆಗಳಿಗಿಂತ ಪ್ರೌಢಶಾಲೆಗಳಲ್ಲಿ ಇಳಿಕೆ
ಈ DS-SAR ರಾಡಾರ್ ಇಮೇಜಿಂಗ್ ಅರ್ಥ್ ಅಬ್ಸರ್ವೇಶನ್ ಉಪಗ್ರಹವು, ಈ ಮಿಷನ್​ನ ಪ್ರಾಥಮಿಕ ಉಪಗ್ರಹವಾಗಿದೆ. ಇದು ಎರಡು ಆಯಾಮದ ಚಿತ್ರಗಳನ್ನು ಅಥವಾ ವಸ್ತುಗಳ ಮೂರು ಆಯಾಮದ ಪುನರ್ನಿರ್ಮಾಣಗಳನ್ನು ರಚಿಸುವ ಸಿಂಥೆಟಿಕ್​ ಅಪರ್ಚರ್​ ರಾಡಾರ್ ಹೊಂದಿದೆ. ಇದು ಸೇರಿದಂತೆ ಸಿಂಗಾಪುರಕ್ಕೆ ಸಂಬಂಧಿಸಿದ 6 ಉಗ್ರಹಗಳನ್ನು ಸಹ PSLV-C56 ರಾಕೆಟ್​ ಹೊತ್ತೊಯ್ದಿದೆ.
DS-SAR ಉಪಗ್ರಹವನ್ನು DSTA (ಸಿಂಗಾಪೂರ್ ಸರ್ಕಾರವನ್ನು ಪ್ರತಿನಿಧಿಸುತ್ತದೆ) ಮತ್ತು ST ಇಂಜಿನಿಯರಿಂಗ್ ನಡುವಿನ ಪಾಲುದಾರಿಕೆಯ ಅಡಿಯಲ್ಲಿ ಅಭಿವೃದ್ಧಿಪಡಿಸಲಾಗಿದೆ. ಈ ಉಪಗ್ರಹವು ಸ್ಥಾಪನೆಯಾಗಿ ಕಾರ್ಯಾಚರಣೆ ಆರಂಭಿಸಿದ ನಂತರ ಸಿಂಗಾಪುರ ಸರ್ಕಾರದ ವಿವಿಧ ಏಜೆನ್ಸಿಗಳು ಉಪಗ್ರಹ ಚಿತ್ರಣಗಳನ್ನು ಬಳಸಿಕೊಳ್ಳಲಿವೆ.
ST ಇಂಜಿನಿಯರಿಂಗ್ ಕಂಪನಿಯು ತಮ್ಮ ವಾಣಿಜ್ಯ ಗ್ರಾಹಕರಿಗೆ ಬಹು-ಮಾದರಿ ಮತ್ತು ಹೆಚ್ಚಿನ ಪ್ರತಿಕ್ರಿಯೆ ಚಿತ್ರಣ ಮತ್ತು ಜಿಯೋಸ್ಪೇಷಿಯಲ್ ಸೇವೆಗಳಿಗಾಗಿ ಇದನ್ನು ಬಳಸುತ್ತದೆ. DS-SAR ಇಸ್ರೇಲ್ ಏರೋಸ್ಪೇಸ್ ಇಂಡಸ್ಟ್ರೀಸ್ (IAI) ಅಭಿವೃದ್ಧಿಪಡಿಸಿದ ಸಿಂಥೆಟಿಕ್ ಅಪರ್ಚರ್ ರಾಡಾರ್ (SAR) ಪೇಲೋಡ್ ಅನ್ನು ಹೊಂದಿದೆ.(ಏಜೆನ್ಸೀಸ್​)
#WATCH| Indian Space Research Organisation (ISRO) launches its PSLV-C56 with six co-passenger satellites from Satish Dhawan Space Centre (SDSC) SHAR, Sriharikota.
(Source: ISRO)pic.twitter.com/2I1pNvKvBH
— ANI (@ANI)July 30, 2023

ಕೀಳರಿಮೆಯಿಂದಾದ ಕಿರುಕುಳ: ಆ ಕ್ಷಣ ಅಂಕಣ..

ಕರೊನಾ ಬಳಿಕ ಕಲಿಕೆ ಕುಸಿತ: ಶಿಕ್ಷಣ ಇಲಾಖೆ ನಡೆಸಿದ ಸಮೀಕ್ಷೆಯಲ್ಲಿ ಬಹಿರಂಗ; ಪ್ರಾಥಮಿಕ ಶಾಲೆಗಳಿಗಿಂತ ಪ್ರೌಢಶಾಲೆಗಳಲ್ಲಿ ಇಳಿಕೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 − 14 =
Remember me
