ನವದೆಹಲಿ:ಕೋವಿಡ್​ ಸಾಂಕ್ರಾಮಿಕದ ಕಾರಣ ಕಳೆದ ವರ್ಷ ನಿಗದಿತ ಗುರಿಗಳನ್ನು ಸಾಧಿಸಲು ಆಗದೆ ಹಲವು ಯೋಜನೆಗಳನ್ನು ಮುಂದೂಡಿದ್ದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಈ ವರ್ಷದ ಮೊದಲ ಉಡಾವಾಣೆಯಾಗಿ ಇಒಎಸ್​-04 ಉಪಗ್ರಹವನ್ನು ಅಂತರಿಕ್ಷಕ್ಕೆ ರವಾನಿಸುತ್ತಿದೆ. ಇದರ ಜತೆಗೆ ಇಸ್ಪೆ$ರ್​ಸ್ಯಾಟ್​-1 ಮತ್ತು ಐಎಸ್​ಎಸ್​-2ಟಿಡಿ ಗಳನ್ನೂ ಉಡಾವಣೆ ಮಾಡಲಾಗುತ್ತಿದೆ.
ಭೂಮಿ ಮೇಲೆ ನಿಗಾ ಇರಿಸುವ ಸರಣಿಯಲ್ಲಿ ನಾಲ್ಕನೆಯದ್ದಾದ ಇಒಎಸ್​-04 ಸ್ಯಾಟಲೈಟ್​, ಸೋಮವಾರ ನಸುಕಿನ 5.30ಕ್ಕೆ ಶ್ರೀಹರಿಕೋಟಾದಿಂದ ಉಡಾವಣೆ ಆಗಿಲಿದೆ. ಇಸ್ರೊ ಈ ವರ್ಷ ಚಂದ್ರಯಾನ-3 ಸೇರಿ 19 ಯೋಜನೆಗಳನ್ನು ಹಮ್ಮಿಕೊಂಡಿದೆ. ಕಳೆದ ಎರಡು ವರ್ಷದಲ್ಲಿ ಇಸ್ರೋದ ಮೂರು ಬಾಹ್ಯಾಕಾಶ ಯೋಜನೆಗಳು ಮಾತ್ರ ಸಲವಾಗಿವೆ. ಕಾರ್ಟೊಸ್ಯಾಟ್​ ಮಾಲಿಕೆಯ ಈ ಉಪಗ್ರಹಗಳು ಭೂ ಮೇಲ್ಮೆನ ಮಾಹಿತಿ ಒದಗಿಸುವ ಮೂಲಕ ನೆ ತಯಾರಿಗೆ ಅನುಕೂಲ ಮಾಡಿಕೊಡುತ್ತದೆ.
ಸಾಗರ, ಅರಣ್ಯ, ಪರ್ವತಗಳನ್ನು ಕರಾರುವಕ್ಕಾಗಿ ಗುರುತಿಸುವಿಕೆ. ಖನಿಜ ಸಂಪತ್ತ ಪತ್ತೆ, ಹವಾಮಾನ ಬದಲಾವಣೆಯ ಮಾಹಿತಿ, ಮಣ್ಣಿನ ಗುಣಮಟ್ಟ ಸೇರಿ ಭೂಗೋಳದ ಬಾಹ್ಯರೇಖೆಯ ಸಂಪೂರ್ಣ ಮಾಹಿತಿಯನ್ನು ಈ ಸ್ಯಾಟಲೈಟ್​ ಒದಗಿಸುತ್ತದೆ. ಇಒಎಸ್​-01 ಸ್ಯಾಟಲೈಟ್​ ಅನ್ನು 2020ರ ನವೆಂಬರ್​ನಲ್ಲಿ ಉಡಾವಣೆ ಮಾಡಲಾಯಿತು.ಇಒಎಸ್​-02 ಸಣ್ಣ ಸ್ಯಾಟಲೈಟ್​ ಆಗಿದ್ದು, ಇದು ಎಸ್​ಎಸ್​ಎಲ್​ವಿ ರಾಕೆಟ್​ನಲ್ಲಿ ಉಡಾವಣೆ ಆಗಬೇಕಿದೆ. ಇಒಎಸ್​-03 ಕಳೆದ ವರ್ಷ ಆಗಸ್ಟ್​ನಲ್ಲಿ ಉಡಾವಣೆ ಆಯಿತಾದರೂ ವಿಲವಾಯಿತು.1,710 ಕೆ.ಜಿ. ತೂಕದ ಇಒಎಸ್​-04 ಸ್ಯಾಟಲೈಟ್​ ಅನ್ನು ಭೂಮಿಯಿಂದ 529 ಕಿ.ಮೀ. ಎತ್ತರದಲ್ಲಿರುವ ಕೆಗೆ ರವಾನಿಸಲಾಗುತ್ತದೆ. 2012ರಲ್ಲಿ ಉಡಾವಣೆಯಾದ ಈಗ ಕಾರ್ಯ ಸ್ಥಗಿತಗೊಳಿಸಿರುವ ರಿಸ್ಯಾಟ್​-1 ಉಪಗ್ರಹದ ಬದಲಿಯಾಗಿ ಇಒಎಸ್​-04 ಅನ್ನು ಕಳುಹಿಸಲಾಗುತ್ತಿದೆ. ಉತ್ತಮ ಗುಣಮಟ್ಟದ ಚಿತ್ರಗಳನ್ನು ಇದು ರವಾನಿಸುತ್ತದೆ. ಇನ್​ಸ್ಪೆ$ರ್​ಸ್ಯಾಟ್​-1 ಅನ್ನು ತಿರುವನಂತಪುರದ ಭಾರತೀಯ ಬಾಹ್ಯಾಕಾಶ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆಯ ವಿದ್ಯಾಥಿರ್ ಸಿದ್ಧಪಡಿಸಿದ್ದಾನೆ. ಅಮೆರಿಕದ ಕೊಲೊರಾಡೊ ವಿವಿ ಆತನಿಗೆ ನೆರವು ನೀಡಿದೆ. ಐಎನ್​ಎಸ್​-2ಟಿಡಿ ಉಪಗ್ರಹವು ಭೂತಾನ್​ ಜತೆಗೂಡಿ ಭಾರತ ಕೈಗೊಂಡಿರುವ ಮೊದಲ ಬಾಹ್ಯಾಕಾಶ ಅನ್ವೇಷಣೆಯದ್ದಾಗಿದೆ.
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:six − 1 =
Remember me
