ಬೆಂಗಳೂರು:ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಕೈಗೊಂಡಿರುವ ಮಹತ್ವದ ಯೋಜನೆ ಚಂದ್ರಯಾನ-3 ಯಶಸ್ವಿಯಾದ ಬಳಿಕ ಇಸ್ರೋ ಸಂಸ್ಥೆ ಮತ್ತು ಅಲ್ಲಿನ ಅಧಿಕಾರಿಗಳ ಕುರಿತು ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.
ಮತ್ತೊಂದೆಡೆ ಇಸ್ರೋದವರಿಗೆ 17 ತಿಂಗಳುಗಳಿಂದ ವೇತನ ನೀಡಿಲ್ಲ ಎಂಬ ಆರೋಪ ಕೂಡ ಕೇಳಿಬಂದಿತ್ತು. ಇದೀಗ ಇಸ್ರೋದವರ ಸಂಬಳ ವಿಚಾರ ಇನ್ನೊಮ್ಮೆ ಮುನ್ನೆಲೆಗೆ ಬಂದಿದೆ. ಆದರೆ ಈ ಸಲ ಅದು ಆರೋಪ ರೀತಿಯಲ್ಲೂ ಅಲ್ಲ, ನಕಾರಾತ್ಮಕವಾಗಿಯೂ ಅಲ್ಲ, ಬದಲಿಗೆ ಸಕಾರಾತ್ಮಕವಾಗಿ ಸುದ್ದಿಯಾಗಿದೆ.
ಇಸ್ರೋದವರಿಗೆ ವೇತನವನ್ನು ಹೆಚ್ಚಿಸಬೇಕು ಎಂಬ ದನಿಯೊಂದು ಕೇಳಿಬಂದಿದೆ. ಅಷ್ಟಕ್ಕೂ ಇಂಥ ಒಂದು ಅಭಿಪ್ರಾಯ ನೀಡಿದ್ದು ಬೇರೆ ಯಾರೂ ಅಲ್ಲ, ಇಸ್ರೋ ಮಾಜಿ ಅಧ್ಯಕ್ಷ ಮಾಧವನ್ ನಾಯರ್. ಚಂದ್ರಯಾನ-3ರ ಯಶಸ್ಸಿನ ಹಿನ್ನೆಲೆಯಲ್ಲಿ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದ ಅವರು ಇಸ್ರೋ ಅಧಿಕಾರಿಗಳ ವೇತನ ಹೆಚ್ಚಳದ ಬಗ್ಗೆಯೂ ಪ್ರಸ್ತಾಪಿಸಿದ್ದಾರೆ.
ಇದನ್ನೂ ಓದಿ:ಒಬ್ಬ ಮಗನಿದ್ರೂ ಮತ್ತೆ ಗಂಡು ಮಗುವಾಗಿಲ್ಲ ಅಂತ ಮಕ್ಕಳ ಸಹಿತ ಬಾವಿಗೆ ಹಾರಿದ್ಲು; ಮೂವರು ಮಕ್ಕಳೂ ಸಾವು, ತಾಯಿ ಬಚಾವ್!
ಇಸ್ರೋದವರು ಹೆಚ್ಚಿನ ಸಂಭಾವನೆಗಾಗಿ ದನಿ ಎತ್ತುವುದಿಲ್ಲ, ಬದಲಿಗೆ ಅವರು ತಾಂತ್ರಿಕ ಸವಾಲುಗಳನ್ನು ಗುರುತಿಸಿ ಕಡಿಮೆ ಖರ್ಚಿನಲ್ಲಿ ದೊಡ್ಡ ಮೈಲಿಗಲ್ಲುಗಳನ್ನು ಸಾಧಿಸುತ್ತಾರೆ. ಇಸ್ರೋ ವಿಜ್ಞಾನಿಗಳು ತಮ್ಮ ಕುಟುಂಬ ಜೀವನ ಮರೆತು ದಿನದ 24 ಗಂಟೆ ಕೆಲಸದಲ್ಲಿದ್ದಾರೆ. ಗುರಿಯನ್ನು ಸಾಧಿಸಲು ವೈಯಕ್ತಿಕ ತ್ಯಾಗಗಳನ್ನು ಮಾಡುವ ಉತ್ಸಾಹ ಹೊಂದಿದ್ದಾರೆ. ಸಂಭಾವನೆ ಹೆಚ್ಚಳ ಮತ್ತು ಪ್ರಶಸ್ತಿಗಳ ಮೂಲಕ ಅವರ ಪ್ರಯತ್ನಗಳನ್ನು ಸರ್ಕಾರ ಗುರುತಿಸಬೇಕು. ಕಳೆದ ವೇತನ ಆಯೋಗ ಸಂಬಳ ಹೆಚ್ಚಿಸಿದ್ದರೂ ಅದು ಸಾಲದು ಎಂದಿರುವ ಮಾಧವನ್ ನಾಯರ್, ಇಸ್ರೋ ವಿಜ್ಞಾನಿಗಳ ವೇತನ ಹೆಚ್ಚಿಸಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕುಂದು-ಕೊರತೆಗಳಿದ್ದಲ್ಲಿ ಸಾರ್ವಜನಿಕರು ನೇರವಾಗಿ ಪೊಲೀಸ್ ಕಮಿಷನರ್​ ಅವರನ್ನೇ ಭೇಟಿ ಆಗಬಹುದು: ಎಲ್ಲಿ, ಯಾವಾಗ?

ಉಚಿತ ವಿದ್ಯುತ್​: ಮುಖ್ಯಮಂತ್ರಿ ಅವರಿಂದ ಮತ್ತೊಂದು ಮಹತ್ವದ ಘೋಷಣೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × 3 =
Remember me
