ಬಾಕು:ಅಜರ್‌ಬೈಜಾನ್‌ನ ಬಾಕುದಲ್ಲಿ ನಡೆದ ಐಎಸ್‌ಎಸ್‌ಎಫ್ ವಿಶ್ವಕಪ್‌ ಮಿಶ್ರ ತಂಡದ 10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಭಾರತದ ಸರಬ್ಜೋತ್ ಸಿಂಗ್ ಮತ್ತು ಟಿಎಸ್ ದಿವ್ಯಾ ಚಿನ್ನದ ಪದಕವನ್ನು ಮುಡಿಗೇರಿಸಿಕೊಂಡಿದ್ದಾರೆ.
ಸರ್ಬೀಯಾದ ದಿಗ್ಗಜ ಆಟಗಾರರಾದ ದಮಿರ್ ಮೈಕೆಕ್ ಮತ್ತು ಜೊರಾನಾ ಅರುನೋವಿಕ್​ರನ್ನು 16-14ರಿಂದ ಸೋಲಿಸಿ ಭಾರತೀಯ ಜೋಡಿ ಚಿನ್ನದ ಪದಕವನ್ನು ಗೆದ್ದಿತು. ಫೈನಲ್‌ನ ಮೊದಲ ಎರಡು ಸುತ್ತುಗಳನ್ನು ಭಾರತೀಯ ಜೋಡಿ ಗೆದ್ದ ನಂತರ ಅನುಭವಿ ಸರ್ಬಿಯಾ ತಂಡ ಒತ್ತಡಕ್ಕೆ ಸಿಲುಕಿತು. ನಂತರ ಸರ್ಬಿಯಾದ ಜೋಡಿ ಮತ್ತೆ ಪುಟಿದೆದ್ದು ಸಮಬಲವನ್ನು ಸಾಧಿಸಿತು. ಆದರೆ ಅಂತಿಮ ಸುತ್ತಿನಲ್ಲಿ ಉತ್ತಮ ಪ್ರದರ್ಶನ ತೋರಿದ ಭಾರತೀಯ ಜೋಡಿ ಚಿನ್ನದ ಪದಕಕ್ಕೆ ಮುತ್ತಿಕ್ಕಿದರು.
ಇದನ್ನೂ ಓದಿ:ಪೋಷಕರ ಬೇಜಾವಾಬ್ದಾರಿಗೆ ಪೊಲೀಸರು ಶಾಕ್; ಮಗಳು ಕಿಡ್ನಾಪ್ ಆಗಿದ್ದಾಳೆ ಎಂದುಕೊಂಡು ದೂರು!
ಐಎಸ್‌ಎಸ್‌ಎಫ್ ವಿಶ್ವಕಪ್‌ನಲ್ಲಿ ಮೊದಲ ಪದಕ ಗೆದ್ದಿರುವ ದಿವ್ಯಾ, ಈ ಮೊದಲು ಬಾಸ್ಕೆಟ್​ಬಾಲ್​ ಆಟಗಾರರಾಗಿದ್ದರು. ಅಪಘಾತವೊಂದರಲ್ಲಿ ಕೈಗೆ ಗಾಯ ಮಾಡಿಕೊಂಡಿದ್ದರಿಂದ ಬಾಸ್ಕೆಟ್​ಬಾಲ್​ಗೆ ಗುಡ್​ಬೈ ಹೇಳಿ, 2018ರಲ್ಲಿ ಶೂಟಿಂಗ್​ ಆಯ್ದುಕೊಂಡಿದ್ದರು.
ಇನ್ನೋರ್ವ ಆಟಗಾರ ಸರಬ್ಜೋತ್ ಸಿಂಗ್​ ಪ್ರಸಕ್ತ ಋತುವಿನಲ್ಲಿ ಉತ್ತಮ ಪ್ರದರ್ಶನ ತೋರಿದ್ದು, ಈ ಹಿಂದೆಯೂ ಭೋಪಾಲ್​ನಲ್ಲಿ ನಡೆದ ವಿಶ್ವಕಪ್​ನಲ್ಲಿ ಚಿನ್ನ ಗೆದ್ದಿದ್ದರು. ಆದರೆ ಕನ್ನಡತಿ ದಿವ್ಯಾಗೆ ಇದು ಮೊದಲ ಐಎಸ್‌ಎಸ್‌ಎಫ್ ವಿಶ್ವಕಪ್ ಪದಕವಾಗಿದೆ.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:six − four =
Remember me
