ಮುಂಬೈ:ಭಾರತ ಕ್ರಿಕೆಟ್​ ತಂಡದ ಲೆಗ್ ಸ್ಪಿನ್ನರ್ ಯುಜ್ವೇಂದ್ರ ಚಹಲ್ ಇದೀಗ ಮುಂಬರುವ ಐಪಿಎಲ್ 2024ರ ಆವೃತ್ತಿಗೆ ಸಜ್ಜಾಗುತ್ತಿದ್ದು, ರಾಜಸ್ಥಾನ ರಾಯಲ್ಸ್​ ತಂಡದ ಪರವಾಗಿ ಆಡುವ ಮೂಲಕ ಇಂಡಿಯನ್​ ಪ್ರೀಮಿಯರ್ ಲೀಗ್ 2024ರಲ್ಲಿ ಅದ್ದೂರಿ ಪ್ರದರ್ಶನ ನೀಡಲು ಸಕಲ ತಯಾರಿಗಳನ್ನು ನಡೆಸುತ್ತಿದ್ದಾರೆ. ಆದರೆ ಕಳೆದ ಕೆಲವು ದಿನಗಳ ಹಿಂದೆ ಅವರ ಪತ್ನಿ ಧನಶ್ರೀ ವರ್ಮಾರನ್ನು ಸಾಮಾಜಿಕ ಜಾಲತಾಣದಲ್ಲಿ ಹಿಗ್ಗಾಮುಗ್ಗಾ ಟ್ರೋಲ್ ಮಾಡಲಾಗಿತ್ತು. ಅದರ ಹಿಂದಿರುವ ಕಾರಣ ಹೀಗಿದೆ.
ಇದನ್ನೂ ಓದಿ:ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ: ಕಾಂಗ್ರೆಸ್​ಗೆ ಭ್ರಷ್ಟಾಚಾರವೇ ಆಕ್ಸಿಜನ್​: ಮೋದಿ
ಭಾರತದ ಲೆಗ್ ಸ್ಪಿನ್ನರ್ ಯುಜ್ವೇಂದ್ರ ಚಾಹಲ್ ಅವರ ಪತ್ನಿ ಧನಶ್ರೀ ವರ್ಮಾ ತಮ್ಮ ಸ್ನೇಹಿತರಾದ ನೃತ್ಯ ನಿರ್ದೇಶಕ ಪ್ರತೀಕ್ ಉಟೇಕರ್ ಅವರೊಂದಿಗೆ ತೆಗೆಸಿಕೊಂಡ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿತ್ತು. ಫೋಟೋ ಹರಿದಾಡಿದ ಬೆನ್ನಲ್ಲೇ ಚಹಲ್​ ಪತ್ನಿಯನ್ನು ತರಾಟೆಗೆ ತೆಗೆದುಕೊಂಡ ನೆಟ್ಟಿಗರು, ಹಿಗ್ಗಾಮುಗ್ಗಾ ಟ್ರೋಲ್ ಮಾಡಿ ಟೀಕಿಸಿದ್ದರು. ಸದ್ಯ ಈ ಕುರಿತು ಮೌನ ಮುರಿದಿರುವ ಧನಶ್ರೀ, ಇದು ತನ್ನ ಕುಟುಂಬಕ್ಕೆ ತುಂಬ ಘಾಸಿಮಾಡಿದೆ ಎಂದು ಹೇಳಿದ್ದಾರೆ.
ಪ್ರತೀಕ್ ಮತ್ತು ಧನಶ್ರೀ ಅವರ ಫೋಟೋ ವೈರಲ್ ಆಗುತ್ತಿದ್ದಂತೆ ಕಮೆಂಟ್ ಮುಖೇನ ಟೀಕಿಸಿದ್ದ ನೆಟ್ಟಿಗರು, ‘ಯುಜ್ವೇಂದ್ರ ಚಹಲ್ ನೆನಪಿಸಿಕೊಂಡರೆ ಪಾಪ ಅನಿಸುತ್ತೆ’, ‘ಫ್ರೆಂಡ್ ಆಗಿರಲಿ, ಯಾರೇ ಆಗಿರಲಿ ಮತ್ತೊಬ್ಬರ ಪತ್ನಿಯಾದ ಮೇಲೆ ನಿಮ್ಮ ಜವಾಬ್ದಾರಿಗಳು ನಿಮಗೆ ನೆನಪಿರಬೇಕು’ ಎಂದೆಲ್ಲಾ ಅಭಿಪ್ರಾಯಿಸಿದ್ದರು. ಕಮೆಂಟ್​ಗಳ ಸುರಿಮಳೆಯ ಬೆನ್ನಲ್ಲೇ ಪ್ರತೀಕ್ ತಮ್ಮ ಪೋಸ್ಟ್‌ನಲ್ಲಿನ ಕಾಮೆಂಟ್‌ ಆಯ್ಕೆಯನ್ನು ಮುಚ್ಚಿದ್ದರು.
ಇದನ್ನೂ ಓದಿ:ಕಾಲುದಾರಿಯಲ್ಲೇ ಜನ ಸಂಚಾರ: ಬೆಳ್ಳೇರಿ ಗ್ರಾಮಸ್ಥರ ಪರದಾಟ
ತನ್ನ ವಿರುದ್ಧದ ಟ್ರೋಲ್​ಗೆ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋ ಸಂದೇಶ ಹಂಚಿಕೊಂಡ ಧನಶ್ರೀ, ಸೋಷಿಯಲ್ ಮೀಡಿಯಾದಲ್ಲಿ ನೀವು ಮಾಡಿದ ಕಮೆಂಟ್​ಗಳು ನನ್ನ ಕುಟುಂಬಕ್ಕೆ ತುಂಬ ನೋವುಂಟು ಮಾಡಿದೆ. ಇದು ಬಹಳ ಪರಿಣಾಮ ಬೀರಿದೆ. ನಾನು ನನ್ನ ಇನ್‌ಸ್ಟಾಗ್ರಾಮ್ ಓಪನ್ ಮಾಡುವ ಮುನ್ನ ಕೆಲವು ವಿಷಯಗಳನ್ನು ಹಂಚಿಕೊಳ್ಳಬೇಕು. ಟ್ರೋಲ್​, ಕಮೆಂಟ್​ಗಳಿಂದ ನಾನು ಯಾವತ್ತು ಕುಸಿದಿಲ್ಲ ಎಂದರು.

A post shared by Dhanashree Verma (@dhanashree9)

ಆದರೆ, ಇದೇ ಮೊದಲ ಬಾರಿಗೆ ಇದು ನನಗೆ ತುಂಬ ನೋವನ್ನು ಉಂಟು ಮಾಡಿತು. ಯಾಕಂದ್ರೆ ಅದೆಲ್ಲವೂ ನನ್ನ ಕುಟುಂಬ, ಅತ್ಯಾಪ್ತರಿಗೆ ಘಾಸಿ ಮಾಡಿದ್ದರಿಂದ ಮಾತ್ರ. ಹಾಗಾಗಿ, ಕೆಲವು ದಿನಗಳಿಂದ ಇದೆಲ್ಲದರಿಂದ ದೂರ ಉಳಿಯುವುದು ಸರಿ ಅನಿಸಿತು. ನಿಮ್ಮ ಅನಿಸಿಕೆ ಅಥವಾ ಅಭಿಪ್ರಾಯಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಾಕುವ ಸ್ವಾತಂತ್ರ್ಯ ನಿಮಗಿರುವುದರಿಂದ ಇತರರ ಭಾವನೆಗಳನ್ನು ಮರೆತು ಕಮೆಂಟ್ ಮಾಡುತ್ತೀರಿ ಎಂದರು.
ಇದನ್ನೂ ಓದಿ:ಸರ್ವಧರ್ಮವನ್ನು ಗೌರವಿಸುವ ಗುಣ ಸ್ಕೌಟ್ಸ್-ಗೈಡ್ಸ್‌ನಿಂದ ಬೆಳೆಯಲಿದೆ
“ಇನ್ಮುಂದೆ ನೀವೆಲ್ಲ ಕಮೆಂಟ್ ಮಾಡುವಾಗ ಸ್ವಲ್ಪ ಹೆಚ್ಚು ಸೂಕ್ಷ್ಮವಾಗಿರಿ ಎಂದು ನಾನು ನಿಮ್ಮಲ್ಲಿ ವಿನಂತಿಸುತ್ತಿದ್ದೇನೆ” ಎಂದು ಧನಶ್ರೀ ಮನವಿ ಮಾಡಿದ್ದಾರೆ. ಸದ್ಯ ಈ ವಿಡಿಯೋ ಕೂಡ ವ್ಯಾಪಕವಾಗಿ ಹರಿದಾಡುತ್ತಿದೆ,(ಏಜೆನ್ಸೀಸ್).
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen + six =
Remember me
