ನವದೆಹಲಿ :ಲೋಕಸಭೆ ಚುನಾವಣೆ ಮುಗಿದ ನಂತರ ಎಲ್ಲಾ ಎಕ್ಸಿಟ್​ ಪೋಲ್​ಗಳು ಮೋದಿ ಸರ್ಕಾರ ಪುನರಾಗಮನವಾಗಲಿದೆ ಎಂದು ಭವಿಷ್ಯ ನುಡಿದಿವೆ. ಎಲ್ಲಾ ಎಕ್ಸಿಟ್​ ಪೋಲ್​ಗಳು ಬಿಜೆಪಿ ನೇತೃತ್ವದ ಎನ್​ಡಿಎ ಮೈತ್ರಿಕೂಟಕ್ಕೆ ದೊಡ್ಡ ಗೆಲುವು ಎಂದು ಹೇಳಿವೆ. ಆದರೆ ಬಿಜೆಪಿಗೆ ಸ್ಪಷ್ಟ ಬಹುಮತದ ಮುನ್ಸೂಚನೆ ನೀಡಿದ ಎಕ್ಸಿಟ್ ಪೋಲ್ ಫಲಿತಾಂಶಗಳನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತಳ್ಳಿಹಾಕಿದ್ದಾರೆ.
ಇದನ್ನು ಓದಿ:https://www.vijayavani.net/after-exit-polls-pm-modi-to-hold-7-meetings-today
“ಇದು ಎಕ್ಸಿಟ್ ಪೋಲ್ ಅಲ್ಲ, ಇದು ಮೋದಿ ಮೀಡಿಯಾ ಸಮೀಕ್ಷೆ, ಇದು ಅವರ ಫ್ಯಾಂಟಸಿ ಸಮೀಕ್ಷೆ” ಎಂದು ಹೇಳಿರುವ ರಾಹುಲ್​ ಗಾಂಧಿ, ಬಹುತೇಕ ಸ್ಥಾನಗಳಲ್ಲಿ ಪೈಪೋಟಿ ಏರ್ಪಟ್ಟಿದ್ದು, ಫಲಿತಾಂಶ ಬಂದ ಮೇಲೆ ಎಲ್ಲವೂ ಸ್ಪಷ್ಟವಾಗಲಿದೆ ಎಂದು ತಿಳಿಸಿದ್ದಾರೆ.

ಎಕ್ಸಿಟ್​ ಪೋಲ್​ ಸಮೀಕ್ಷೆಯನ್ನು ನಕಲಿ ಎಂದು ಬಣ್ಣಿಸಿರುವ ಕಾಂಗ್ರೆಸ್​​, ಇದು ಚುನಾವಣಾ ರಿಗ್ಗಿಂಗ್ ಅನ್ನು ಸಮರ್ಥಿಸುವ ಉದ್ದೇಶಪೂರ್ವಕ ಪ್ರಯತ್ನ ಆಗಿದೆ. ಅಲ್ಲದೆ ಪ್ರತಿಪಕ್ಷಗಳ ಮೈತ್ರಿಕೂಟದ ಕಾರ್ಯಕರ್ತರನ್ನು ಕುಗ್ಗಿಸಲು ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಆಡುತ್ತಿರುವ “ಮಾನಸಿಕ ಆಟ”ಎಂದು ಹೇಳಿದೆ.
ಅವರ ಈ ಆಟ ವಿರೋಧ ಪಕ್ಷಗಳು, ಇಸಿಐ, ಕೌಂಟಿಂಗ್ ಏಜೆಂಟ್‌ಗಳು, ರಿಟರ್ನಿಂಗ್ ಆಫೀಸರ್‌ಗಳ ಮೇಲೆ ಒತ್ತಡ ಹೇರುವ ಪ್ರಯತ್ನ ಎಂದು ಹೇಳಿದೆ. (ಏಜೆನ್ಸೀಸ್​​)
ಎಕ್ಸಿಟ್​ ಪೋಲ್​​ ಬಳಿಕ ಪ್ರಧಾನಿ ಮೋದಿ ನೇತೃತ್ವದಲ್ಲಿ 7 ಸಭೆಗಳು: ಯಾವ್ಯಾವ ವಿಷಯ ಚರ್ಚಿಸಲಿದ್ದಾರೆ ಗೊತ್ತಾ?

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:sixteen − 1 =
Remember me
