ನವದೆಹಲಿ:ರಾಹುಲ್ ಗಾಂಧಿಯವರ ಆಪ್ತರಲ್ಲಿ ಓರ್ವರಾಗಿದ್ದ ಜ್ಯೋತಿರಾದಿತ್ಯ ಸಿಂಧ್ಯಾ ಅವರ ಬಿಜೆಪಿ ಸೇರುವ ನಿರ್ಧಾರ ಮಧ್ಯಪ್ರದೇಶದ ಕಮಲನಾಥ್​ ಸರ್ಕಾರಕ್ಕೆ ಕುತ್ತು ತಂದಿದೆ.
ಸುಮಾರು ಒಂದು ವಾರದಿಂದಲೂ ಮಧ್ಯಪ್ರದೇಶ ರಾಜಕಾರಣದಲ್ಲಿ ಹೈಡ್ರಾಮಾ ನಡೆಯುತ್ತಲೇ ಇದ್ದು, ಇಂದು ಜ್ಯೋತಿರಾದಿತ್ಯ ಸಿಂಧ್ಯಾ ಅವರು ಕಾಂಗ್ರೆಸ್​ನ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಅದರ ಬೆನ್ನಲ್ಲೇ ಪಕ್ಷದಿಂದ ಉಚ್ಚಾಟಿತರಾಗಿದ್ದಾರೆ.
ಅಷ್ಟಕ್ಕೂ ಜ್ಯೋತಿರಾದಿತ್ಯ ಸಿಂಧ್ಯಾ ಅವರು ಹೀಗೆ ಪಕ್ಷ ತೊರೆಯುವ ನಿರ್ಧಾರ ಮಾಡಲು ಕಾರಣವೇನು ಎಂಬುದು ದೊಡ್ಡ ಕುತೂಹಲ. ಸೋನಿಯಾ ಗಾಂಧಿಯವರಿಗೆ ರವಾನೆ ಮಾಡಿದ ರಾಜೀನಾಮೆ ಪತ್ರದಲ್ಲಿ ಸಿಂಧ್ಯಾ ಕೆಲವು ಕಾರಣಗಳನ್ನು ವಿವರಿಸಿದ್ದು, ಅದು ಹೀಗಿದೆ…
ಕಳೆದ 18 ವರ್ಷಗಳಿಂದ ನಾನು ಕಾಂಗ್ರೆಸ್​ನಲ್ಲಿದ್ದೆ. ನನಗೀಗ ಇಲ್ಲಿಂದ ಹೊರಡುವ ಸಮಯ ಬಂದಿದೆ. ಕಳೆದ ವರ್ಷ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ರಾಜೀನಾಮೆ ನೀಡಿದಂತೆ ಇದೀಗ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೇ ರಾಜೀನಾಮ ಸಲ್ಲಿಸುತ್ತಿದ್ದೇನೆ.
ನಾನು ನನ್ನ ದೇಶ ಮತ್ತು ರಾಜ್ಯದ ಜನರಿಗೆ ಸೇವೆ ಸಲ್ಲಿಸುವ ನಿಟ್ಟಿನಲ್ಲಿ ಯಾವ ಉದ್ದೇಶ, ಗುರಿಗಳನ್ನು ಇಟ್ಟುಕೊಂಡು ಕಾಂಗ್ರೆಸ್ ಸೇರಿದ್ದೆನೋ ಅದೆಲ್ಲವೂ ಈಗಲೂ ಹಾಗೇ ಉಳಿದುಕೊಂಡಿದೆ. ಈ ಪಕ್ಷದಲ್ಲಿದ್ದರೆ ನಾನಂದುಕೊಂಡಿದ್ದನ್ನು ಮಾಡಲು ಸಾಧ್ಯವೇ ಇಲ್ಲ, ನನ್ನ ಗುರಿ ಮುಟ್ಟಲು ಆಗುವುದಿಲ್ಲ ಎಂಬ ಸತ್ಯ ಅರ್ಥವಾಗಿದೆ. ನನ್ನ ಬೆಂಬಲಿಗರು, ಕಾರ್ಯಕರ್ತರು, ಮತ ಹಾಕಿ ಗೆಲ್ಲಿಸಿದ ಜನರ ಆಶೋತ್ತರಗಳನ್ನು ಈಡೇರಿಸಬೇಕೆಂದರೆ ನನಗೆ ಒಂದು ಹೊಸ ಪ್ರಾರಂಭ ಬೇಕು ಎಂದು ನಿರ್ಧರಿಸಿದ್ದೇನೆ.
ಇನ್ನುಳಿದಂತೆ ಇಷ್ಟುದಿನ ನನಗೆ ಅವಕಾಶ ನೀಡಿದ ನಿಮಗೆ ಹಾಗೂ ಕಾಂಗ್ರೆಸ್​ನ ಎಲ್ಲ ಸಹೋದ್ಯೋಗಿಗಳಿಗೂ ಧನ್ಯವಾದಗಳು ಎಂದು ಸೋನಿಯಾ ಗಾಂಧಿಯವರಿಗೆ ಬರೆದ ರಾಜೀನಾಮೆ ಪತ್ರದಲ್ಲಿ ಸಿಂಧ್ಯಾ ತಿಳಿಸಿದ್ದಾರೆ.
ಕಳೆದ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯವಾಗಿ ಸೋತ ಬಳಿಕ ಜ್ಯೋತಿರಾದಿತ್ಯ ಸಿಂಧ್ಯಾ ತಮ್ಮ ಎಐಸಿಸಿ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ರಾಜೀನಾಮೆ ನೀಡಿದ್ದರು. ಇವರು ಪಶ್ಚಿಮ ಉತ್ತರ ಪ್ರದೇಶ ಉಸ್ತುವಾರಿಯಾಗಿ ಕಾರ್ಯ ನಿರ್ವಹಿಸಿದ್ದರು. (ಏಜೆನ್ಸೀಸ್)
ಬೆಂಗಳೂರಿನಲ್ಲಿ ಇದ್ದುಕೊಂಡೇ ಮಧ್ಯಪ್ರದೇಶ ವಿಧಾನಸಭೆ ಸ್ಪೀಕರ್​ಗೆ ರಾಜೀನಾಮೆ ಪತ್ರ ರವಾನಿಸಿದ 19 ಕಾಂಗ್ರೆಸ್ ಶಾಸಕರು

ಮೊಬೈಲ್​ನಿಂದಲೂ ಹರಡುತ್ತೆ ಕೊರೊನಾ! ತಪ್ಪಿಸೋಕೆ ಹೀಗೆ ಮಾಡಿ

ಸಿಂಧ್ಯಾ ರಾಜೀನಾಮೆ ನೀಡುತ್ತಿದ್ದಂತೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯಿಂದ ಅಚ್ಚರಿಯ ಕ್ರಮ; ಟ್ವಿಟರ್​ ಮೂಲಕ ಘೋಷಣೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 + 2 =
Remember me
