|ರುದ್ರಣ್ಣ ಹರ್ತಿಕೋಟೆಬೆಂಗಳೂರು
ಪ್ರಧಾನಿ ನರೇಂದ್ರ ಮೋದಿ ಸಂಪುಟ ಸೇರಿರುವ ರಾಜ್ಯದ ನಾಲ್ವರು ಹೊಸ ಸಚಿವರ ಎದುರು ಸವಾಲುಗಳ ರಾಶಿಯೇ ಇದ್ದು, ಹಾದಿ ಕೂಡ ಕಲ್ಲು-ಮುಳ್ಳುಗಳಿಂದಲೇ ತುಂಬಿದೆ.ಚುನಾವಣೆ ನಡೆಯಲಿರುವ ಉತ್ತರ ಪ್ರದೇಶ, ಗುಜರಾತ್ ನಂತರ ರಾಜ್ಯಕ್ಕೆ ಹೆಚ್ಚಿನ ಪ್ರಾತಿನಿಧ್ಯ ಸಿಕ್ಕಿರುವುದು ಸಂತಸದ ಸುದ್ದಿಯಾದರೂ ವಾಸ್ತವದಲ್ಲಿ ನೂತನ ಸಚಿವರ ಮುಂದಿನ ಹಾದಿ ತಂತಿ ಮೇಲಿನ ನಡಿಗೆಯಾಗಿದೆ. ಸಂಪುಟದಲ್ಲಿ ರಾಜ್ಯಕ್ಕೆ ಹೆಚ್ಚಿನ ಪ್ರಾತಿನಿಧ್ಯ ನೀಡಿರುವುದರ ಹಿಂದೆ ನಾನಾ ವ್ಯಾಖ್ಯಾನಗಳಿದ್ದರೂ ರಾಜ್ಯದ ನೂತನ ಸಚಿವರು ಸವಾಲು ನಿಭಾಯಿಸಲೇಬೇಕಾಗಿದೆ.
ವರ್ಚಸ್ಸು ವೃದ್ಧಿಗೆ ಆದ್ಯತೆ:ಸಚಿವಾಲಯಗಳಿಗೆ ಸಂಬಂಧಿಸಿದ ಸವಾಲುಗಳ ಜತೆಯಲ್ಲೇ 2 ಪ್ರಮುಖ ಜವಾಬ್ದಾರಿಗಳಿವೆ. ಮೊದಲನೆಯದು ಕೇಂದ್ರದ ವರ್ಚಸ್ಸು ವೃದ್ಧಿಗೆ ಗಮನ ಹರಿಸುವುದು. ಕೇಂದ್ರದ ಯೋಜನೆಗಳನ್ನು ಮನೆ ಮನೆಗೆ ತಲುಪಿಸುವ ಹೊಣೆಗಾರಿಕೆ, ಪಕ್ಷದ ರಾಜ್ಯ ಘಟಕ ಬಳಸಿಕೊಂಡು ಈ ಕೆಲಸಗಳನ್ನು ನಿಭಾಯಿಸಬೇಕಾಗಿದೆ. ಕೇಂದ್ರದಲ್ಲಿ 2024ಕ್ಕೆ ಮತ್ತೆ ಬಿಜೆಪಿಯನ್ನು ಅಧಿಕಾರಕ್ಕೆ ತರಬೇಕಾದರೆ ವರ್ಚಸ್ಸು ವೃದ್ಧಿ ಮುಖ್ಯವಾಗಿದೆ. ಯಾವ ಸಚಿವರಿಗೂ ಹನಿಮೂನ್ ಅವಧಿ ಇರುವುದಿಲ್ಲ. ಅನೇಕ ಪ್ರಮುಖ ಸಚಿವರಿಗೆ ಗೇಟ್ ಪಾಸ್ ನೀಡಿರುವುದು ಎಲ್ಲ ಸಚಿವರಿಗೂ ಎಚ್ಚರಿಕೆಯ ಗಂಟೆಯೇ.
ಯೋಜನೆ ಜಾರಿ ಹೊಣೆ:ರಾಜ್ಯದ ಅಭಿವೃದ್ಧಿಗೆ ಕೇಂದ್ರದಿಂದ ಹೆಚ್ಚಿನ ನೆರವು ತರುವುದು 2ನೇ ಜವಾಬ್ದಾರಿಯಾಗಿದೆ. ಎಲ್ಲ ಸಂಸದರನ್ನು ಜತೆಯಲ್ಲಿ ತೆಗೆದುಕೊಂಡು ಹೋಗುವುದು. ಕೇಂದ್ರದಲ್ಲಿ ಬಾಕಿ ಇರುವ ಜಿಎಸ್​ಟಿ ಪರಿಹಾರ ಬಿಡುಗಡೆ ಮಾಡಿಸು ವುದು, 15ನೇ ಹಣಕಾಸು ಆಯೋಗದಲ್ಲಿ ಆಗಿರುವ ಅನ್ಯಾಯ ಸರಿಪಡಿಸುವುದು, ಮೇಕೆದಾಟು ಯೋಜನೆಗೆ ಪರಿಸರ ಅನುಮತಿ, ಶಿರಾಡಿ ಘಾಟ್​ನಲ್ಲಿ ಸುರಂಗ ರಸ್ತೆ ಸೇರಿ ಬಾಕಿ ಇರುವ ಯೋಜನೆಗಳಿಗೆ ಹಸಿರುನಿಶಾನೆ ಕೊಡಿಸುವ ಕೆಲಸ ಮಾಡಬೇಕಾಗಿದೆ. ಕೇಂದ್ರದಲ್ಲಿ ಲಾಬಿ ಮಾಡುವ ವಿಚಾರದಲ್ಲಿ ರಾಜ್ಯದ ಸಂಸದರು ವಿಫಲರಾಗಿದ್ದಾರೆಂಬ ಆರೋಪ ಸುಳ್ಳಾಗಿಸಬೇಕಾದ ಜವಾಬ್ದಾರಿ ಇದೆ. ದೇವೇಗೌಡರು ಪ್ರಧಾನಿಯಾಗಿದ್ದಾಗ ಉತ್ತರ ಕರ್ನಾಟಕದ ನೀರಾವರಿ ಸ್ಥಿತಿ ಗಮನದಲ್ಲಿಟ್ಟುಕೊಂಡೇ ಯೋಜನೆ ರೂಪಿಸಿದ್ದರು. ಬೆಂಗಳೂರಿನಲ್ಲಿ ರಸ್ತೆಗಳಿಗೆ ಮಿಲಿಟರಿ ಜಾಗ ಬಿಟ್ಟುಕೊಡುವಂತೆ ಮಾಡಿದ್ದರು. ಅಂತಹ ಶಾಶ್ವತ ಕೆಲಸಗಳು ನೂತನ ಸಚಿವರಿಂದ ಆಗಬೇಕಿದೆ.
ರಾಸಾಯನಿಕ ಮತ್ತು ರಸಗೊಬ್ಬರ, ನವೀಕರಿಸುವ ಇಂಧನ ರಾಜ್ಯ ಸಚಿವ
ಕೃಷಿ ಮತ್ತು ರೈತ ಕಲ್ಯಾಣ ರಾಜ್ಯ ಸಚಿವೆ
ಮಾಹಿತಿ ತಂತ್ರಜ್ಞಾನ, ಕೌಶಲಾಭಿವೃದ್ಧಿ ರಾಜ್ಯ ಸಚಿವ
ಸಾಮಾಜಿಕ ನ್ಯಾಯ, ಸಬಲೀಕರಣ ರಾಜ್ಯ ಸಚಿವ
ಪಕ್ಷದ ಸಂಘಟನೆಗೆ ತಳಮಟ್ಟದಲ್ಲಿ ದುಡಿದು ಹಂತ ಹಂತವಾಗಿ ಮೇಲೇರಿದ ಕಾರ್ಯಕರ್ತರಿಗೆ ಕೇಂದ್ರ ಸಚಿವ ಸಂಪುಟದಲ್ಲಿ ಮಣೆ ಹಾಕಲಾಗಿದೆ ಎಂದು ರಾಜ್ಯ ಬಿಜೆಪಿ ಸಂತಸದಿಂದ ಬೀಗುತ್ತಿದೆ. ಚುನಾವಣಾ ರಾಜಕಾರಣದಲ್ಲಿ ಮಾತ್ರವಲ್ಲ, ಅಧಿಕಾರ ಹಂಚಿಕೆಯಲ್ಲೂ ಆದ್ಯತೆ ಸಿಗುತ್ತದೆ ಎಂದು ಕಾರ್ಯಕರ್ತರು ಹರ್ಷದ ಹೊಳೆಯಲ್ಲಿ ಮಿಂದೆದ್ದಿದ್ದಾರೆ.
ಪಕ್ಷ ಸಂಘಟನೆಯಲ್ಲಿ ಹುರುಪು ತುಂಬಲು ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಸೂಚನೆ ಪ್ರಕಾರ, ರಾಜ್ಯದಿಂದ ಬೂತ್​ವುಟ್ಟದ ತನಕ ಯೋಜಿತ ರೂಪುರೇಷೆಯಂತೆ ಕಾರ್ಯಕ್ರಮಗಳು ನಡೆಯುತ್ತಿವೆ. ರಾಜ್ಯ ಸರ್ಕಾರ, ಪಕ್ಷದ ಇತ್ತೀಚಿನ ಬೆಳವಣಿಗೆಯಿಂದ ಕಳೆಗುಂದಿದ್ದ ಮುಖಂಡರು, ಕಾರ್ಯಕರ್ತರಲ್ಲಿ ಹೊಸ ಚೈತನ್ಯ ತುಂಬಿದೆ ಎಂದು ಮೂಲಗಳು ಹೇಳುತ್ತವೆ.
ಕೇಂದ ಸಂಪುಟ ಪುನಾರಚನೆಯಲ್ಲಿ ಪ್ರಧಾನಿ ಮೋದಿ ಹಾಗೂ ಪಕ್ಷದ ವರಿಷ್ಠರು ಊಹೆಗೂ ನಿಲುಕದ ರೀತಿಯಲ್ಲಿ ರಾಜ್ಯಕ್ಕೆ ಆದ್ಯತೆ ನೀಡಿದ್ದು, ಸಂಘಟನೆಗೆ ಹೆಚ್ಚು ಬಲ ತುಂಬಲಿದೆ ಎಂಬ ನಿರೀಕ್ಷೆ ಸಹಜ. ಹೊಸ ಸಚಿವರ ಪೈಕಿ ಶೋಭಾ ಕರಂದ್ಲಾಜೆ, ಎ.ನಾರಾಯಣಸ್ವಾಮಿ ಹಾಗೂ ಭಗವಂತ್ ಖೂಬಾ ಪಕ್ಷದ ಕಾರ್ಯಕರ್ತರು ಎಂಬುದು ಗಮನಾರ್ಹ. ಉದ್ಯಮಿ ಹಾಗೂ ಮಾಹಿತಿ-ತಂತ್ರಜ್ಞಾನ ಕ್ಷೇತ್ರದ ನಿಪುಣ ರಾಜೀವ ಚಂದ್ರಶೇಖರ್​ಗೂ ಅವಕಾಶ ಕಲ್ಪಿಸುವ ಮೂಲಕ ಸಿಲಿಕಾನ್ ಸಿಟಿಗೆ ಹೊಸ ಸ್ಪರ್ಶದ ಇರಾದೆ ವ್ಯಕ್ತಪಡಿಸಿದಂತಾಗಿದೆ.
ಶೋಷಿತರು, ಮಹಿಳೆ ಸೇರಿ ಎಲ್ಲ ಸಮುದಾಯಗಳಿಗೆ ಪ್ರಾತಿನಿಧ್ಯದ ಮೂಲಕ ಸಾಮಾಜಿಕ ನ್ಯಾಯ ನೀಡಿದ ದೊಡ್ಡ ಸಂದೇಶ ರವಾನೆಯಾಗಿದೆ. ಹೊಸ ಸಚಿವರಿಗೆ ನೀಡಿದ ಖಾತೆಗಳು ರಾಜ್ಯದ ಶೇ.70 ಜನರನ್ನು ಪ್ರತಿನಿಧಿಸುತ್ತಿದ್ದು, ಮುಂದಿನ ಎಲ್ಲ ಹಂತದ ಚುನಾವಣೆಗಳಿಗೆ ವರದಾನ ನಿಶ್ಚಿತವೆಂದು ಪಕ್ಷದ ಮೂಲಗಳು ವಿಶ್ವಾಸ ವ್ಯಕ್ತಪಡಿಸಿವೆ. ಜನರ ವಿಶ್ವಾಸ ಗಳಿಕೆ, ಹತ್ತಿರಕ್ಕೆ ಪಕ್ಷವನ್ನು ಕೊಂಡೊಯ್ಯುವ ಬಗೆ? ಯಾವ ವಿಚಾರಗಳನ್ನು ಹಂಚಿಕೊಳ್ಳಬೇಕು ಎಂದು ಬಲ್ಲವರ ಹೆಗಲಿಗೆ ಮಂತ್ರಿ ಸ್ಥಾನದ ಹೊಣೆಗಾರಿಕೆ ನೀಡಿದ್ದು, ಇನ್ನುಮುಂದೆ ರಾಜ್ಯ ನಾಯಕರ ಜವಾಬ್ದಾರಿ ಮತ್ತಷ್ಟು ಹೆಚ್ಚಲಿದೆ. ಸಂಪುಟದಿಂದ ಡಿ.ವಿ.ಸದಾನಂದಗೌಡರನ್ನು ಕೈಬಿಡಲು ಕಾರ್ಯ -ಕಾರಣಗಳು ಏನೇ ಇದ್ದರೂ, ಅವರ ಸೇವಾ ಹಿರಿತನ, ಅನುಭವಕ್ಕೆ ತಕ್ಕ ಸ್ಥಾನಮಾನ ಪಕ್ಷದಲ್ಲಿ ಸಿಗುವ ನಿರೀಕ್ಷೆಯಿದೆ ಎಂದು ಹೇಳಲಾಗಿದೆ.
ಕೇಂದ್ರದಲ್ಲಿ ಸಹಕಾರ ಇಲಾಖೆ ವರ:ಸಹಕಾರ ಕ್ಷೇತ್ರ ಕೃಷಿಗೆ ಪೂರಕವಾದದ್ದು, ಕೃಷಿ ಚಟುವಟಿಕೆಗೆ ನೇರ ಸಂಬಂಧ ಹೊಂದಿರುವ ಈ ಕ್ಷೇತ್ರಕ್ಕೆ ಕೃಷಿ ಇಲಾಖೆಯಷ್ಟು ಮಹತ್ವವಾಗಲಿ, ಸಮಯವಾಗಲಿ ಸಿಗುತ್ತಿರಲಿಲ್ಲ. ಈಗ ಕೇಂದ್ರ ಸರ್ಕಾರದಿಂದ ಐತಿಹಾಸಿಕ ತೀರ್ವನವನ್ನು ತೆಗೆದುಕೊಳ್ಳಲಾಗಿದೆ ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಅಭಿಪ್ರಾಯಪಟ್ಟರು. ಈಗ ಸಹಕಾರ ಇಲಾಖೆಗೆ ಸಂಬಂಧಪಟ್ಟಂತೆ ಯಾವುದಾದರೂ ಸಮಸ್ಯೆ ತಲೆ ದೋರಿದರೆ ನೇರವಾಗಿ ಕೇಂದ್ರದಲ್ಲಿ ಸಹಕಾರ ಸಚಿವರನ್ನು ಭೇಟಿ ಮಾಡಬಹುದಾಗಿದೆ. ಸೂಕ್ತ ಪರಿಹಾರ ಕಂಡುಕೊಳ್ಳಬಹುದಾಗಿದೆ ಎಂದರು.
ರಾಜ್ಯದ ನಾಲ್ವರನ್ನು ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳುವ ಮೂಲಕ ಪ್ರಧಾನಿ ಮೋದಿ ಅವರು ರಾಜ್ಯಕ್ಕೆ ನಿರೀಕ್ಷೆಗೂ ಮೀರಿದ ಕೊಡುಗೆ ನೀಡಿದ್ದಾರೆ. ಎಲ್ಲ ಜಾತಿ-ವರ್ಗಗಳಿಗೆ ಬಹುದೊಡ್ಡ ಸಂದೇಶ ರವಾನೆಯಾಗಿದೆ. 25 ಸಂಸದರನ್ನು ಕೊಟ್ಟ ರಾಜ್ಯಕ್ಕೆ ಮೋದಿ ಏನು ಕೊಟ್ಟರು? ಎಂದು ಪದೇಪದೆ ಕೇಳುತ್ತಿದ್ದ ಪ್ರತಿಪಕ್ಷಗಳಿಗೆ ಉತ್ತರ ಸಿಕ್ಕಿದೆ.
|ಎನ್.ರವಿಕುಮಾರ್ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 − four =
Remember me
