ಅಲಿಘಡ್​:ಆಗಸ್ಟ್​ 5ರಂದು ಅಯೋಧ್ಯೆಯಲ್ಲಿ ರಾಮಮಂದಿರ ಭೂಮಿ ಪೂಜೆ ನಡೆಯುತ್ತಿರುವ ಸಂದರ್ಭದಲ್ಲಿ, ತಮ್ಮ ಮನೆಯಲ್ಲೂ ಶ್ರೀರಾಮನಿಗೆ ಪೂಜೆ ಸಲ್ಲಿಸಿದ ಇಬ್ಬರು ಮುಸ್ಲಿಂ ಮಹಿಳೆಯರಿಗೆ ಸಿಕ್ಕಾಪಟೆ ಬೆದರಿಕೆ ಬರುತ್ತಿದೆ.
ಅಲಿಘಡ್​ನ ರೂಬಿ ಆಸಿಫ್​ ಖಾನ್​ ಮತ್ತು ನರ್ಗೀಸ್​ ಮೆಹಬೂಬ್​ ಅಲಿ ಇಬ್ಬರೂ ಬಿಜೆಪಿ ಮಹಿಳಾ ಮೋರ್ಚಾದ ಸದಸ್ಯೆಯರು. ಇವರಿಬ್ಬರೂ ಆಗಸ್ಟ್​ 5ರಂದು ತಮ್ಮ ಮನೆಯಲ್ಲೂ ಶ್ರೀರಾಮನ ಪೂಜೆ ಮಾಡಿದ್ದರು. ಆ ವಿಚಾರ ಗೊತ್ತಾದ ಮೇಲೆ ಅವರ ಧರ್ಮದ ಜನರಿಗೆ ವಿಪರೀತ ಬೆದರಿಕೆ ಬರುತ್ತಿದೆ ಎನ್ನಲಾಗಿದೆ. ದೈಹಿಕವಾಗಿ ಹಿಂಸೆ ನೀಡುತ್ತೇವೆ, ಇಸ್ಲಾಂನಿಂದ ಬಹಿಷ್ಕಾರ ಹಾಕುತ್ತೇವೆ ಎಂದು ಹೆದರಿಸುತ್ತಿದ್ದಾರೆಂದು ರೂಬಿ ಮತ್ತು ನರ್ಗೀಸ್ ತಿಳಿಸಿದ್ದಾರೆ.
ಈ ಇಬ್ಬರು ಮುಸ್ಲಿಂ ಮಹಿಳೆಯರು ತಮ್ಮ ಶಾಹ್​ ಜಮಲ್​ನಲ್ಲಿರುವ ಮನೆಯಲ್ಲಿ ಶ್ರೀರಾಮನ ಪೂಜೆ ಮಾಡಿದ ವಿಡಿಯೋಗಳು ಎಲ್ಲೆಡೆ ವೈರಲ್​ ಆಗಿವೆ. ವಿಡಿಯೋ ನೋಡಿದ ಇತರ ಮುಸ್ಲಿಮರು ಸಿಟ್ಟಿಗೆದ್ದಿದ್ದಾರೆ.ಇದನ್ನೂ ಓದಿ:ಎಲುಬು ಕಾಣುವಷ್ಟು ಸಣಕಲಾಗಿದ್ದ 41 ನಾಯಿಗಳು…ಇದು ಮಹಿಳೆಯ ಕ್ರೌರ್ಯ; ಪೊಲೀಸರಿಗೆ ಅನುಮಾನ
ಅಯೋಧ್ಯೆ ಬಾಬ್ರಿ ಮಸೀದಿ ಮತ್ತು ಶ್ರೀರಾಮಮಂದಿರ ಭೂ ವಿವಾದ ಸುದೀರ್ಘವಾಗಿತ್ತು. ಅದಕ್ಕೆ ಸಂಬಂಧಪಟ್ಟಂತೆ ಹಿಂದು-ಮುಸ್ಲಿಂರಲ್ಲೂ ದೀರ್ಘವಾದ ಸಂಘರ್ಷವಿತ್ತು. ಅದೆಲ್ಲ ನಿವಾರಣೆಯಾಗಿ..ಶತಮಾನಗಳ ಬಳಿಕ ಶ್ರೀರಾಮಮಂದಿರ ನಿರ್ಮಾಣ ಆಗುತ್ತಿರುವ ಹಿನ್ನೆಲೆಯಲ್ಲಿ ನಾವೂ ಮನೆಯಲ್ಲಿ ಪೂಜೆ ಮಾಡಿದ್ದೆವು ಎಂದು ರೂಬಿ ಮತ್ತು ನರ್ಗೀಸ್​ ತಿಳಿಸಿದ್ದಾರೆ.ಅಷ್ಟೇ ಅಲ್ಲ, ಇಲ್ಲಿನ ಬಿಜೆಪಿ ಮಹಿಳಾ ಮೋರ್ಚಾದ ಎಲ್ಲ ಸದಸ್ಯೆಯರು ಜು.30ರಂದು ರಾಮಲಲ್ಲಾ ಮತ್ತು ಪ್ರಧಾನಿ ನರೇಂದ್ರ ಮೋದಿಯವರಿಗೆ ರಾಖಿಯನ್ನೂ ಕಳಿಸಿದ್ದಾರೆ. 51,000 ರೂ.ದೇಣಿಗೆಯನ್ನು ಶ್ರೀರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್​ಗೆ ನೀಡಿದ್ದಾರೆ.ಇದನ್ನೂ ಓದಿ:ಮಂಗಳೂರು ವಿಮಾನ ನಿಲ್ದಾಣಕ್ಕೆ ಮತ್ತೆ ಹುಸಿ ಬಾಂಬ್​ ಬೆದರಿಕೆ ಕರೆ
ಇದೀಗ ನಮ್ಮ ಮೇಲೆ ಆ್ಯಸಿಡ್​ ದಾಳಿ ನಡೆಸುವುದಾಗಿ, ಸಜೀವ ದಹನ ಮಾಡುವುದಾಗಿ ಬೆದರಿಸಲಾಗುತ್ತಿದೆ ಎಂದಿದ್ದಾರೆ. ದೆಹಲಿ ಗೇಟ್​ ಪೊಲೀಸ್​ ಠಾಣೆಯಲ್ಲಿ ದೂರನ್ನೂ ದಾಖಲಿಸಿದ್ದಾರೆ. (ಏಜೆನ್ಸೀಸ್​)
ಕಾಕ್​​ಪಿಟ್​​ನಲ್ಲಿ ಪೈಲಟ್​ಗಳು ಏನೆನೆಲ್ಲ ಮಾಡ್ತಾರೆ? ಕೇಳಿದರೆ ಭಯ ಹುಟ್ಟುತ್ತದೆ…ಮುಜುಗರವೂ !

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five + eighteen =
Remember me
