ನವದೆಹಲಿ:ಇತ್ತಿಚೆಗೆ ನಿಷೇಧಿಸಲ್ಪಟ್ಟಿರುವ ಟಿಕ್​ಟಾಕ್​ ಸೇರಿ 59 ಆ್ಯಪ್​ ಕಂಪನಿಗಳಿಗೆ ಭಾರತ 77 ಪ್ರಶ್ನೆಗಳ ಪ್ರಶ್ನೆಮಾಲಿಕೆಯನ್ನು ರವಾನಿಸಿದ್ದು, ಮೂರು ವಾರಗಳಲ್ಲಿ ಉತ್ತರ ನೀಡುವಂತೆ ಸೂಚಿಸಿದೆ. ಆ್ಯಪ್​ಗಳಲ್ಲಿನ ಮಾಹಿತಿಯನ್ನು ಸೆನ್ಸಾರ್​ ಮಾಡಲಾಗಿತ್ತೇ, ಯಾವುದಾದರೂ ವಿದೇಶಿ ಸರ್ಕಾರದ ಪರವಾಗಿ ಕೆಲಸ ಮಾಡಿದ್ದೀರಾ ಅಥವಾ ಪ್ರಭಾವಿಗಳ ಪರವಾಗಿ ಲಾಬಿ ಮಾಡಿದಿರಾ ಎಂಬ ಪ್ರಶ್ನೆಗಳು ಈ ಪ್ರಶ್ನೆಮಾಲಿಕೆಯಲ್ಲಿ ಸೇರಿವೆ.
ಮಾಹಿತಿ ತಂತ್ರಜ್ಞಾನ ಸಚಿವಾಲಯ ರವಾನಿಸಿರುವ ಈ ಪ್ರಶ್ನೆಮಾಲಿಕೆಯ ಪ್ರಕಾರ, ನೀಡುವ ಸ್ಪಷ್ಟನೆ ತೃಪ್ತಿಕರವಾಗಿಲ್ಲದಿದ್ದರೆ, ಅಂಥ ಆ್ಯಪ್​ಗಳ ಮಾಲೀಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನೂ ನೀಡಲಾಗಿದೆ.
ಲಡಾಕ್​ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಗಲ್ವಾನ್​ ಕಣಿವೆಯಲ್ಲಿ ಭಾರತ ಮತ್ತು ಚೀನಾದ ಯೋಧರ ನಡುವೆ ಜೂ.15ರಂದು ನಡೆದಿದ್ದ ರಕ್ತಸಿಕ್ತ ಘರ್ಷಣೆಯ ನಂತರದಲ್ಲಿ ಕೇಂದ್ರ ಸರ್ಕಾರ ಟಿಕ್​ಟಾಕ್​ ಸೇರಿ ಚೀನಾ ಮೂಲದ 59 ಆ್ಯಪ್​ಗಳನ್ನು ದೇಶದಲ್ಲಿ ನಿಷೇಧಿಸಿದೆ. ಈ ಆ್ಯಪ್​ಗಳು ಭಾರತದ ಸಾರ್ವಭೌಮತ್ವ ಮತ್ತು ಏಕತೆಗೆ ಭಂಗವನ್ನುಂಟು ಮಾಡುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಅವನ್ನು ನಿಷೇಧಿಸಿರುವುದಾಗಿ ಹೇಳಿದೆ. ಆದರೆ, ಚೀನಾ ಸರ್ಕಾರ ಭಾರತದ ಈ ಕ್ರಮವನ್ನು ಟೀಕಿಸಿದೆ.
ಇದನ್ನೂ ಓದಿ:ನಾನು ಬಿಜೆಪಿ ಸೇರುತ್ತಿಲ್ಲ, ಮುಂದಿನ ನಡೆಯನ್ನು ಶೀಘ್ರವೇ ನಿರ್ಧರಿಸುವೆ
2019ರ ಫೆಬ್ರವರಿ 14ರಂದು ನಡೆದ ಉಗ್ರರ ಫುಲ್ವಾಮಾ ದಾಳಿಯಲ್ಲಿ ಸಿಆರ್​ಪಿಎಫ್​ನ 40 ಯೋಧರು ಹುತಾತ್ಮರಾಗಿದ್ದರು. ಈ ದಾಳಿಯ ಕುರಿತ ಮಾಹಿತ ಹಾಗೂ ದಾಳಿಯ ನಂತರದಲ್ಲಿನ ಮಾಹಿತಿಗಳನ್ನು ಆ್ಯಪ್​ನಲ್ಲಿ ಸೆನ್ಸಾರ್​ ಮಾಡಲಾಗಿತ್ತೇ ಎಂಬ ಪ್ರಶ್ನೆ ಕೂಡ ಇದರಲ್ಲಿ ಸೇರಿದೆ ಎನ್ನಲಾಗಿದೆ.
ಭಾರತದ ಪ್ರಶ್ನೆಮಾಲಿಕೆ ತನ್ನ ಕೈಸೇರಿದ್ದು, ಅದಕ್ಕೆ ಸೂಕ್ತ ಉತ್ತರಗಳನ್ನು ಸಿದ್ಧಪಡಿಸುತ್ತಿರುವುದಾಗಿ ಟಿಕ್​ಟಾಕ್​ ಹೇಳಿಕೊಂಡಿದೆ. ಬಳಕೆದಾರರ ವೈಯಕ್ತಿಕ ಮಾಹಿತಿ ವಿಷಯದಲ್ಲಿ ಗೌಪ್ಯತೆ ಕಾಯ್ದುಕೊಳ್ಳುವುದು ಸೇರಿ ಭಾರತದ ಕಾನೂನನ್ನು ತಾನು ಗೌರಿವಿಸುತ್ತಿದುದಾಗಿ ಅದು ಹೇಳಿಕೊಂಡಿದೆ. ಆದರೆ ಆಲಿಬಾಬಾ ಸಂಸ್ಥೆ ಈ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದೆ.
ಸಹೋದರಿ ಬಗ್ಗೆ ಮಾತನಾಡಿದ್ದಕ್ಕೆ ಆಕ್ಷೇಪಿಸಿದ, ತುಂಡು ತುಂಡಾಗಿ ಬೋರ್​ವೆಲ್​ ಸೇರಿದ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen − 6 =
Remember me
