ಮುಂಬೈ:ಕರೊನಾ ಸಮಯದಲ್ಲಿ ಸಾವಿರಾರು ಜನರಿಗೆ ಸಹಾಯ ಮಾಡಿ ಅಭಿಮಾನ ಗಳಿಸಿರುವ ನಟ ಸೋನು ಸೂದ್​ ಅವರ ಆದಾಯ ಮೂಲ ಮತ್ತು ಖರ್ಚಿನ ವೈಖರಿ ಬಗ್ಗೆ ಇದೀಗ ಐಟಿ ಅಧಿಕಾರಿಗಳ ದೃಷ್ಟಿ ಬಿದ್ದಿದೆ. ಸೋನು ಸೂದ್​ ಅವರ ಮುಂಬೈನ ಕಾಸಾ ಬ್ಲಾಂಕಾ ನಿವಾಸಕ್ಕೆ ಭೇಟಿ ನೀಡುವುದರೊಂದಿಗೆ, ಅವರಿಗೆ ಸಂಬಂಧಿಸಿದ ಇತರ 6 ಸ್ಥಳಗಳನ್ನು ಆದಾಯ ತೆರಿಗೆ ಇಲಾಖೆಯ ತಂಡ ಸರ್ವೇ ಮಾಡುತ್ತಿದೆ ಎನ್ನಲಾಗಿದೆ.
ಐಟಿ ಅಧಿಕಾರಿಗಳ ಈ ಭೇಟಿಯು ಐಟಿ ದಾಳಿಯಲ್ಲ. ಬದಲಿಗೆ ಸೂದ್​ ಅವರ ಆದಾಯಗಳ ಮೂಲಗಳ ಬಗ್ಗೆ ಮತ್ತು ಅವರು ಅದನ್ನು ಎಲ್ಲೆಲ್ಲಿ ವ್ಯಯಿಸುತ್ತಿದ್ದಾರೆ ಎಂಬ ಬಗ್ಗೆ ಮಾಹಿತಿ ಕಲೆ ಹಾಕುವ ಪ್ರಯತ್ನವಷ್ಟೇ ಆಗಿದೆ ಎಂದು ಮೂಲಗಳು ತಿಳಿಸಿವೆ. ಕರೊನಾ ಸಮಯದಲ್ಲಿ ಹಲವಾರು ಜನರಿಗೆ ಧನಸಹಾಯ ಮಾಡಿರುವ ಸೂದ್​, ಎಲ್ಲೆಲ್ಲಿಂದ ಹಣ ಪಡೆದರು ಮತ್ತು ಹೇಗೆಲ್ಲಾ ಅದನ್ನು ಖರ್ಚು ಮಾಡಿದರು ಎಂಬುದರ ಸಮೀಕ್ಷೆ ನಡೆಯುತ್ತಿದೆ ಎನ್ನಲಾಗಿದೆ.
ಇದನ್ನೂ ಓದಿ:ನಟಿ ಕಂಗನಾ ರಣಾವತ್​ ಅರ್ಜಿ ತಿರಸ್ಕರಿಸಿದ ಹೈಕೋರ್ಟ್​
ಸೋನು ಸೂದ್​ ಅವರು ದೆಹಲಿ ಸರ್ಕಾರದ ಶಾಲಾ ಮಕ್ಕಳ ಪ್ರೋತ್ಸಾಹ ಯೋಜನೆಯ ಬ್ರ್ಯಾಂಡ್​ ಅಂಬಾಸಿಡಾರ್​ ಆದ ಬೆನ್ನಲ್ಲೇ ಈ ಬೆಳವಣಿಗೆಯಾಗಿರುವುದು ಕುತೂಹಲ ಮೂಡಿಸಿದೆ. ಇತ್ತೀಚೆಗೆ ದೆಹಲಿ ಸಿಎಂ ಹಾಗೂ ಆಮ್​ ಆದ್ಮಿ ಪಾರ್ಟಿಯ ಮುಖ್ಯಸ್ಥ ಅರವಿಂದ್​ ಕೇಜ್ರಿವಾಲ್​ ಅವರನ್ನು ಭೇಟಿ ಮಾಡಿದ್ದ ಸೋನು ಸೂದ್​, ರಾಜಕೀಯ ಕ್ಷೇತ್ರಕ್ಕೆ ಕಾಲಿಡಬಹುದೆಂಬ ಊಹೆಗಳೂ ಹರಿದಾಡುತ್ತಿವೆ ಎನ್ನಲಾಗಿದೆ.(ಏಜೆನ್ಸೀಸ್)
ಬ್ಯಾಂಕ್​ ಖಾತೆಗೆ ತಪ್ಪಾಗಿ ಬಂದ ಲಕ್ಷಗಟ್ಟಲೇ ಹಣ… ಪ್ರಧಾನಿ ಮೋದಿ ಕಳ್ಸಿರೋದು ಎಂದ ಖಾತೆದಾರ!

ಕುತ್ತಿಗೆಗೆ ಬಲ ನೀಡುವ ಸ್ಕಂದಾಸನ; ಜೀರ್ಣಶಕ್ತಿ ಹೆಚ್ಚಿಸಲು ಇದು ಸಹಕಾರಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:9 − 4 =
Remember me
