ಕಾನ್ಪುರ:ಆದಾಯ ತೆರಿಗೆ ಇಲಾಖೆ ಕಾನ್ಪುರ ಮೂಲದ ತಂಬಾಕು ಕಂಪನಿಯೊಂದರ ಮೇಲೆ ದಾಳಿ ನಡೆಸಿ 4.5 ಕೋಟಿ ರೂಪಾಯಿ ವಶಪಡಿಸಿಕೊಂಡಿದ್ದಾರೆ ಎಂದು ಮೂಲಗಳು ಶುಕ್ರವಾರ (ಮಾ.01) ಮಾಹಿತಿ ನೀಡಿವೆ. ರೋಲ್ಸ್ ರಾಯ್ಸ್ ಫ್ಯಾಂಟಮ್, ಮೆಕ್ಲಾರೆನ್, ಲಂಬೋರ್ಗಿನಿ ಮತ್ತು ಫೆರಾರಿ ಸೇರಿದಂತೆ 60 ಕೋಟಿ ರೂ.ಗೂ ಹೆಚ್ಚು ಮೌಲ್ಯದ ಹಲವಾರು ಐಷಾರಾಮಿ ಕಾರುಗಳು ದೆಹಲಿಯಲ್ಲಿರುವ ಕಂಪನಿ ಮಾಲೀಕರ ನಿವಾಸದಲ್ಲಿ ಪತ್ತೆಯಾಗಿವೆ.
ಇದನ್ನೂ ಓದಿ:ಅಂತಿಮ ದರ್ಶನದ ವೇಳೆ ಕೆ. ಶಿವರಾಂ ಅಭಿಮಾನಿಗಳಿಂದ ಆಕ್ರೋಶ!
ಕಾನ್ಪುರ ಮೂಲದ ಬನ್ಸಿಧರ್ ಟೊಬ್ಯಾಕೋ ಪ್ರೈವೇಟ್ ಲಿಮಿಟೆಡ್ ಮೇಲೆ ಆದಾಯ ತೆರಿಗೆ ಇಲಾಖೆ ತಂಡ ಗುರುವಾರ ಸಂಜೆ ದಾಳಿ ನಡೆಸಿದೆ. ಗುಜರಾತ್, ಆಂಧ್ರಪ್ರದೇಶ ಮತ್ತು ದೆಹಲಿ ಸೇರಿದಂತೆ ಐದು ರಾಜ್ಯಗಳಲ್ಲಿ ಕಂಪನಿಗೆ ಸಂಪರ್ಕ ಹೊಂದಿರುವ ಇತರರ ಗುಂಪುಗಳ ಮೇಲೆ 15ರಿಂದ 20 ತಂಡಗಳು ಏಕಕಾಲದಲ್ಲಿ ಇದೇ ರೀತಿಯ ಹುಡುಕಾಟ ನಡೆಸಿವೆ. ಬೇರೆ ಸಂಸ್ಥೆಗಳಿಗೆ ಕಚ್ಚಾ ಸಾಮಗ್ರಿಗಳನ್ನು ಪೂರೈಸುವ ತಂಬಾಕು ಕಂಪನಿಯು ತೆರಿಗೆ ಮತ್ತು ಜಿಎಸ್‌ಟಿಯನ್ನು ದೊಡ್ಡ ಪ್ರಮಾಣದಲ್ಲಿ ಸಲ್ಲಿಸದೆ ವಂಚಿಸಿದೆ ಎಂದು ಆದಾಯ ತೆರಿಗೆ ಇಲಾಖೆ ಆರೋಪಿಸಿದೆ.
ಕಂಪನಿಯು 20ರಿಂದ 25 ಕೋಟಿ ವಹಿವಾಟು ನಡೆಸುತ್ತಿದೆ ಎಂದು ಮೂಲಗಳು ತಿಳಿಸಿವೆ. ಆದರೆ ವಾಸ್ತವದಲ್ಲಿ ಈ ವಹಿವಾಟು ಸುಮಾರು 100-150 ಕೋಟಿ ರೂ. ಆಗಿದೆ. ಆದಾಯ ತೆರಿಗೆ ತಂಡವು ಹಲವು ಪ್ರಮುಖ ದಾಖಲೆಗಳು ಮತ್ತು ಲ್ಯಾಪ್‌ಟಾಪ್‌ಗಳ ಜತೆಗೆ ಕಂಪನಿ ಹಾಗೂ ಅದರ ಮಾಲೀಕರ ಆಸ್ತಿ, ಆದಾಯವನ್ನು ಸಮನ್ವಯಗೊಳಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇಂದು ಕೂಡ ಹಲವೆಡೆ ದಾಳಿ ಮುಂದುವರಿದಿದೆ,(ಏಜೆನ್ಸೀಸ್).
‘ಗೊಂದಲ, ಹೋರಾಟ, ಪ್ರಯತ್ನ’….: ವಿಚ್ಛೇದನ ನೆನೆದು ಸಾನಿಯಾ ಭಾವುಕ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 + two =
Remember me
