ನವದೆಹಲಿ:ಆಕಾಶದಲ್ಲಿ ಹಾರಾಡುತ್ತಿರುವಾಗ ವಿಮಾನದೊಳಗೂ ಮಳೆ ಬರಲು ಸಾಧ್ಯವೇ? ಸಾಧ್ಯ ಎನ್ನುತ್ತಾರೆ ರಷ್ಯಾದ ಈ ವಿಮಾನದ ಸಿಬ್ಬಂದಿ.ಬ್ಲ್ಯಾಕ್​ಸೀ ನೋಡಲು ತೆರಳುತ್ತಿದ್ದ ಪ್ರವಾಸಿಗರು ಇದ್ದ ರಷ್ಯಾದ ವಿಮಾನದೊಳಗೆ ಹಠಾತ್ತನೆ ಮಳೆ ಸುರಿಯಲು ಆರಂಭಿಸಿತು. ಪುಣ್ಯಕ್ಕೆ ಜನರು ತಮ್ಮ ಕ್ಯಾಬಿನ್​ ಲೆಗೇಜ್​ನೊಂದಿಗೆ ಛತ್ರಿಗಳನ್ನು ತಂದಿದ್ದರು. ಆ ಛತ್ರಿಗಳನ್ನು ವಿಮಾನದೊಳಗೆ ಬಿಡಿಸಿ, ಮಳೆ ನೀರಿನಿಂದ ರಕ್ಷಣೆ ಪಡೆದರು.
ರೋಷಿಯಾ ಏರ್​ಲೈನ್ಸ್​ನ ವಿಮಾನದಲ್ಲಿ ನಡೆದ ಈ ಘಟನೆಯ ವಿಡಿಯೋ ಚಿತ್ರೀಕರಿಸಿಕೊಂಡಿದ್ದ ಪ್ರಯಾಣಿಕರು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು ವಿಮಾನದೊಳಗಿನ ಮಳೆಯ ಅನುಭವವನ್ನು ಹಂಚಿಕೊಂಡಿದ್ದಾರೆ.
ಇದನ್ನೂ ಓದಿ:ಸ್ಮಶಾನದಲ್ಲಿದ್ದ ಪಿಪಿಇ ಕಿಟ್ ಧರಿಸಿ ಊರೆಲ್ಲಾ ಓಡಾಟ-ಬೇಸ್ತು ಬಿದ್ದ ಜನ
ಖಾಬರೋವ್​ಸ್ಕ್​ ಮತ್ತು ಸೋಚಿ ನಡುವೆ ಸಂಚರಿಸುವ ರೋಷಿಯಾ ಏರ್​ಲೈನ್ಸ್​ ವಿಮಾನ ಎಂದಿನಂತೆ ಬ್ಲ್ಯಾಕ್​ಸೀಗೆ ಪ್ರವಾಸಿಗರನ್ನು ಕರೆದೊಯ್ಯುತ್ತಿತ್ತು. ಅದರ ಹವಾನಿಯಂತ್ರಣ ವ್ಯವಸ್ಥೆಯಲ್ಲಿ ಏನೋ ತಾಂತ್ರಿಕ ಸಮಸ್ಯೆ ಉಂಟಾಗಿತ್ತು. ಇದರಿಂದಾಗಿ ವಿಮಾನದೊಳಗೆ ಎಸಿಯ ನೀರು ಮಳೆಯಂತೆ ತೊಟ್ಟಿಕ್ಕಲಾರಂಭಿಸಿತ್ತು.
Volo interno russo#Chabarovsk-Sochi della Rossiya Airlines
I passeggeri sono stati costretti ad usare ombrelli per ripararsi da goccioloni d'acqua, parrebbe per un guasto all'aria condizionata
Ora sotto inchiesta
Non vi lamentate dei treni italiani…pic.twitter.com/HKB1ab66rd
— #POLiticamenteScorretto🎹 (@PolScorr)July 11, 2020

ಸೆಂಟ್ರಲ್​ ಎಸಿ ವ್ಯವಸ್ಥೆ ಇರುವಲ್ಲಿ ಎಸಿ ಯಂತ್ರಗಳಿಂದ ಈ ರೀತಿ ನೀರು ತೊಟ್ಟಿಕ್ಕುವುದು ಸಾಮಾನ್ಯ ಎನ್ನಲಾಗಿದೆ. ನೀರು ಘನೀಕೃತಕೊಂಡಿದ್ದು, ಕ್ಯಾಬಿನ್​ನಲ್ಲಿನ ಬಿಸಿ ತಾಪಮಾನದ ಸಂಪರ್ಕಕ್ಕೆ ಬಂದಾಗ ಕರಗಿ ನೀರಾಗುತ್ತದೆ. ಹೀಗಾದಾಗ ಹೆಚ್ಚುವರಿ ನೀರು ವಿಮಾನದೊಳಗಿನ ಒಳಾಂಗಣ ಪ್ಯಾನೆಲ್​ಗಳ ಮೂಲಕ ತೊಟ್ಟಿಕ್ಕುತ್ತದೆ. ಹಾಗೆಂದು ಇದೇನು ಗಂಭೀರವಾದ ಸಮಸ್ಯೆಯಲ್ಲ ಎಂದು ರೋಷಿಯಾ ಏರ್​ಲೈನ್ಸ್​ನ ಸಿಬ್ಬಂದಿ ಸ್ಪಷ್ಟನೆ ನೀಡಿದ್ದಾರೆ.
ಕಾಲೇಜಿನಲ್ಲಿ ಮಹಿಳೆಯರಿಗೆ ಪದವಿ ಜತೆಗೆ ಪಾಸ್​ಪೋರ್ಟ್​ ಕೂಡ ಕೊಡ್ತಾರೆ…! ಎಲ್ಲಿ? ಹೇಗೆ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen − nine =
Remember me
