ಗಾಂಧಿನಗರ:ಟಿವಿ ಮತ್ತು ಮೊಬೈಲ್​ ಮಕ್ಕಳ ಮೇಲೆ ಗಂಭೀರ ಪರಿಣಾಮ ಬೀರುವ ಸಾಧನಗಳು. ಅದೇ ರೀತಿ ಮೊಬೈಲ್​ ಮತ್ತು ಟಿವಿಯಲ್ಲಿ ಕ್ರೈಂ ಶೋಗಳನ್ನು ನೋಡುತ್ತಿದ್ದ ಒಬ್ಬ ಯುವಕ ಪ್ರೀತಿಗಾಗಿ ಮಾಡಿದ ಕೆಲಸ ಕೇಳಿದರೆ ನೀವು ಬೆಚ್ಚಿ ಬೀಳುತ್ತೀರ.
ಇದನ್ನೂ ಓದಿ:ತಂಗಿಗೆ ಮಾಜಿ ಪ್ರಿಯತಮ ಟಾರ್ಚರ್​ ಮಾಡ್ತಿದ್ದ; ವಿಚಾರ ತಿಳಿದ ಅಣ್ಣ ಹೀಗಾ ಮಾಡೋದು?!
ಗುಜರಾತ್​ನ ಸೂರತ್​ ನಿವಾಸಿ ಸುಮಿತ್​ ಅಘೇರಾ (18) ಹೆಸರಿನ ಯುವಕ ಹೈ ಸ್ಕೂಲ್​ನಲ್ಲಿರುವಾಗ ಕರೀಶ್ಮಾ ಹೆಸರಿನ ಬಾಲಕಿಯನ್ನು ಪ್ರೀತಿಸುತ್ತಿದ್ದನಂತೆ. ಒನ್​ ವೇ ಲವ್​ ಆಗಿದ್ದ ಇದರ ಬಗ್ಗೆಗ ಕರೀಶ್ಮಾಗೆ ಯಾವುದೇ ಮಾಹಿತಿ ಗೊತ್ತಿರಲಿಲ್ಲ. ಪಿಯುಸಿ ಮುಗಿದ ಮೇಲೆ ಅವರಿಬ್ಬರೂ ಬೇರೆ ಬೇರೆ ಕಾಲೇಜುಗಳಿಗೆ ಸೇರಿಕೊಂಡಿದ್ದಾರೆ. ಸುಮಿತ್​ ಐಟಿ ಕ್ಷೇತ್ರದಲ್ಲಿ ಉದ್ಯಮಿಯಾಗುವ ಕನಸು ಹೊಂದಿದ್ದು, ಬಿಎಸ್ಸಿ ಐಟಿ ಶಿಕ್ಷಣವನ್ನೇ ಆಯ್ಕೆ ಮಾಡಿಕೊಂಡಿದ್ದಾನೆ.
ಕಾಲೇಜು ಸೇರಿದ ಮೇಲೂ ಸುಮಿತ್​ಗೆ ಕರೀಶ್ಮಾ ಬಗ್ಗೆ ಇದ್ದ ಪ್ರೀತಿ ಕಡಿಮೆಯಾಗಿಲ್ಲ. ಹೇಗಾದರೂ ಮಾಡಿ ಆಕೆಯನ್ನು ಒಪ್ಪಿಸಿ, ಮದುವೆಯಾಗಬೇಕು ಎಂದು ಕನಸು ಕಂಡಿದ್ದನಂತೆ. ಅದಕ್ಕೆಂದು ಆತ ಒಂದು ದಾರಿಯನ್ನೂ ಹುಡುಕಿಕೊಂಡಿದ್ದಾನೆ. ಇನ್​ಸ್ಟಾಗ್ರಾಂನಲ್ಲಿ ಮೂರು ನಕಲಿ ಖಾತೆಗಳನ್ನು ತೆರೆದಿದ್ದಾನೆ. ನಂತರ ಕರೀಶ್ಮಾಳ ಅಕ್ಕ ಕಿಂಜಲ್​ಳ ಫೋಟೋಗಳನ್ನು ಎಡಿಟ್​ ಮಾಡಿ ನಗ್ನಗೊಳಿಸಿದ್ದಾನೆ. ಆ ಫೋಟೋಗಳನ್ನು ನಕಲಿ ಖಾತೆಗಳಿಂದ ಕರೀಶ್ಮಾ ಮತ್ತು ಕಿಂಜಲ್​ಗೆ ಕಳುಹಿಸಿ ಅದನ್ನು ವೈರಲ್​ ಮಾಡುವುದಾಗಿ ಬೆದರಿಸಿದ್ದಾನೆ.
ಇದನ್ನೂ ಓದಿ:ಆತನ ಹೊಟ್ಟೆಯೊಳಗಿತ್ತು 4 ಕೋಟಿ ಮೌಲ್ಯದ ಡ್ರಗ್ಸ್​! ಕಳ್ಳಸಾಗಣೆಗೆ ಬೇರೆಯದ್ದೇ ಮಾರ್ಗ ಕಂಡುಕೊಂಡ ಕದೀಮರು!
ತಾನು ಐಟಿ ವಿದ್ಯಾರ್ಥಿಯಾಗಿದ್ದರಿಂದ ಕರೀಶ್ಮಾ ಈ ವಿಚಾರದಲ್ಲಿ ತನ್ನದೇ ಸಹಾಯ ಕೇಳಿ ಬರಬಹುದೆಂಬ ಭ್ರಮೆಯಲ್ಲಿ ಸುಮಿತ್​ ಈ ಕೃತ್ಯವೆಸಗಿದ್ದಾನೆ. ಆದರೆ ಈತನ ಬಳಿ ಬಾರದ ಅಕ್ಕ ತಂಗಿಯರು ನೇರವಾಗಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಪೊಲೀಸರ ಕೈಗೆ ಸಿಕ್ಕಿಬಿದ್ದ ಸುಮಿತ್​, ಕರೀಶ್ಮಾಳ ಪ್ರೀತಿ ಪಡೆಯುವುದಕ್ಕಾಗಿ ಈ ರೀತಿ ಮಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಕ್ರೈ ಶೋಗಳನ್ನು ನೋಡಿ ಅದರಿಂದ ಈ ಐಡಿಯಾ ಮಾಡಿದ್ದಾಗಿಯೂ ಆತ ಹೇಳಿದ್ದಾನೆ. (ಏಜೆನ್ಸೀಸ್​)
ಅಮ್ಮ ಸತ್ತಿಲ್ಲ, ಮಲಗಿದ್ದಾಳೆ! 20 ದಿನದಿಂದ ಶವವನ್ನೇ ಪೂಜಿಸುತ್ತಿರುವ ಮಕ್ಕಳು! ಕಣ್ಣೀರು ತರಿಸುತ್ತೆ ಈ ಮಕ್ಕಳ ನಂಬಿಕೆ

ಮಗನ ಹೆಂಡತಿಗೆ ಮಾವ ಹೀಗಾ ಮಾಡೋದು?! ತನಿಖೆಯಲ್ಲಿ ಬಯಲಾಯಿತು ಮಾವನ ನಿಜ ಬಣ್ಣ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × 4 =
Remember me
