ಬೆಂಗಳೂರು: ಭಾರತದಲ್ಲಿ ಇಲ್ಲಿಯವರೆಗೆ ಕರೊನಾ ಸೋಂಕಿತರ ಸಂಖ್ಯೆ 10 ಸಾವಿರದ ಗಡಿ ದಾಟಿರುವುದು ಆತಂಕ ಸೃಷ್ಟಿಸಿದ್ದರೂ, ಬೇರೆ ಹಲವು ದೇಶಗಳಿಗೆ ಹೋಲಿಸಿದರೆ ಈ ಸಂಖ್ಯೆ ಅತ್ಯಂತ ಕಡಿಮೆ ಎನ್ನುವುದೇ ಸಮಾಧಾನ. ಅಷ್ಟೇ ಅಲ್ಲದೇ ಹಲವು ದೇಶಗಳು ಕೆಲವೇ ದಿನಗಳಲ್ಲಿ 10 ಸಾವಿರದ ಗಡಿ ದಾಟಿದ್ದರೆ ಸೋಂಕು ಶುರುವಾದ 74 ದಿನಗಳ ನಂತರ ಭಾರತದಲ್ಲಿ ಈ ಸಂಖ್ಯೆಯನ್ನು ತಲುಪಿದೆ.
ಅತ್ಯಧಿಕ ಜನಸಂಖ್ಯೆ ಹೊಂದಿರುವ ಭಾರತವನ್ನು ಇತರ ಕಡಿಮೆ ಜನಸಂಖ್ಯೆ ಹೊಂದಿರುವ ದೇಶಗಳಿಗೆ ಹೋಲಿಸಿದರೆ ಈ ಪ್ರಮಾಣ ತೀರಾ ಕಡಿಮೆ ಎಂದು ವಿಶ್ಲೇಷಿಸಲಾಗಿದೆ. ಸದ್ಯ ಕರೊನಾ ಸೋಂಕಿತರ ಪಟ್ಟಿಯಲ್ಲಿ ಭಾರತದ ಸ್ಥಾನ 22ನೆಯದ್ದು.
ನಿನ್ನೆ (ಏ.14) ಸಂಜೆ 6 ಗಂಟೆಯವರೆಗಿನ ಅಂಕಿಅಂಶಗಳ ಮೇಲೆ ಲೆಕ್ಕಾಚಾರ ಹಾಕಿ ‘ದಿ ಪ್ರಿಂಟ್‌’ ಸಮೀಕ್ಷೆ ನಡೆಸಿದೆ. ಈ ಅವಧಿಯಲ್ಲಿ ಇಡೀ ವಿಶ್ವದಲ್ಲಿ ಕರೊನಾ ಸೋಂಕು 1.92 ದಶಲಕ್ಷದ ಗಡಿ ದಾಟಿದ್ದು, ಅದರಲ್ಲಿ ಅಧಿಕ ಜನಸಂಖ್ಯೆ ಹೊಂದಿರುವ ಭಾರತದ ಪಾಲು 10 ಸಾವಿರ. ಇಷ್ಟು ಸಂಖ್ಯೆಯ ಜನರಿಗೆ ಸೋಂಕು ತಗುಲಿರುವುದು ನೋವಿನ ಸಂಗತಿಯೇ ಆದರೂ ಮಿಕ್ಕ ದೇಶಗಳಿಗೆ ಹೋಲಿಸಿದರೆ ಭಾರತ ತೆಗೆದುಕೊಂಡಿರುವ ಕೆಲವು ಕಠಿಣ ನಿರ್ಧಾರ, ನಿಯಮಗಳು ಹಾಗೂ ಮುಂಜಾಗರೂಕತೆಯಿಂದಾಗಿ ಸಂಖ್ಯೆಯ ಪ್ರಮಾಣದಲ್ಲಿ ಇಳಿಮುಖವಾಗಿದೆ ಎಂದು ವಿಶ್ಲೇಷಿಸಲಾಗಿದೆ.
2019ರ ಡಿಸೆಂಬರ್‌ 31ರಂದು ಚೀನಾ ಕರೊನಾ ಸೋಂಕಿನ ಕುರಿತು ವಿಶ್ವ ಆರೋಗ್ಯ ಸಂಸ್ಥೆಗೆ ಮಾಹಿತಿ ನೀಡಿತ್ತು. 2020ರ ಜನವರಿಯಲ್ಲಿ ಈ ಸೋಂಕು ಇರುವ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆಯು ಜನವರಿ 12ರಂದು ಖಚಿತಪಡಿಸಿತ್ತು. ಆಗಲೇ ಇಡೀ ವಿಶ್ವದ ಜನತೆ ಈ ಸೋಂಕಿನ ಬಗ್ಗೆ ಎಚ್ಚೆತ್ತುಕೊಂಡಿದ್ದರು. ಆದರೆ ಇದು ಅಂದುಕೊಂಡಿದ್ದಕ್ಕಿಂತಲೂ ಶರವೇಗದಲ್ಲಿ ಇಡೀ ವಿಶ್ವವನ್ನೇ ವ್ಯಾಪಿಸಿಬಿಟ್ಟಿತು.
ಭಾರತದಲ್ಲಿ ಈ ಸೋಂಕಿನ ಪ್ರಕರಣ ಮೊದಲು ದಾಖಲಾಗಿದ್ದು ಜನವರಿ 30ರಂದು. ನಂತರ ಪ್ರಧಾನಿ ನರೇಂದ್ರ ಮೋದಿ ಅವರು ಇದರ ಗಂಭೀರತೆಯನ್ನು ಪರಿಗಣಿಸಿ ಮಾರ್ಚ್‌ 22ರಂದು ಜನತಾ ಕರ್ಫ್ಯೂ ಆಚರಿಸಲು ಕರೆ ಕೊಟ್ಟರು. ಇದರ ಯಶಸ್ಸಿನ ನಂತರ ಮಾರ್ಚ್‌ 24-25ರ ಮಧ್ಯರಾತ್ರಿಯಿಂದ ದೇಶವು ಸಂಪೂರ್ಣ ಲಾಕ್‌ಡೌನ್‌ಗೆ ಒಳಗಾಗಿತು. ಇವೆಲ್ಲವುಗಳ ಹಿನ್ನೆಲೆಯಲ್ಲಿ ಜನವರಿ 30ರಿಂದ 74 ದಿನಗಳ ಅವಧಿಯಲ್ಲಿ 10 ಸಾವಿರ ಸೋಂಕು ಪ್ರಕರಣಗಳು ದಾಖಲಾಗಿವೆ. ಇಲ್ಲದಿದ್ದರೆ ಇದರ ಭೀಕರತೆ ಇನ್ನಷ್ಟು ಆಗುವ ಸಾಧ್ಯತೆ ಇತ್ತು. ಅಮೆರಿಕ, ಇಟಲಿ, ಫ್ರಾನ್ಸ್‌ ಸೇರಿದಂತೆ ಕೆಲವು ದೇಶಗಳು ಈಗಾಗಲೇ ಸೋಂಕಿನ ಸಂಖ್ಯೆಯಲ್ಲಿ ಲಕ್ಷದ ಗಡಿ ದಾಟಿವೆ! ( ಏಜೆನ್ಸೀಸ್‌)
https://www.vijayavani.net/man-uses-dating-flyers-to-find-germ-free-girlfriend/
ಭರ್ಜರಿ ಹನಿಮೂನ್​!- ಐಷಾರಾಮಿ ರೆಸಾರ್ಟ್​ನಲ್ಲಿ ಇರೋದು ಇದೊಂದೇ ಜೋಡಿ- 6 ದಿನಕ್ಕೆ ಬಂದವರೀಗ 26 ದಿನ ಇರುವಂತಾಗಿದೆ ನೋಡಿ..

VIDEO & PHOTOS: ಚಿಟ್ಟೆಯಲ್ಲ ಇದು, ಹೆಣ್ಣಿನ ಬೆತ್ತಲೆ ದೇಹದ ಮೇಲೆ ಸೃಷ್ಟಿಯಾದ ಭ್ರಮೆ; ದಿಟ್ಟಿಸಿ ನೋಡಿ ನಗ್ನ ಯುವತಿಯನ್ನು ಕಾಣುತ್ತೀರಿ…!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × 3 =
Remember me
