ವಿಮಾನದೊಳಗೆಆರಾಮದಾಯಕ, ಸುಖಕರ ಪ್ರಯಾಣ ಮಾಡಲೆಂದು ಬಯಸುವವರ ಸಂಖ್ಯೆಯೇ ಹೆಚ್ಚು. ಪ್ರಯಾಣಿಕರು ಸಹ ತಮಗೆ ಅನುಕೂಲಕರವಾಗುವಂತೆ ಎಲ್ಲಾ ಮುಂಜಾಗ್ರತಾ ವ್ಯವಸ್ಥೆಗಳನ್ನು ಮಾಡಿಕೊಂಡೆ ಟ್ರಾವೆಲ್ ಮಾಡಲು ಇಚ್ಛಿಸುತ್ತಾರೆ. ಎಲ್ಲದಕ್ಕಿಂತ ಮುಖ್ಯವಾಗಿ ತಾವು ಪ್ರಯಾಣಿಸುವಾಗ ತಮ್ಮ ಸಹ ಪ್ರಯಾಣಿಕರು ತೊಂದರೆ ಕೊಡದೆ, ಮುಜುಗರ ಉಂಟು ಮಾಡದಿದ್ದರೆ ಸಾಕಪ್ಪ ಎಂದು ಯೋಚಿಸುವವರಿಗೆ ಈ ಘಟನೆ ತೀರ ಮುಜುಗರಕ್ಕೀಡುಮಾಡುವುದು ಪಕ್ಕಾ!
ಇದನ್ನೂ ಓದಿ:ಆಂಡ್ರಿಯಾ-ಅನಿರುದ್ಧ್ ಖಾಸಗಿ ಫೋಟೋ ಲೀಕ್​! ಕೊನೆಗೂ ಮೌನ ಮುರಿದ ಖ್ಯಾತ ಸಂಗೀತ ನಿರ್ದೇಶಕ
ಸಾರ್ವಜನಿಕ ಸ್ಥಳಗಳಲ್ಲಿ ಪ್ರೀತಿ ಮಾಡುವವರಿಗೆ ಅದೇನು ತಿಳಿದಿರುತ್ತೆದೆಯೋ ನಿಜಕ್ಕೂ ತಿಳಿಯದು. ತಮ್ಮನ್ನು ಇತರರು ಗಮನಿಸುತ್ತಾರೆ, ನಾವು ಹಲವರ ಮಧ್ಯೆ ಇದ್ದೇವೆ, ನಮ್ಮ ವರ್ತನೆ ಅವರಿಗೆ ಕಿರಿಕಿರಿ ಉಂಟುಮಾಡಬಾರದು ಎಂಬ ಕಿಂಚಿತ್ತು ಅರಿವಿಲ್ಲದವರೆ ಇಂತಹ ಘಟನೆಗೆ ಸಾಕ್ಷಿಯಾಗುತ್ತಾರೆ. ಇಲ್ಲಿನ ವಿಮಾನದಲ್ಲಿ ಪ್ರೇಮಿಗಳಿಬ್ಬರು ತಮಗೆ ನೀಡಿದಂತ ಆಸನದಲ್ಲಿ ಎಲ್ಲರಂತೆ ಕುಳಿತುಕೊಳ್ಳದೆ, ಮಲಗಿಕೊಂಡು ಲವ್ವಿಡವ್ವಿ ನಡೆಸಿರೋದು ಸಹ ಪ್ರಯಾಣಿಕನ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ವಿಮಾನದಲ್ಲಿ ಪ್ರಯಾಣಿಸುವಾಗ ತಮ್ಮ ಖಾಸಗಿ ಕ್ಷಣವನ್ನು ಸಾರ್ವಜನಿಕ ಸ್ಥಳದಲ್ಲಿ ಆನಂದಿಸುತ್ತಿರುವ ದಂಪತಿಗಳ ದೃಶ್ಯವನ್ನು ಸಹ ಪ್ರಯಾಣಿಕರೊಬ್ಬರು ತಮ್ಮ ಮೊಬೈಲ್​ನಲ್ಲಿ ಸರೆಹಿಡಿದು ಅದನ್ನು ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋ ಕ್ಷಣಮಾತ್ರದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಜೋಡಿಗಳಿಗೆ ಹಿಗ್ಗಾಮುಗ್ಗಾ ಕ್ಲಾಸ್​ ತೆಗೆದುಕೊಂಡಿದ್ದಾರೆ.
ಇದನ್ನೂ ಓದಿ:ಅನಂತ್ ಅಂಬಾನಿ ಜನ್ಮದಿನಕ್ಕೆ ಕಾಸ್ಟ್ಲೀ ಗಿಫ್ಟ್​! ಸ್ನೇಹಿತ ಕೊಟ್ಟ ಈ ಉಡುಗೊರೆ ವಾಚ್, ಕಾರಿ​​ಗಿಂತಲು ದುಬಾರಿ
Can't believe my view on the planeIt was like this the whole 4 hour flight. 😆😆pic.twitter.com/ruz39rLzDm
— FLEA 🇭🇹 (@babyibeenajoint)April 5, 2024

ನಾಲ್ಕು ಗಂಟೆಗಳ ಕಾಲ ಇವರಿಬ್ಬರ ಲವ್ವಿಡವ್ವಿ ಹೀಗೆ ನಡೆಯಿತು. ಅದನ್ನು ನೋಡಿ ನಮಗೆ ತೀವ್ರ ಮುಜುಗರ ಉಂಟಾಯಿತು ಎಂದು ಹೇಳಿದ್ದಾರೆ. ದೃಶ್ಯದಲ್ಲಿ ಜೋಡಿಯ ಸೀಟಿನ ಹಿಂಬದಿ ಸೀಟಿನಲ್ಲಿ ಕುಳಿತ ಮಹಿಳೆಯೊಬ್ಬರು ಕಿಟಕಿಗೆ ತನ್ನ ತಲೆ ಒರಗಿಸಿ, ಆಯಾಗಿ ನಿದ್ರಿಸುತ್ತಿರುವುದು ನೆಟ್ಟಿಗರನ್ನು ನಗೆಗಡಲಲ್ಲಿ ತೇಲಿಸಿದೆ. ಇದ್ದರೆ ಆ ರೀತಿ ಇರಬೇಕು ಎಂದು ಕೆಲವರು ಕಮೆಂಟ್ ಮಾಡಿದ್ದಾರೆ,(ಏಜೆನ್ಸೀಸ್).
ಎಕ್ಕೆ ಎಲೆ ನೋಡಿ ರೈತರು ಹೇಳ್ತಾರೆ ಭವಿಷ್ಯ! ಇದು ಯುಗಾದಿ ಹಬ್ಬದಂದು ಮಾತ್ರ ಸಾಧ್ಯ…

ಕೋವಿಡ್​ನಲ್ಲಿ ತಂದೆ ಕಳೆದುಕೊಂಡ ವೇದಾಂತ್​, ದ್ವಿತೀಯ ಪಿಯುಸಿ ಕಲಾ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:2 × one =
Remember me
