ನವದೆಹಲಿ:ಗಾಲ್ವಾನ್​ ಕಣಿವೆಯಲ್ಲಿ ಸೋಮವಾರ ನಡೆದ ಘರ್ಷಣೆ ಚೀನಾ ಯೋಧರ ಯೋಜಿತ ದಾಳಿಯಾಗಿತ್ತು ಎಂಬುದು ಈಗ ಖಚಿತವಾಗಿದೆ. ಈ ಘಟನೆಯಲ್ಲಿ ಹುತಾತ್ಮರಾದ ಕರ್ನಲ್​ ಸಂತೋಷ್​ ಬಾಬು ಅವರ ಮರಣೋತ್ತರ ಪರೀಕ್ಷೆಯಲ್ಲಿ ಇದು ದೃಢಪಟ್ಟಿದ್ದಾಗಿ ಭಾರತೀಯ ಸೇನಾಪಡೆ ಮೂಲಗಳು ಹೇಳಿವೆ.
ಚೀನಿ ಯೋಧರ ಯೋಜಿತ ದಾಳಿ ಇದಾಗಿತ್ತು ಎಂದು ಭಾರತ ಬುಧವಾರ ಬೆಳಗ್ಗೆಯೇ ಹೇಳಿತ್ತು. ಇದೀಗ ಕರ್ನಲ್​ ಸಂತೋಷ್​ ಬಾಬು ಅವರ ಮರಣೋತ್ತರ ಪರೀಕ್ಷೆ ಇದನ್ನು ಖಚಿತಪಡಿಸಿದೆ.
ಇದನ್ನೂ ಓದಿ:ಭಾರತೀಯ ಯೋಧರ ಶವಗಳ ತಲೆಕಡಿದು ವಿಕೃತಿ, ಲಡಾಖ್​ನಲ್ಲಿ ಉದ್ವಿಗ್ನ ಪರಿಸ್ಥಿತಿ
ಗಾಲ್ವಾನ್​ ಕಣಿವೆಯಲ್ಲಿ ಚೀನಾ ಅತಿಕ್ರಮಿಸಿಕೊಂಡಿದ್ದ ಪ್ರದೇಶದಲ್ಲಿ ಪಿಎಲ್​ಎ ಯೋಧರು ಟೆಂಟ್​ ಹಾಕಿಕೊಂಡಿದ್ದರು. ಒಪ್ಪಂದದ ಪ್ರಕಾರ ಆ ಟೆಂಟ್​ ಅನ್ನು ತೆರವುಗೊಳಿಸಿ ಪಿಎಲ್​ಎ ಯೋಧರು ಹಿಂದಕ್ಕೆ ಸರಿಯಬೇಕಿತ್ತು. ಇದನ್ನು ಪರಿಶೀಲಿಸಲು ಕರ್ನಲ್​ ಸಂತೋಷ್​ ಬಾಬು ಮತ್ತು ಯೋಧರು ಹೋದಾಗ ಅವರನ್ನು ಸುತ್ತುವರಿದ ಪಿಎಲ್​ಎ ಯೋಧರು ಮುಳ್ಳುತಂತಿ ಸುತ್ತಿದ್ದ ಕಬ್ಬಿಣದ ರಾಡ್​ ಮತ್ತು ಬಡಿಗೆಗಳನ್ನು ಬಳಸಿ ಹಲ್ಲೆ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.
ಇದಕ್ಕೂ ಮುನ್ನ ಕಾಂಗ್ರೆಸ್​ ಮುಖಂಡ ರಾಹುಲ್​ ಗಾಂಧಿ ಅವರ ಟೀಕೆಗೆ ಪ್ರತಿಕ್ರಿಯಿಸಿದ್ದ ವಿದೇಶಾಂಗ ಸಚಿವ ಎಸ್​. ಜೈಶಂಕರ್​, ಚೀನಿ ಯೋಧರು ಹಲ್ಲೆ ಮಾಡಿದಾಗ ಭಾರತೀಯ ಯೋಧರ ಬಳಿ ಶಸ್ತ್ರಾಸ್ತ್ರಗಳಿದ್ದವು. ಆದರೆ, ಅವನ್ನು ಬಳಸದಂತೆ 1996 ಮತ್ತು 2003ರಲ್ಲಿ ಮಾಡಿಕೊಂಡ ಒಪ್ಪಂದದನ್ವಯ ಅವನ್ನು ಅವರು ಬಳಸಲಿಲ್ಲ ಎಂದು ಸ್ಪಷ್ಟನೆ ನೀಡಿದ್ದರು.
ಗಾಲ್ವಾನ್​ ಕಣಿವೆ ಘರ್ಷಣೆ ಬಳಿಕ ಭಾರತದ ಯೋಧರು ಯಾರೂ ಕಾಣೆಯಾಗಿಲ್ಲ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × 3 =
Remember me
