ನವದೆಹಲಿ:ಇನ್​ಫೋಸಿಸ್​ನ ವಾಣಿಜ್ಯ ಕಾರ್ಯಚಟು ವಟಿಕೆಯಿಂದ ತಮ್ಮ ಪತ್ನಿ ಸುಧಾ ಮೂರ್ತಿ ಅವರನ್ನು ಹೊರಗಿಟ್ಟಿದ್ದು ತಾವು ಮಾಡಿದ ಬಹು ದೊಡ್ಡ ತಪ್ಪು ಎಂದು ಕಂಪನಿಯ ಸ್ಥಾಪಕರಲ್ಲಿ ಒಬ್ಬರಾದ ಎನ್.ಆರ್. ನಾರಾಯಣಮೂರ್ತಿ ಹೇಳಿದ್ದಾರೆ.
‘ಇನ್​ಫೋಸಿಸ್ ಸ್ಥಾಪಿಸಿದ ಆರು ಜನರಲ್ಲಿ ಸುಧಾ ಕೂಡ ಒಬ್ಬರಾಗಿದ್ದರು. ನನಗಿಂತ ಹೆಚ್ಚು ವ್ಯಾಸಂಗವನ್ನೂ ಮಾಡಿದ್ದರು. ಆರಂಭಿಕ ಹೂಡಿಕೆಗಾಗಿ 10 ಸಾವಿರ ರೂ. ಕೊಟ್ಟಿದ್ದರು. ಅದು ಮುಂದೆ 10 ಸಾವಿರ ಡಾಲರ್ ಆಗುತ್ತದೆ ಎಂಬುದು ನನ್ನ ತಿಳಿವಳಿಕೆಗೆ ಆಗ ಬರಲಿಲ್ಲ. ಕಂಪನಿಯ ಕೆಲಸದಲ್ಲಿ ಕುಟುಂಬವನ್ನು ತರಬಾರದು ಎಂಬುದು ನನ್ನ ನಂಬಿಕೆಯಾಗಿತ್ತು. ಆ ತಪ್ಪು ಆದರ್ಶದ ಬಗ್ಗೆ ನನಗೆ ಈಗ ಖೇದವಾಗುತ್ತಿದೆ’ ಎಂದು ಖಾಸಗಿ ಸುದ್ದಿವಾಹಿನಿಗೆ ನೀಡಿರುವ ಸಂದರ್ಶನದಲ್ಲಿ ತಿಳಿಸಿದ್ದಾರೆ.
‘ಕುಟುಂಬ ಸದಸ್ಯರು ಕಂಪನಿ ನಡೆಸಲು ಮುಂದಾಗಿ ಹಲವು ಕಾನೂನು ಉಲ್ಲಂಘನೆ ಮಾಡುವುದನ್ನು ಹಿಂದೆ ನಾನು ನೋಡಿದ್ದೆ. ಹಾಗಾಗಿ ನನ್ನ ಕುಟುಂಬವನ್ನು ದೂರವಿಟ್ಟೆ. ಇತ್ತೀಚೆಗೆ ಕೆಲವು ಪ್ರಾಜ್ಞರ ಜತೆ ಮಾತಾಡುವಾಗ, ನಾನು ಮಾಡಿದ್ದು ತಪ್ಪು ಎಂಬುದು ಅರಿವಿಗೆ ಬಂತು. ಕುಟುಂಬ ಸದಸ್ಯರು ಸಮರ್ಥರಾಗಿದ್ದರೆ ಅವರನ್ನು ತಡೆಯುವ ಹಕ್ಕು ನಮಗಿಲ್ಲ’ ಎಂದು ಹೇಳಿದ್ದಾರೆ.
ನನಗೆ ಕೆಲಸ ಮಾಡುವ ಮನಸ್ಸಿತ್ತು:ಇದಕ್ಕೆ ಪ್ರತಿಕ್ರಿಯಿಸಿರುವ ಸುಧಾ ಮೂರ್ತಿ, ‘ಆಗ ಕಂಪನಿಯಿಂದ ಹಿಂದೆ ಸರಿಯಲು ನನಗೂ ಮನಸ್ಸಿರಲಿಲ್ಲ. ನಾರಾಯಣಮೂರ್ತಿ ಹೇಳಿದ್ದು ಸರಿ ಅಂತ ಮೆದುಳಿಗೆ ಅನ್ನಿಸಿತು. ಸರಿಯಲ್ಲ ಅಂತ ಹೃದಯ ಹೇಳಿತು. ಆದರೆ ನೀನು ಕಂಪನಿ ಸೇರಿದರೆ ನಾನು ಹಿಂದೆ ಸರಿಯುತ್ತೇನೆ ಅಂತ ಮೂರ್ತಿ ಹೇಳಿದ್ದರಿಂದ ನಾನು ಸುಮ್ಮನಾಗಬೇಕಾಯಿತು. ಕುಟುಂಬ ಹಿತದ ದೃಷ್ಟಿಯಿಂದ ನಾನು ಕಂಪನಿಯಿಂದ ದೂರ ಇರಬೇಕಾಯಿತು’ ಎಂದು ವಿವರಿಸಿದ್ದಾರೆ.
70 ಗಂಟೆ ಕೆಲಸ, ಸಮರ್ಥನೆ:ವಾರಕ್ಕೆ 70 ಗಂಟೆ ದುಡಿಯಬೇಕು ಎಂಬ ತಮ್ಮ ಇತ್ತೀಚಿನ ಹೇಳಿಕೆಯನ್ನು ನಾರಾಯಣಮೂರ್ತಿ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ‘ನನ್ನ ಹೇಳಿಕೆಯನ್ನು ವಿರೋಧಿಸಿದವರಿಗಿಂತ ಬೆಂಬಲಿಸಿದವರೇ ಹೆಚ್ಚು. ಈಗಾಗಲೇ ಕಾರ್ವಿುಕರು, ರೈತರು, ಬಡವರು ತಮ್ಮ ಜೀವನೋಪಾಯಕ್ಕಾಗಿ ವಾರಕ್ಕೆ 70 ಗಂಟೆ ದುಡಿಯುತ್ತಿದ್ದಾರೆ. ಅವರೆಲ್ಲ ಶ್ರಮಜೀವಿಗಳು. ಆದರೆ ಶಿಕ್ಷಿತ ವರ್ಗವೇ ಅಷ್ಟು ದುಡಿಮೆ ಮಾಡುತ್ತಿಲ್ಲ. ಸರ್ಕಾರದ ರಿಯಾಯಿತಿ ದರದ ಶಿಕ್ಷಣ ಪಡೆದು ನಾವು ವಿದ್ಯಾವಂತರಾಗುತ್ತೇವೆ. ಈ ಸೌಲಭ್ಯ ಪಡೆಯದ ಜನರೇ ಕಷ್ಟಪಟ್ಟು ದುಡಿಯುತ್ತಾರೆ’ ಎಂದು ನಾರಾಯಣಮೂರ್ತಿ ಹೇಳಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × two =
Remember me
