ಗುರ್​ಗಾಂವ್:ಮಾರಣಾಂತಿಕ ಕರೊನಾವನ್ನು ಮಣಿಸಿದ ಈ ಮಹಿಳೆಗೆ ಸಾವು ಇನ್ನೊಂದು ರೂಪದಲ್ಲಿ ಬಂದೊದಗಿತು.ಇವರು ಇಟಾಲಿಯನ್ ಮಹಿಳೆ. ಭಾರತಕ್ಕೆ ಪ್ರವಾಸಕ್ಕೆ ಬಂದಿದ್ದ ಅವರಿಗೆ ಡೆಡ್ಲಿ ಕರೊನಾ ವಕ್ಕರಿಸಿತ್ತು. ಆದರೆ ಅದರಿಂದ ಚೇತರಿಸಿಕೊಂಡಿದ್ದರೂ ಕೆಲವೇ ದಿನದಲ್ಲಿ ಮತ್ತೊಂದು ಕಾಯಿಲೆಯಿಂದ ಮೃತಪಟ್ಟಿದ್ದಾರೆ.
78 ವರ್ಷದ ಈ ಮಹಿಳೆ ಸೇರಿ ಒಟ್ಟು 13 ಇಟಾಲಿಯನ್​ ಪ್ರವಾಸಿಗರಿಗೆ ಮಾರ್ಚ್​ನಲ್ಲಿ ಕರೊನಾ ವೈರಸ್ ತಗುಲಿತ್ತು. ಅವರೆಲ್ಲರಿಗೂ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಈ ಮಹಿಳೆ ಒಂದು ತಿಂಗಳು ಆಸ್ಪತ್ರೆಯಲ್ಲಿದ್ದು ಕರೊನಾದಿಂದ ಚೇತರಿಸಿಕೊಂಡಿದ್ದರು. ಆದರೆ ಶುಕ್ರವಾರ ಹೃದಯಾಘಾತದಿಂದ ಹರಿಯಾಣಾದ ಗುರ್​ಗಾಂವ್​ನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಈಕೆ ಸಾಯುವ ವೇಳೆ ಕರೊನಾ ವೈರಸ್​ ಅಂಶ ಇರಲಿಲ್ಲ. ಸಂಪೂರ್ಣ ನೆಗೆಟಿವ್​ ಆಗಿತ್ತು ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ. ಹಾಗೇ ಕರೊನಾ ಸೋಂಕಿನಿಂದ ಆಸ್ಪತ್ರೆ ಸೇರಿದ್ದ ಈ ಮಹಿಳೆಯೊಂದಿಗೆ ಇದ್ದ ಉಳಿದ 13 ಮಂದಿ ಕೂಡ ಗುಣಮುಖರಾಗಿ, ಡಿಸ್​ಚಾರ್ಜ್​ ಆಗಿದ್ದಾರೆ ಎಂದ ಮುಖ್ಯ ವೈದ್ಯಾಧಿಕಾರಿ ಮಾಹಿತಿ ನೀಡಿದ್ದಾರೆ. (ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × 5 =
Remember me
