ರೋಮ್​:ಚೀನಾವನ್ನೇ ಹಿಂದಿಕ್ಕಿರುವ ಇಟಲಿಯಲ್ಲಿ ಕಿಲ್ಲರ್​ ಕರೊನಾ ವೈರಸ್ ತನ್ನ ಮರಣ ಮೃದಂಗವನ್ನು ಮುಂದುವರಿಸಿದ್ದು, ಬಲಿಯಾದವರ ಸಂಖ್ಯೆ 4000 ದಾಟಿದೆ.
ಕಳೆದ 24 ಗಂಟೆಯಲ್ಲಿ ಇಟಲಿಯಲ್ಲಿ 627 ಮಂದಿ ಸಾವಿಗೀಡಾಗಿದ್ದಾರೆ. ಅಧಿಕಾರಿಗಳು ನೀಡಿರುವ ಅಧಿಕೃತ ಮಾಹಿತಿ ಪ್ರಕಾರ ಈವರೆಗೆ ಒಟ್ಟು 4032 ಮಂದಿ ಮೃತರಾಗಿದ್ದು, 47 ಸಾವಿರಕ್ಕೂ ಹೆಚ್ಚು ಮಂದಿಗೆ ಸೋಂಕು ತಗುಲಿದೆ.​ಇಟಲಿ ಪಾಲಿಗೆ ಈ ವಾರ ಅತ್ಯಂತ ಕೆಟ್ಟದ್ದಾಗಿದೆ. ಕಳೆದ ಭಾನುವಾರದಿಂದ ಮೂರು ದಿನಗಳವರೆಗೆ 300 ಮಂದಿಯಷ್ಟೇ ಮೃತರಾಗಿದ್ದರು. ಅದಾದ ಎರಡು ದಿನಗಳಲ್ಲಿ 400ಕ್ಕೂ ಹೆಚ್ಚು ಮಂದಿ ಹತರಾಗಿದ್ದು, ಇದೀಗ ಎರಡೇ ದಿನದಲ್ಲಿ 600ನ್ನು ದಾಟಿದೆ. ಇಡೀ ಇಟಲಿ ಇದೀಗ ಸ್ತಬ್ಧವಾಗಿದೆ.
ಸ್ಪೇನ್​ನಲ್ಲೂ ಕರೊನಾ ಕೆಂಗಣ್ಣು ಬೀರಿದ್ದು, ಮೃತರ ಸಂಖ್ಯೆಯಲ್ಲಿ ಇಟಲಿ, ಚೀನಾ ಮತ್ತು ಇರಾನ್​ ನಂತರ ನಾಲ್ಕನೇ ಸ್ಥಾನದಲ್ಲಿದೆ. ಮೃತರ ಸಂಖ್ಯೆ ಸಾವಿರ ಗಡಿಯನ್ನು ದಾಟಿದ್ದು, ಕಳೆದ 24 ಗಂಟೆಯಲ್ಲಿ 235 ಮಂದಿ ಸಾವಿಗೀಡಾಗಿದ್ದು, ಒಟ್ಟು 1002 ಮಂದಿ ಮೃತರಾಗಿದ್ದಾರೆ. ಸುಮಾರು 20,000 ಮಂದಿ ಸೋಂಕಿಗೆ ಗುರಿಯಾಗಿದ್ದು, ಅದರಲ್ಲಿ 1588 ಮಂದಿ ಚೇತರಿಸಿಕೊಂಡಿದ್ದಾರೆ.
ಸ್ಪೇನ್​ ಸಮೀಪ ದೇಶ ಪೋರ್ಚುಗಲ್​ನಲ್ಲಿ ಕೇವಲ 6 ಮಂದಿ ಸಾವಿಗೀಡಾಗಿದ್ದು, 1020 ಪಾಸಿಟಿವ್​ ಪ್ರಕರಣ ವರದಿಯಾಗಿದೆ. ಪ್ರವಾಸಿಗರ ಸ್ವರ್ಗ ಸ್ವಿಡ್ಜರ್​ಲೆಂಡ್​ನಲ್ಲೂ ಕರೊನಾ ಕರಿಛಾಯೆ ಆವರಿಸಿದ್ದು, 43 ಮೃತರೊಂದಿಗೆ 4,840 ಸೋಂಕು ಪ್ರಕರಣಗಳು ವರದಿಯಾಗಿವೆ.(ಏಜೆನ್ಸೀಸ್​)
ನಂಬದಿರಿ ಕರೊನಾ ವದಂತಿ… ಹೀಗಿದೆ ಸತ್ಯಸಂಗತಿ

ಕರೊನಾ ಕುರಿತು ಭಾರತೀಯರಿಗೆ ಹಿಂದಿಯಲ್ಲೇ ಕ್ರಿಕೆಟಿಗ ಕೆವಿನ್​ ಪೀಟರ್ಸನ್ ಜಾಗೃತಿ: ಪ್ರಧಾನಿ ಮೋದಿ ಪ್ರತಿಕ್ರಿಯೆ ಹೀಗಿತ್ತು…​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 − eighteen =
Remember me
