ಇಂಡೋ ಟಿಬೆಟಿಯನ್​ ಬಾರ್ಡರ್​ ಪೊಲೀಸ್ ಸಿಬ್ಬಂದಿಯೋರ್ವ ತನಗೇ ತಾನೇ ಶೂಟ್ ಮಾಡಿಕೊಂಡು ತೀವ್ರವಾಗಿ ಗಾಯಗೊಂಡಿದ್ದಾರೆ.
ಹಿಮಾಚಲ ಪ್ರದೇಶದ ಶಿಮ್ಲಾ ಜಿಲ್ಲೆ ರಾಂಪುರ್ ಬುಶಹರ್ ನಿಂದ 23 ಕಿ.ಮೀ.ದೂರದಲ್ಲಿರುವ ಜಿಯೋರಿಯಲ್ಲಿ ಘಟನೆ ನಡೆದಿದೆ. ಈ ಸೈನಿಕನ ಬಳಿಯಿದ್ದ ರೈಫಲ್​​ನಿಂದ ಎರಡು ಬಾರಿ ಅವರ ಮೈಯೊಳಗೆ ಗುಂಡು ಹೊಕ್ಕಿದೆ.
ಸಚಿನ್​ ಜಾಧವ್​ (23) ಗಾಯಗೊಂಡವರು. ಇವರು ಐಟಿಬಿಪಿ 43ನೇ ಬೆಟಾಲಿಯನ್​​ನಲ್ಲಿ ಕರ್ತವ್ಯದಲ್ಲಿದ್ದರು. ಇಂದು ಮುಂಜಾನೆ 5.15ರ ಹೊತ್ತಿಗೆ ಘಟನೆ ನಡೆದಿದೆ. ಆದರೆ ಇದು ಆತ್ಮಹತ್ಯೆಯಲ್ಲ. ಆಕಸ್ಮಿಕವಾಗಿ ಆಗಿದ್ದು ಎನ್ನಲಾಗಿದೆ.
ಅವರು ಐಟಿಬಿಪಿ 43ನೇ ಬೆಟಾಲಿಯನ್​​ನ ಮುಖ್ಯ​ ಗೇಟ್​ ಬಳಿ ಗಾರ್ಡ್​ ಆಗಿದ್ದರು. ಮುಂಜಾನೆ ಒಮ್ಮೆಲೆ ಗುಂಡಿನ ಶಬ್ದ ಕೇಳಿದ್ದರಿಂದ, ಅಲ್ಲಿಯೇ ಇದ್ದ ಬೇರೊಬ್ಬ ಪೊಲೀಸ್​ ಬಂದು ನೋಡಿದರೆ ಸಚಿನ್​ ಹೊಟ್ಟೆಗೆ ಎರಡು ಗುಂಡು ಹೊಕ್ಕಿತ್ತು. ರಕ್ತದ ಮಡುವಿನಲ್ಲಿ ಬಿದ್ದಿದ್ದರು.ಚಿಕಿತ್ಸೆಗಾಗಿ ಮಹಾತ್ಮಾ ಗಾಂಧಿ ವೈದ್ಯಕೀಯ ಸರ್ವೀಸ್​ ಕಾಂಪ್ಲೆಕ್ಸ್​ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಚಿನ್​ಗೆ ಆತ್ಮಹತ್ಯೆ ಮಾಡಿಕೊಳ್ಳುವ ಉದ್ದೇಶ ಏನೂ ಇರಲಿಲ್ಲ. ಆಕಸ್ಮಿಕವಾಗಿ ಗುಂಡು ಹಾರಿದ್ದು, ತನಿಖೆಯ ವೇಳೆ ಗೊತ್ತಾಗಿದೆ ಎಂದು ಎಸ್​ಪಿ ಅಭಿಮನ್ಯು ವರ್ಮಾ ತಿಳಿಸಿದ್ದಾರೆ. (ಏಜೆನ್ಸೀಸ್​)
ಕಾಂಗ್ರೆಸ್​ ಅಧ್ಯಕ್ಷನ ಪಟ್ಟ ಯಾರಿಗೆ..? ನಾಳೆಯಿಂದ ಕಾಂಗ್ರೆಸ್​ ಹೊಣೆ ಯಾರದ್ದು? ಇಲ್ಲಿದೆ ಮಾಹಿತಿ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:ten + 15 =
Remember me
