ದೆಹಲಿ:ಆಧಾರ ಮತ್ತು ಪ್ಯಾನ್​ನ್ನು ಲಿಂಕ್​ ಮಾಡದೇ ಐಟಿಆರ್​ ಫೈಲ್​ ಮಾಡಿದರೆ 6000ರೂ.ವರೆಗೆ ದಂಡ ವಿಧಿಸಲಾಗುವುದು ಎಂದು ಹಣಕಾಸು ಇಲಾಖೆ ಎಚ್ಚರಿಕೆ ನೀಡಿದೆ.
ಇದನ್ನೂ ಓದಿ:VIDEO | ಚಾಲಕನ ನಿರ್ಲಕ್ಷ್ಯಕ್ಕೆ ಪ್ರವಾಹದಲ್ಲಿ ಸಿಲುಕಿದ ಬಸ್​​, ಕಿಟಕಿ ಮೂಲಕ ಪ್ರಾಣ ಉಳಿಸಿಕೊಂಡ ಪ್ರಯಾಣಿಕರು
ಆಧಾರ್‌ನೊಂದಿಗೆ ಪ್ಯಾನ್ ಲಿಂಕ್ ಮಾಡಲು ಈ ವರ್ಷದ ಜೂನ್ 30ರ ತನಕ ಗಡುವು ನೀಡಲಾಗಿತ್ತು. ಒಂದು ವೇಳೆ ಇದನ್ನು ಮಾಡಲು ವಿಫಲರಾದರೆ, ಜುಲೈ 1, 2023ರಂದು ಅವರ ಪ್ಯಾನ್​ ಅಮಾನ್ಯವಾಗುತ್ತದೆ ಎಂದು ಹೇಳಲಾಗಿದೆ. ಒಂದು ವೇಳೆ ಪ್ಯಾನ್​ ನಿಷ್ಕ್ರಿಯಗೊಂಡರೆ ಪ್ಯಾನ್​ ಕಾರ್ಡ್​ ಆಧಾರಿತ ಕೆಲವು ಸೇವೆಗಳನ್ನು ಪಡೆಯಲು ತಮ್ಮ ಖಾತೆಗಳನ್ನು ಬಳಸಲು ಸಾಧ್ಯವಾಗುವುದಿಲ್ಲ ಎಂದು ಸೂಚಿಲಾಗಿದೆ.
ಮೇಲಾಗಿ, 2023ರ ಜುಲೈ 31ರ ಮೊದಲು ನಿಮ್ಮ ಆದಾಯ ತೆರಿಗೆ ರಿಟರ್ನ್ (ITR) ಸಲ್ಲಿಸಲು ನಿಮಗೆ ಸಾಧ್ಯವಾಗದೇ ಇರಬಹುದು. ಏಕೆಂದರೆ ITR ಗಡುವು ಒಂದು ತಿಂಗಳಿಗಿಂತ ಕಡಿಮೆಯಿರುತ್ತದೆ. ಒಂದು ವೇಳೆ ಈಗಾಗಲೇ ನೀವೂ ದಂಡ ಪಾವತಿಸಿದ ನಂತರವೂ ಪ್ಯಾನ್​ ನಿಷ್ಕ್ರಿಯವಾಗಿದ್ದರೆ, ಅದು ಮತ್ತೆ ಸಕ್ರಿಯವಾಗಲು 30 ದಿನಗಳನ್ನು ತೆಗೆದುಕೊಳ್ಳುತ್ತದೆ ಎಂದು ಹೇಳಲಾಗಿದೆ.
ಇದನ್ನೂ ಓದಿ:ರಾಜಕೀಯ ಮುಖಂಡನ ಕೌಟುಂಬಿಕ ಕಾರ್ಯಕ್ರಮದ ಮೇಲೆ ದುಷ್ಕರ್ಮಿಗಳಿಂದ ಪೆಟ್ರೋಲ್ ಬಾಂಬ್ ಎಸೆತ…
ಒಂದು ವೇಳೆ ಪ್ಯಾನ್ ಕಾರ್ಡ್​ನಿಂದಾಗಿ ಐಟಿಆರ್​ ಫೈಲ್​ ಮಾಡುವುದು ತಡವಾದರೆ, ಇದಕ್ಕೂ ಕೂಡ ದಂಡವಿದ್ದು ಸುಮಾರು 5,000 ರೂ. ಕಟ್ಟಬೇಕಾಗುತ್ತದೆ ಎಂಬುದನ್ನು ನೆನಪಿನಲ್ಲಿಡಿ. ಆದ್ದರಿಂದ, ನಿಮ್ಮ PAN ಪ್ರಸ್ತುತ ನಿಷ್ಕ್ರಿಯವಾಗಿದ್ದರೆ ನೀವು 5,000 ರೂಪಾಯಿಗಳ ತಡವಾದ ಫೈಲಿಂಗ್ ಶುಲ್ಕ ಜತೆಗೆ ಪ್ಯಾನ್ ಮತ್ತು ಆಧಾರ್​​ನ್ನು ಲಿಂಕ್​ಗಾಗಿ 1,000 ರೂ. ಶುಲ್ಕವನ್ನು ಪಾವತಿಸಬೇಕಾಗುತ್ತದೆ.
ತಮ್ಮ ಆಧಾರ್​​ನ್ನು ಪ್ಯಾನ್‌ನೊಂದಿಗೆ ಲಿಂಕ್ ಮಾಡದ ತೆರಿಗೆದಾರರು ಆದಷ್ಟು ಬೇಗ ಮಾಡಬೇಕು. ತಮ್ಮ ಆದಾಯ ತೆರಿಗೆ ರಿಟರ್ನ್‌ಗಳನ್ನು ನಿಗದಿತ ದಿನಾಂಕದೊಳಗೆ ಅಂದರೆ 31 ಜುಲೈ 2023 ರೊಳಗೆ ಸಲ್ಲಿಸಬೇಕು ಎಂದು ಶಿಫಾರಸು ಮಾಡಲಾಗಿದೆ. ಜುಲೈ 31 ರೊಳಗೆ ತಮ್ಮ ಆದಾಯ ತೆರಿಗೆ ರಿಟರ್ನ್‌ಗಳನ್ನು ಸಲ್ಲಿಸಲು ಸಾಧ್ಯವಾಗದ ತೆರಿಗೆದಾರರು 31ನೇ ಡಿಸೆಂಬರ್ 2023ರವರೆಗೆ ತಡವಾದ ರಿಟರ್ನ್‌ಗಳನ್ನು ಸಲ್ಲಿಸಬಹುದು.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen − twelve =
Remember me
