ಮುಂಬೈ :ಈ ವಾರದ ಆರಂಭದಲ್ಲಿ ನಟ ಕಾರ್ತಿಕ್ ಆರ್ಯನ್ ತಮಗೆ ಕರೊನಾ ಪಾಸಿಟೀವ್ ಬಂದಿರುವ ಬಗ್ಗೆ ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ತಿಳಿಸಿದ್ದರು. ಆಗಿನಿಂದ ಕ್ವಾರಂಟೈನ್​ನಲ್ಲಿರುವ ಈ 30 ವರ್ಷದ ಯುವ ನಟ, ಇದೀಗ ಮಹಾರಾಷ್ಟ್ರದಲ್ಲಿ ರಾತ್ರಿ ಕರ್ಫ್ಯೂ ಜಾರಿ ಮಾಡಿರುವ ಬಗ್ಗೆ ಫನ್ನಿ ಕಾಮೆಂಟ್ ಪೋಸ್ಟ್​ ಮಾಡಿದ್ದಾರೆ.
ತಮ್ಮ ವಿಶಿಷ್ಟ ಶೈಲಿಯಲ್ಲಿ ಪೋಸ್ ಮಾಡುತ್ತಾ, ಮುಂಬೈ ನಿವಾಸಿಯಾದ ಆರ್ಯನ್​ ತಮ್ಮ ಕ್ವಾರಂಟೈನ್ ಬಗ್ಗೆ ಮಾತನಾಡಿದ್ದಾರೆ. “ನನಗೆ ಲಾಕ್​ಡೌನ್ ಆಗಿಬಿಟ್ಟಿದೆ. ನಿಮಗೆಲ್ಲಾ ನೈಟ್ ಕರ್ಫ್ಯೂನಾದ್ರೂ ಆಗಲಿ” ಎಂದು ಕಾಮೆಂಟ್ ಮಾಡಿದ್ದಾರೆ! ಜೊತೆಗೆ ತಮ್ಮ ಫೋಟೋಗೆ ‘ಕೋವಿಡ್ ಸೆಲ್ಫಿ’ ಎಂದು ಹೆಸರಿಟ್ಟು, ಬಿಸಿಲು ಬೀಳುತ್ತಿರುವ ತಮ್ಮ ಮುಖದ ‘ಹೊಳೆಯುತ್ತಿರುವ ತ್ವಚೆ’ ನೋಡಿ ಎಂದಿದ್ದಾರೆ.


A post shared by KARTIK AARYAN (@kartikaaryan)
ಅವರ ಅಭಿಮಾನಿಗಳೂ ಇದನ್ನು ಜಾಲಿಯಾಗಿ ತೊಗೊಂಡು ಮೆಚ್ಚುಗೆ ಸೂಚಿಸಿದ್ದಾರೆ. ಅವರ ಈ ಪೋಸ್ಟ್ 6 ಲಕ್ಷಕ್ಕೂ ಹೆಚ್ಚು ಲೈಕ್​ಗಳನ್ನು ಪಡೆದುಕೊಂಡಿದೆ.
ಸುಮಾರು 37,000 ಹೊಸ ಕರೊನಾ ಪ್ರಕರಣಗಳನ್ನು ದಾಖಲಿಸಿರುವ ಮಹಾರಾಷ್ಟ್ರ, ದೇಶದಲ್ಲೇ ಅತ್ಯಂತ ಗಂಭೀರ ಸ್ಥಿತಿ ಹೊಂದಿದೆ. ಕರೊನಾ ಹರಡುವಿಕೆಯನ್ನು ತಡೆಯಲು ಕಠಿಣ ಕ್ರಮಗಳನ್ನು ತೆಗೆದುಕೊಳ್ಳುತ್ತಿರುವ ರಾಜ್ಯ ಸರ್ಕಾರ, ಮಾರ್ಚ್ 28 ರಿಂದ ರಾತ್ರಿ ಕರ್ಫ್ಯೂ ಘೋಷಿಸಿದೆ.(ಏಜೆನ್ಸೀಸ್)
ಮಾಲ್​ಗೆ ಹೋಗುವ ಮಂದಿಗೆ ಕರೊನಾ ಬರೆ ! ದುಡ್ಡು ತೆತ್ತು ಪರೀಕ್ಷೆ ಮಾಡಿಸಿಕೊಳ್ಳಿ !

ಮಲಗಿದ್ದ ಹೆಂಡತಿಯ ಬೆರಳು ಕತ್ತರಿಸಿದ ಪತಿರಾಯ ! ಈ ಬಗ್ಗೆ ಸಿಎಂ ಹೇಳಿದ್ದೇನು ?

ಬಾಂಗ್ಲಾದೇಶದ ಕಾಳಿ ಮಂದಿರದಲ್ಲಿ ಮೋದಿ ಪ್ರಾರ್ಥನೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 + 5 =
Remember me
