ಹೈದರಾಬಾದ್​:ಸಮಾಜದ ಎಲ್ಲಾ ವರ್ಗದ ಜನರಿಗಾಗಿ ಕೆಲಸ ಮಾಡಿರುವ​ ಪಕ್ಷದ ಸರ್ಕಾರವನ್ನು ತೆಲಂಗಾಣದಲ್ಲಿ ನೋಡುವುದು ತಮ್ಮ ಕನಸು ಎಂದು ಕಾಂಗ್ರೆಸ್ ವರಿಷ್ಠೆ ಸೋನಿಯಾ ಗಾಂಧಿ ಹೇಳಿದ್ದಾರೆ.
ಹೈದರಾಬಾದ್​ನ ತುಕ್ಕುಗುಡ್ಡದಲ್ಲಿ ಸಾರ್ವಜನಿಕ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಸೋನಿಯಾ ನಾವು ಈಗಾಗಲೇ ಆರು ಗ್ಯಾರಂಟಿಗಳನ್ನು ಘೋಷಣೆ ಮಾಡಿದ್ದೇವೆ. ನಾವು ಮಾತುಕೊಟ್ಟಂತೆ ಪ್ರತಿಯೊಂದನ್ನು ಈಡೇರಿಸಲಿದ್ದೇವೆ. ಮುಂಬರುವ ವಿಧಾನಸಭೆ ಚುನಾವನೆಯಲ್ಲಿ ಜನರು ಕಾಂಗ್ರೆಸ್​ ಪಕ್ಷವನ್ನು ಬೆಂಬಲಿಸಬೇಕು ಎಂದು ವಿನಂತಿಸಿಕೊಂಡಿದ್ದಾರೆ.
ಇದನ್ನೂ ಓದಿ:VIDEO| ಪಾಕಿಸ್ತಾನದ ಸೀಮಾಳಿಂದ ಪ್ರಧಾನಿ ಮೋದಿ ಜನ್ಮದಿನ ಆಚರಣೆ
ಮಹಾಲಕ್ಷ್ಮೀ ಯೋಜನೆ ಅಡಿಯಲ್ಲಿ ಮಹಿಳೆಯರಿಗೆ ಪ್ರತಿತಿಂಗಳು 2,500 ರೂಪಾಯಿ ಹಣವನ್ನು ನೀಡಲಾಗುವುದು. ರಾಜ್ಯಾದ್ಯಂತರ ಮಹಿಳೆಯರಿಗೆ ಉಚಿತ ಬಸ್​ ಪ್ರಯಾಣ, ಪ್ರತಿ ಸಿಲಿಂಡರ್​ಅನ್ನು 500ರೂಪಾಯಿಗೆ ನೀಡಲಾಗುವುದು. ದಯವಿಟ್ಟು ನೀವೆಲ್ಲರೂ ಕಾಂಗ್ರೆಸ್​ ಪಕ್ಷವನ್ನು ಬೆಂಬಲಿಸಬೇಕು ಎಂದಿದ್ದಾರೆ.
ತಲೆಂಗಾಣ ರಾಜ್ಯ ಉದಯವಾದ ಸಂದರ್ಭದಲ್ಲಿ ನಾನು ಮತ್ತು ಪಕ್ಷದ ಸಹೋದ್ಯೋಗಿಗಳು ಭಾಗಿಯಾಗಿದ್ದೆವು. ರಾಜ್ಯವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುವುದು ನಮ್ಮ ಕರ್ತವ್ಯವಾಗಿದೆ. ಸಮಾಜದ ಎಲ್ಲಾ ವರಗದ ಜನರಿಗಾಗಿ ದುಡಿದಿರುವ ಕಾಂಗ್ರೆಸ್​ ಪಕ್ಷದ ಸರ್ಕಾರವನ್ನು ತೆಲಂಗಾಣದಲ್ಲಿ ನೋಡುವುದೆ ನನ್ನ ಗುರಿ ಎಂದು ಎಐಸಿಸಿ ವರಿಷ್ಠೆ ಸೋನಿಯಾ ಗಾಂಧಿ ಹೇಳಿದ್ದಾರೆ.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 − seventeen =
Remember me
