ಮುಂಬೈ:ತಮ್ಮ ಸೋದರಳಿಯ ಅಜಿತ್​ ​ಬಿಜೆಪಿ-ಶಿವಸೇನೆ(ಏಕನಾಥ್​ ಶಿಂಧೆ) ಬಣದ ಸರ್ಕಾರವನ್ನು ಬೆಂಬಲಿಸಿರುವ ಕುರಿತು ಪ್ರತಿಕ್ರಿಯಿಸಿರವ ನ್ಯಾಷನಲಿಸ್ಟ್​ ಕಾಂಗ್ರೆಸ್​ ಪಕ್ಷ(NCP)ದ ಮುಖ್ಯಸ್ಥ ಶರದ್​ ಪವಾರ್​ ಶೀಘ್ರವೇ ಎಲ್ಲ ಸತ್ಯಾಂಶ ಹೊರಬೀಳಲಿದೆ ಎಂದು ಹೇಳಿದ್ದಾರೆ.
ನಾನು ಎರಡು ದಶಕಗಳಿಂದ ಕಟ್ಟಿ ಬೆಳಸಿರುವ ಪಕ್ಷವು ಬಿಜೆಪಿ-ಶಿವಸೇನೆ(ಏಕನಾಥ್​ ಶಿಂಧೆ) ಬಣದ ಸರ್ಕಾರವನ್ನು ಬೆಂಬಲಿಸುತ್ತದೆ ಎಂದು ಹೇಳಿರುವುದರಿಂದ ತೀವ್ರ ಬೇಜಾರಾಗಿದೆ. ಈ ಸಂಬಂಧ ಪ್ರಮುಖರ ಸಭೆ ಕರೆಯಲಾಗಿದ್ದು, ಶೀಘ್ರವೇ ಎಲ್ಲವೂ ಹೊರಬೀಳಲಿದೆ ಎಂದು ತಿಳಿಸಿದ್ದಾರೆ.
ಇದು ಗೂಗ್ಲಿ ಅಲ್ಲ ದೊಡ್ಡ ಡಕಾಯಿತಿಯಾಗಿದ್ದು, NCPಯ ಕೆಲವು ಸಹೋದ್ಯೋಗಿಗಳನ್ನು ಭ್ರಷ್ಟಾಚಾರ ಆರೋಪಗಳಿಂದ ಮುಕ್ತಗೊಳಿಸಿ ಅವರನ್ನು ಸಚಿವರನ್ನಾಗಿ ಸಂಪುಟಕ್ಕೆ ಸೇರಿಸಿಕೊಂಡಿದ್ದಕ್ಕೆ ಪ್ರಧಾನಿ ಮೋದಿ ಅವರನ್ನು ಅಭಿನಂದಿಸುತ್ತೇನೆ. ಅಜಿತ್​ ಪವಾರ್​ ಬಂಡಾಯದಿಂದ ಪಕ್ಷಕ್ಕೆ ಯಾವುದೇ ರೀತಿಯ ಹಾನಿಯಾಗಿಲ್ಲ.
#WATCH| This is not 'googly', it is a robbery. It is not a small thing, says NCP chief Sharad Pawar on Ajit Pawar joining the NDA government in Maharashtrapic.twitter.com/uH4xqejsKs
ಇದನ್ನೂ ಓದಿ:ಹಿಂದೆ ಒಂದು ಪಕ್ಷ ಲೋಕಾಯುಕ್ತ ಅಧಿಕಾರವನ್ನೇ ಕಿತ್ತುಕೊಳ್ತು: ಸಂತೋಷ್​ ಹೆಗ್ಡೆ
ಪಕ್ಷಕ್ಕೂ ಅಜಿತ್​ ಪವಾರ್​ ಬಂಡಾಯಕ್ಕೂ ಯಾವುದೇ ಸಂಬಂಧವಿಲ್ಲ. ಇದು ಅವರ ವೈಯಕ್ತಿಕ ನಿರ್ಧಾರವಾಗಿದ್ದು, ಈ ಹಿಂದೆ ಇದೇ ರೀತಿ ಹಲವು ಬಾರಿ ಆಗಿತ್ತು. ಆದರೆ, ನಾವು ಪಕ್ಷವನ್ನು ಪುನಶ್ಚೇತನಗೊಳಿಸುವಲ್ಲಿ ಯಶಸ್ವಿಯಾಗಿದ್ದೇವೆ ಎಂದು ಶರದ್​ ಪವಾರ್​ ತಿಳಿಸಿದ್ದಾರೆ.
ಕಳೆದ ತಿಂಗಳು ಎನ್​ಸಿಪಿ ಅಧ್ಯಕ್ಷನ ಸ್ಥಾನಕ್ಕೆ ಶರದ್​ ಪವಾರ್​ ರಾಜೀನಾಮೆ ನೀಡಿದ್ದರು. ಬಳಿಕ ನಡೆದ ರಾಜಕೀಯ ಹೈಡ್ರಾಮಾದಲ್ಲಿ ಅವರು ತಮ್ಮ ನಿರ್ಧಾರವನ್ನು ಹಿಂಪಡೆದಿದ್ದರು. ಬಳಿಕ ನಡೆದ ಕಾರ್ಯಾಧ್ಯಕರ ನೇಮಕದಲ್ಲಿ ತಮ್ಮನ್ನು ಪರಿಗಣಿಸಿಲ್ಲ ಎಂಬ ಕಾರಣಕ್ಕೆ ಶರದ್​ ವಿರುದ್ಧ ಮುನಿಸಿಕೊಂಡಿದ್ದ, ಅಜಿತ್​ ವಿಪಕ್ಷ ನಾಯಕನ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
ಇದಾದ ಕೆಲ ದಿನಗಳ ಬಳಿಕ ನಡೆದ ರಾಜಕೀಯ ಬೆಳವಣಿಗೆಯಲ್ಲಿ ಅಜಿತ್​ ಪವಾರ್​ ಬಿಜೆಪಿ-ಶಿವಸೇನೆ(ಏಕನಾಥ್​ ಶಿಂಧೆ) ಬಣದ ಸರ್ಕಾರವನ್ನು ಬೆಂಬಲಿಸುವ ಮೂಲಕ ಡಿಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಇವರ ಜೊತೆಗೆ ಎನ್​ಸಿಪಿಯ ಕೆಲ ಬಂಡಾಯ ಶಾಸಕರು ಸಚಿವರಾಗಿ ಪದಗ್ರಹಣ ಮಾಡಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen + 9 =
Remember me
