|ಜುಡಿತ್ ರೇವಿನ್ಕಾನ್ಸಲ್ ಜನರಲ್, ಯು.ಎಸ್. ಕಾನ್ಸಲೇಟ್ ಜನರಲ್, ಚೆನ್ನೈ
ಇದು ವಿಶ್ವದಾದ್ಯಂತ ಪ್ರಜಾಪ್ರಭುತ್ವಗಳಿಗೆ ಅಪಾಯಕಾರಿ ಸನ್ನಿವೇಶ. ಯೂಕ್ರೇನ್ ಮೇಲೆ ರಷ್ಯಾ ಆರಂಭಿಸಿದ ದಾಳಿಯು, ವಿಶ್ವಶಾಂತಿ ಮತ್ತು ಪ್ರಜಾಪ್ರಭುತ್ವದ ತತ್ತ್ವಗಳ ಮೇಲಿನ ಆಕ್ರಮಣವೂ ಆಗಿದೆ. ಇದು ಇಂಡೋ-ಪೆಸಿಫಿಕ್ ಸೇರಿದಂತೆ ಜಗತ್ತಿನ ಎಲ್ಲ ದೇಶಗಳನ್ನು ಅಪಾಯಕ್ಕೆ ಸಿಲುಕಿಸಿದೆ. ಸ್ವಯಂ-ಆಡಳಿತದಿಂದ ಮಾನವಹಕ್ಕುಗಳವರೆಗೆ, ಇಂಧನದಿಂದ ಆಹಾರಭದ್ರತೆಯವರೆಗೆ ಎಲ್ಲೆಡೆ ಇದರ ಪರಿಣಾಮಗಳು ಕಾಣುತ್ತಿವೆ. ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆ ಕುರಿತಾದ ಒಮ್ಮತವನ್ನು ಭಗ್ನಗೊಳಿಸಲು ಸರ್ವಾಧಿಕಾರಿ ಶಕ್ತಿಗಳು ಪ್ರಯತ್ನಿಸುತ್ತಿವೆ. ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುತಿನ್ ಈ ಪ್ರಯತ್ನದಲ್ಲಿ ಯಶಸ್ವಿಯಾದರೆ, ಜಗತ್ತಿನಲ್ಲಿ ಬಲವಿದ್ದವನು ಮಾಡಿದ್ದೆಲ್ಲ ಸರಿ ಎಂಬಂತಾದರೆ, ನಮ್ಮಮಕ್ಕಳ ಭವಿಷ್ಯವು ಅಸುರಕ್ಷಿತವಾಗಿರುತ್ತದೆ. ಆದ್ದರಿಂದಲೇ ಕೈಕಟ್ಟಿ ಕೂರುವಂತಿಲ್ಲ. ನಾವೆಲ್ಲರೂ ಯಾವುದು ಸರಿಯೋ ಅದಕ್ಕಾಗಿ ಕಟಿಬದ್ಧರಾಗಿ ನಿಲ್ಲಬೇಕು.
ಪುತಿನ್ ಯೂಕ್ರೇನ್ ಮೇಲೆ ದಾಳಿಯನ್ನು ಸುದೀರ್ಘವಾಗಿ ಯೋಜಿಸಿದ್ದಾರೆ. ಅವರು ವ್ಯವಸ್ಥಿತವಾಗಿ 1.50 ಲಕ್ಷಕ್ಕೂ ಹೆಚ್ಚು ಸೇನಾ ತುಕಡಿಗಳು, ಯಂತ್ರೋಪಕರಣಗಳು ಮತ್ತು ಫೀಲ್ಡ್ ಆಸ್ಪತ್ರೆಗಳನ್ನು ಯೂಕ್ರೇನ್ ಗಡಿಯಲ್ಲಿ ಜಮಾವಣೆ ಮಾಡಿದ್ದು, ಅವರ ಉದ್ದೇಶವನ್ನು ಸ್ಪಷ್ಟಪಡಿಸುತ್ತದೆ. ಅವರ ಕಪೋಲಕಲ್ಪಿತ ಭದ್ರತಾ ಆತಂಕಗಳನ್ನು ನಿವಾರಿಸಿ ಅನಗತ್ಯ ಸಂಘರ್ಷ ಮತ್ತು ಮಾನವಸಂಕಷ್ಟ ತಪ್ಪಿಸುವ ಒಳ್ಳೆಯ ಉದ್ದೇಶದ ಪ್ರತಿ ಪ್ರಯತ್ನವನ್ನೂ ನಿರಾಕರಿಸಿದರು. ರಷ್ಯಾದ ಪ್ರಾಕ್ಸಿಗಳು ಡೊನ್ಬಾಸ್ನಲ್ಲಿ ಶೆಲ್ಲಿಂಗ್ ದಾಳಿ ತೀವ್ರಗೊಳಿಸಿದ್ದನ್ನು ನಾವು ನೋಡಿದ್ದೇವೆ. ರಷ್ಯಾದ ಸರ್ಕಾರ ಯೂಕ್ರೇನ್ ವಿರುದ್ಧ ಸೈಬರ್-ಕಾರ್ಯಾಚರಣೆ ನಡೆಸಿದ್ದನ್ನು ಕಂಡಿದ್ದೇವೆ. ಯೂಕ್ರೇನ್ ಮೇಲಿನ ಆಕ್ರಮಣ ಮತ್ತು ನ್ಯಾಟೊ ಕುರಿತಾಗಿ ಮಾಡಿದ ತಳಬುಡವಿಲ್ಲದ ಆರೋಪಗಳನ್ನು ಸಮರ್ಥಿಸಿಕೊಳ್ಳಲು ಮಾಸ್ಕೋದಲ್ಲಿ ರಾಜಕೀಯ ನಾಟಕ ರಚಿಸಿದ್ದನ್ನೂ ಕಂಡಿದ್ದೇವೆ.
ಪುತಿನ್ ಅವರ ದಾಳಿ ಯೂಕ್ರೇನ್​ನಾದ್ಯಂತ ಅಪಾರ ಸಾವುನೋವು ಮತ್ತು ವಿನಾಶಕ್ಕೆ ಕಾರಣವಾಗಿದೆ. ವಿವೇಚನಾರಹಿತ ದಾಳಿಗಳು ಮತ್ತು ಉದ್ದೇಶಪೂರ್ವಕವಾಗಿ ನಾಗರಿಕರನ್ನೇ ಗುರಿಯಾಗಿಸಿಕೊಂಡು ನಡೆಸಿದ ದಾಳಿಗಳು ಮತ್ತು ದೌರ್ಜನ್ಯಗಳ ಕುರಿತು ಅನೇಕ ವಿಶ್ವಾಸಾರ್ಹ ವರದಿಗಳನ್ನು ನೋಡಿದ್ದೇವೆ. ರಷ್ಯಾದ ಪಡೆಗಳು ವಸತಿ ಸಮುಚ್ಛಯಗಳು, ಶಾಲೆಗಳು, ಆಸ್ಪತ್ರೆಗಳು, ಪ್ರಮುಖ ಮೂಲಸೌಕರ್ಯಗಳು, ನಾಗರಿಕ ವಾಹನಗಳು, ಶಾಪಿಂಗ್​ಸೆಂಟರ್​ಗಳು ಮತ್ತು ಆಂಬುಲೆನ್ಸ್​ಗಳನ್ನು ನಾಶಮಾಡಿವೆ. ಇದರಲ್ಲಿ ಸಾವಿರಾರು ಅಮಾಯಕ ನಾಗರಿಕರು ಮೃತರಾಗಿದ್ದು, ಅನೇಕರು ಗಾಯಗೊಂಡಿದ್ದಾರೆ. ರಷ್ಯಾ ಪಡೆಗಳ ದಾಳಿಗೆ ತುತ್ತಾದ ಕಟ್ಟಡಗಳು ಜನಬಳಕೆಯಲ್ಲಿದ್ದವು ಎಂಬುದನ್ನು ಸ್ಪಷ್ಟವಾಗಿ ಗುರುತಿಸಬಹುದಾಗಿತ್ತು. ಮಾರಿಯುಪೊಲ್​ನಲ್ಲಿನ ಹೆರಿಗೆ ಆಸ್ಪತ್ರೆ ಮತ್ತು ರಂಗಮಂದಿರದ ಹೊರಗಡೆ ಆಕಾಶದಿಂದಲೇ ಕಾಣುವಂತೆ ದೊಡ್ಡ ದೊಡ್ಡ ಅಕ್ಷರಗಳಲ್ಲಿ ರಷ್ಯನ್ ಭಾಷೆಯಲ್ಲೇ ಮಕ್ಕಳು ಎಂದು ಬರೆಯಲಾಗಿತ್ತು. ಪ್ರತಿದಿನ ರಷ್ಯಾ ನಡೆಸುತ್ತಿರುವ ಬರ್ಬರದಾಳಿಗೆ ಮಹಿಳೆಯರು ಮಕ್ಕಳೂ ಸೇರಿದಂತೆ ಅಮಾಯಕ ನಾಗರಿಕರು ಬಲಿಯಾಗುತ್ತಿದ್ದಾರೆ, ಗಾಯಗೊಂಡವರ ಸಂಖ್ಯೆಯೂ ಏರುತ್ತಿದೆ.
ಯೂಕ್ರೇನ್ ಜನರು 30 ವರ್ಷಗಳ ಕಾಲ ಸ್ವಾತಂತ್ರ್ಯವನ್ನು ಅನುಭವಿಸಿದ್ದಾರೆ. ಅವರ ದೇಶವನ್ನು ಮತ್ತೆ ಹಿಂದಕ್ಕೆ ಕೊಂಡೊಯ್ಯವ ಯಾರನ್ನೇ ಆದರೂ ಸಹಿಸಿಕೊಳ್ಳುವ ಪ್ರಶ್ನೆಯೇ ಇಲ ್ಲ ಎಂದಿದ್ದಾರೆ. ವಿಶ್ವವು ಈ ಎಲ್ಲ ಬೆಳವಣಿಗೆಗಳನ್ನು ಹತ್ತಿರದಿಂದ ಗಮನಿಸುತ್ತಿದೆ. ನಾವು ಈ ದೌರ್ಜನ್ಯಗಳಿಗೆ ಕಾರಣವಾದವರನ್ನು ಉತ್ತರದಾಯಿಯಾಗಿಸಲು ಕ್ರಿಮಿನಲ್ ಕಾನೂನು ಒಳಗೊಂಡು ಲಭ್ಯವಿರುವ ಪ್ರತಿಯೊಂದು ಸಾಧನ ವನ್ನೂ ಬಳಸುತ್ತೇವೆ. ಅಮೆರಿಕ ಮತ್ತು ಅದರ ಮಿತ್ರರಾಷ್ಟ್ರಗಳು ಹಾಗೂ ಪಾಲುದಾರರು ನಾಗರಿಕರನ್ನು ಸುರಕ್ಷಿತವಾಗಿರಿಸಲು, ನಿರಾಶ್ರಿತರ ಮತ್ತು ಯೂಕ್ರೇನ್ ಒಳಗಡೆ ನಿರ್ವಸಿತರಾದವರ ರಕ್ಷಣೆ ಮತ್ತು ಜೀವ ರಕ್ಷಕ ಅಗತ್ಯಗಳ ಪೂರೈಕೆಗೆ ಸತತವಾಗಿ ಶ್ರಮಿಸುತ್ತಿವೆ. ಸರ್ವಾಧಿಕಾರಿ ನೆರೆರಾಷ್ಟ್ರದಿಂದ ಸೇನಾ ದುರಾಕ್ರಮಣವನ್ನು ಎದುರಿಸುತ್ತಿರುವುದು ಯೂಕ್ರೇನ್ ಮಾತ್ರವಲ್ಲ ಎಂಬುದನ್ನು ಗುರುತಿಸಿದ್ದೇವೆ.
ಗಲ್ವಾನ್ ದಾಳಿಯ ಸಂದರ್ಭದಲ್ಲಿ ಚೀನಾದ ಆಕ್ರಮಣ ವನ್ನು ಪ್ರತಿರೋಧಿಸುವ ಪ್ರಯತ್ನಗಳಲ್ಲಿ ಅಮೆರಿಕ ಭಾರತದೊಂದಿಗೆ ಹಿಂದೆಂದಿಗಿಂತಲೂ ಹತ್ತಿರವಾಗಿ ಕೆಲಸ ಮಾಡಿದೆ. ಗಲ್ವಾನ್ ದಾಳಿಯನ್ನು ವಿರೋಧಿಸಿ ನಮ್ಮ ಹೇಳಿಕೆಗಳು ಸ್ಪಷ್ಟ ವಾಗಿದ್ದಂತೆಯೇ ಯೂಕ್ರೇನ್ ಮೇಲಿನ ದಾಳಿಯ ಪ್ರತಿಕ್ರಿಯೆಯನ್ನೂ ನೀಡಿದ್ದೇವೆ. ಸರ್ವಾಧಿಕಾರಿ ಶಕ್ತಿಗಳು ಅಮೆರಿಕ, ಭಾರತ ಮತ್ತಿತರೆ ಪ್ರಜಾಪ್ರಭುತ್ವಗಳು ಕಟ್ಟಿ ಬೆಳೆಸಿದ ಸ್ವಾತಂತ್ರ್ಯವನ್ನು ಬೆಂಬಲಿಸುವ ನಿಯಮಾಧಾರಿತ ವ್ಯವಸ್ಥೆಯನ್ನು ಮುರಿಯುವ ಬೆದರಿಕೆ ಒಡ್ಡುತ್ತಿವೆ. ಈ ಸಮಯದಲ್ಲಿ ನಾವು ಒಗ್ಗೂಡಬೇಕಿದೆ. ನೆರೆಯವರನ್ನು ಬೆದರಿಸುವ, ಕಾನೂನನ್ನು ಕಡೆಗಣಿಸುವವರ ವಿರುದ್ಧ ನಿಲ್ಲಬೇಕಿದೆ. ಸೇನೆ, ಆರ್ಥಿಕ ಅಥವಾ ರಾಜಕೀಯ ಯಾವುದೇ ಬಗೆಯ ಒತ್ತಡಕ್ಕೆ ಗುರಿಯಾಗದೆ ತಮ್ಮ ದೇಶದ ಭವಿಷ್ಯವನ್ನು ನಿರ್ಧರಿಸುವ ಹಕ್ಕು ಪ್ರತಿ ಸಾರ್ವಭೌಮ ದೇಶಕ್ಕಿದೆ ಎಂಬ ನಾವೆಲ್ಲ ನಂಬಿದ ಮೌಲ್ಯವನ್ನು ಕುಂದಿಸುವಲ್ಲಿ ಪುತಿನ್ ಸೋತಿದ್ದಾರೆ. ಯುರೋಪ್ ಮಾತ್ರವಲ್ಲ, ಇಂಡೊ-ಫೆಸಿಪಿಕ್ ಮತ್ತು ವಿಶ್ವದಾದ್ಯಂತ ಎಲ್ಲಿಯೇ ಆದರೂ ಈ ಮೌಲ್ಯಗಳ ರಕ್ಷಣೆಗೆ ಧಾವಿಸಲು ಅಮೆರಿಕ ಹಿಂಜರಿಯುವುದಿಲ್ಲ.
ಇಬ್ಬರು ಮಾಜಿ ಸಿಎಂ, ಕುಂ.ವೀ. ಸೇರಿ 61ಕ್ಕೂ ಅಧಿಕ ಸಾಹಿತಿಗಳಿಗೆ ಕೊಲೆ ಬೆದರಿಕೆ!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × 5 =
Remember me
