ಲಖನೌ:ಉತ್ತರಪ್ರದೇಶದ ಹತ್ರಾಸ್​​ ಗ್ಯಾಂಗ್​ರೇಪ್​​ನ್ನು ಇನ್ನೊಂದು ನಿರ್ಭಯಾ ಕೇಸ್​ ಎಂದೇ ಹೇಳಲಾಗುತ್ತಿದೆ. ನಾಲ್ವರು ಕಾಮುಕರನ್ನೂ ಬಂಧಿಸಲಾಗಿದ್ದು, ವಿಚಾರಣೆಯೂ ನಡೆಯುತ್ತಿದೆ. ಹಾಗೇ ರಾಜ್ಯದಲ್ಲಿ ಆಕ್ರೋಶ, ಪ್ರತಿಭಟನೆಗಳೂ ಹೆಚ್ಚಾಗಿವೆ.
ಇನ್ನು ಈ ಬಗ್ಗೆ ಬಿಜೆಪಿ ನಾಯಕ ಕೈಲಾಶ್​ ವಿಜಯ್​ವಾರ್ಗಿಯಾ ಅವರು ಒಂದು ಮಹತ್ವದ, ಮಾರ್ಮಿಕ ಹೇಳಿಕೆಯನ್ನು ನೀಡಿದ್ದಾರೆ. ಇದು ವಿವಾದಕ್ಕೂ ಕಾರಣವಾಗಿದೆ.  ದಲಿತ ಯುವತಿಯ ಮೇಲೆ ಕ್ರೂರವಾಗಿ ಅತ್ಯಾಚಾರ ಮಾಡಿದ ಮೇಲ್ವರ್ಗದ ನಾಲ್ವರು ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಭರವಸೆಯನ್ನು ನೀಡಿದ ಕೈಲಾಶ್​, ಪರೋಕ್ಷವಾಗಿ ಆರೋಪಿಗಳ ಎನ್​ಕೌಂಟರ್ ಬಗ್ಗೆ ಮಾತನಾಡಿದ್ದಾರೆ.ಇದನ್ನೂ ಓದಿ:ವಿದ್ಯಾರ್ಥಿಗಳೇ, ಸದ್ಯಕ್ಕೆ ನೀವು ಶಾಲಾ-ಕಾಲೇಜುಗಳಿಗೆ ಹೋಗುವಂತಿಲ್ಲ!
ಅತ್ಯಾಚಾರ ಆರೋಪಿಗಳನ್ನು ಬಂಧಿಸಲಾಗಿದೆ. ಫಾಸ್ಟ್ ಟ್ರ್ಯಾಕ್​ ಕೋರ್ಟ್​ನಲ್ಲಿ ವಿಚಾರಣೆ ನಡೆಯಲಿದೆ. ಆರೋಪಿಗಳು ಖಂಡಿತ ಜೈಲು ಸೇರುತ್ತಾರೆ. ಇಲ್ಲಿ ಯೋಗಿ ಆದಿತ್ಯನಾಥ್​ ಅವರು ಮುಖ್ಯಮಂತ್ರಿಯಾಗಿದ್ದಾರೆ. ಯೋಗಿ ರಾಜ್ಯದಲ್ಲಿ ಯಾವ ವಾಹನ, ಯಾವುದೇ ಸ್ಥಳದಲ್ಲಿ, ಯಾವುದೇ ಸಮಯದಲ್ಲಿ ಬೇಕಾದರೂ ಉರುಳಬಹುದು ಎಂಬುದು ನನಗೂ ಗೊತ್ತಿದೆ ಎಂದು ಹೇಳಿದ್ದಾರೆ. ಈ ಮೂಲಕ ಜುಲೈನಲ್ಲಿ ಗ್ಯಾಂಗ್​ಸ್ಟರ್​ ವಿಕಾಸ್​ ದುಬೆಯನ್ನು ಎನ್​ಕೌಂಟರ್ ಮಾಡಿದ ಪ್ರಕರಣವನ್ನು ನೆನಪಿಸಿದ್ದಾರೆ.ಇದನ್ನೂ ಓದಿ:ನಿರುದ್ಯೋಗ ಹೆಚ್ಚುತ್ತಿರುವುದೇ ಅತ್ಯಾಚಾರ ಜಾಸ್ತಿಯಾಗಲು ಕಾರಣ: ಸುಪ್ರೀಂ ಮಾಜಿ ನ್ಯಾಯಮೂರ್ತಿ
ಬಂಧಿಸಲು ಹೋಗಿದ್ದ 8 ಕಾನ್ಪುರ ಪೊಲೀಸರನ್ನು ವಿಕಾಸ್​ ದುಬೆ ಸಹಚರರು ಕೊಂದಿದ್ದರು. ನಂತರ ಮಧ್ಯಪ್ರದೇಶದ ಉಜ್ಜಯಿನಿ ದೇಗುಲದಲ್ಲಿ ದುಬೆಯನ್ನು ಬಂಧಿಸಿ, ಉತ್ತರ ಪ್ರದೇಶಕ್ಕೆ ಕರೆತರುವ ಮಾರ್ಗದಲ್ಲಿ ಎನ್​ಕೌಂಟರ್ ಮಾಡಲಾಗಿತ್ತು. ಮಳೆಯಿಂದ ತೊಯ್ದಿದ್ದ ರಸ್ತೆಯಲ್ಲಿ ಪೊಲೀಸ್ ವಾಹನ ಪಲ್ಟಿ ಆಯಿತು..ಈ ವೇಳೆ ದುಬೆ ತಪ್ಪಿಸಿಕೊಳ್ಳಲು ಯತ್ನಿಸಿದ್ದರಿಂದ ಎನ್​ಕೌಂಟರ್ ಮಾಡಲಾಯಿತು ಎಂದು ಪೊಲೀಸರು ತಿಳಿಸಿದ್ದರು. ಇದೀಗ ರೇಪ್​ ವಿಚಾರ ಮಾತನಾಡುವಾಗ ಆ ಎನ್​​ಕೌಂಟರ್ ಆದ ಸಂದರ್ಭವನ್ನು ಬಿಜೆಪಿ ಮುಖಂಡ ನೆನಪಿಸಿದ್ದು ವಿವಾದಕ್ಕೆ ಕಾರಣವಾಗಿದೆ. ಪ್ರಚೋದನಾತ್ಮಕ ಹೇಳಿಕೆ ನೀಡುತ್ತಿದ್ದಾರೆ ಎಂದು ಆರೋಪ ಕೇಳಿಬರುತ್ತಿದೆ. (ಏಜೆನ್ಸೀಸ್​)
#WATCHThe accused have been arrested. The case has been sent to a fast-track court. The accused will be sent to jail… Yogi Ji jo wahan ke CM hain, main jaanta hun ki unke pradesh main kabhi bhi gaadi palat jati hai: BJP leader Kailash Vijayvargiya on#Hathrasgang-rape casepic.twitter.com/ksSERx3nu0
— ANI (@ANI)September 30, 2020


ಗ್ಯಾಂಗ್​ರೇಪ್​ ಆರೋಪಿಗಳಿಗೆ ಕಠಿಣ ಶಿಕ್ಷೆ ಕಟ್ಟಿಟ್ಟ ಬುತ್ತಿ….: ಸಂತ್ರಸ್ತೆಯ ಕುಟುಂಬಕ್ಕೆ ಸಿಎಂ ಭರವಸೆ

‘ದೇಗುಲಗಳನ್ನು ಧ್ವಂಸ ಮಾಡಿ ಕಟ್ಟಿರುವ ಮಸೀದಿಗಳನ್ನು ಒಡೆಯಿರಿ’- ಪ್ರಧಾನಿಗೆ ಮುಸ್ಲಿಂ ಮುಖಂಡನ ಪತ್ರ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:15 − two =
Remember me
