ನವದೆಹಲಿ:ಕರೊನಾ ಲಸಿಕೆಗಾಗಿ ವಿಶ್ವಾದ್ಯಂತ 140 ಕಂಪನಿಗಳು ಸಂಶೋಧನೆಯಲ್ಲಿ ತೊಡಗಿವೆ. ಭಾರತದಲ್ಲೂ 6ಕ್ಕೂ ಅಧಿಕ ಕಂಪನಿಗಳು ಲಸಿಕೆ ಅಭಿವೃದ್ಧಿಯಲ್ಲಿ ಕಾರ್ಯದಲ್ಲಿವೆ.
ಆದರೆ, ಸದ್ಯ ಜಾಗತಿಕವಾಗಿ ಮುಂಚೂಣಿಯಲ್ಲಿರುವ ಕಂಪನಿಗಳು ಒಟ್ಟು 11. ಇವುಗಳು ಅಭಿವೃದ್ಧಿಪಡಿಸಿರುವ ಔಷಧಗಳು ಮಾನವರ ಮೇಲೆ ಪ್ರಯೋಗಿಸುವ ಹಂತದಲ್ಲಿವೆ. ಅಂದರೆ ಕ್ಲಿನಿಕಲ್​ ಟ್ರಯಲ್​ ನಡೆಸಲಾಗುತ್ತಿದೆ. ಸೆಪ್ಟಂಬರ್​ ಅಥವಾ ವರ್ಷದ ಕೊನೆಯಲ್ಲಿ ಔಷಧವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವ ಉದ್ದೇಶ ಹೊಂದಿವೆ.
ಇದನ್ನೂ ಓದಿ;ಆ.15ಕ್ಕೆ ದೇಶೀಯ ಕರೊನಾ ಲಸಿಕೆ; ಜಾಗತಿಕ ಮಾನದಂಡದಂತೆ ಕ್ಲಿನಿಕಲ್ ಟ್ರಯಲ್​; ಐಸಿಎಂಆರ್​ ಸ್ಪಷ್ಟನೆ
ಆಕ್ಸ್​ಫರ್ಡ್​ ವಿವಿ ತಂಡ ಆಸ್ಟ್ರಾಜೆನೆಕಾ ಕಂಪನಿಯೊಂದಿಗೆ ಉತ್ಪಾದಿಸುತ್ತಿರುವ ಲಸಿಕೆ ಈಗಾಗಲೇ ಅಂತಿಮ ಹಂತದ ಕ್ಲಿನಿಕಲ್​ ಟ್ರಯಲ್​ ನಡೆಸುತ್ತಿದೆ. ಇದಕ್ಕೆ ಪೈಪೋಟಿ ನೀಡುತ್ತಿರುವ ಅಮೆರಿಕದ ಮಾಡೆರ್ನಾ ಲಸಿಕೆ ಕೂಡ ಅಂತಿಮ ಹಂತದ ಪರೀಕ್ಷೆಯಲ್ಲಿ ತೊಡಗಿದೆ. ಕರೊನಾಗೆ ಎಲ್ಲರಿಗಿಂತ ಮೊದಲು ಲಸಿಕೆ ಸಿದ್ಧಪಡಿಸುವ ವಿಶ್ವಾಸದಲ್ಲಿದೆ.
ಇದಲ್ಲದೇ, ಚೀನಾದ ಆರು ಕಂಪನಿಗಳು ಕ್ಲಿನಿಕಲ್​ ಟ್ರಯಲ್​ ನಡೆಸುತ್ತಿವೆ. ಯಾವುದೇ ದೇಶಕ್ಕೆ ಹೋಲಿಸಿದರೂ ಚೀನಿ ಕಂಪನಿಗಳು ಅತಿ ಹೆಚ್ಚು ಸಂಖ್ಯೆಯಲ್ಲಿ ಈ ಸಾಧನೆ ಮಾಡಿವೆ.
ಇದನ್ನೂ ಓದಿ;ಸ್ವದೇಶಿ ಕರೊನಾ ಲಸಿಕೆಗೆ ಅಪಸ್ವರಗಳೆದ್ದಿರೋದೇಕೆ? ಆಗಸ್ಟ್​ 15ಕ್ಕೆ ಲಸಿಕೆ ಸಜ್ಜು ಎನ್ನುವುದು ಅವಾಸ್ತವಿಕವೇ?
ಭಾರತದ ಸಾಧನೆಯೂ ಇದರಲ್ಲಿ ಕಡಿಮೆಯೇನಲ್ಲ. ವಿಶ್ವಕ್ಕೆ ತನ್ನ ಸಾಮರ್ಥ್ಯವನ್ನು ಪರಿಚಯಿಸಲು ಮುಂದಾಗಿದೆ. ಹೈದರಾಬಾದ್​ನ ಭಾರತ್​ ಬಯೋಟೆಕ್​ ಹಾಗೂ ಜೈಡಸ್​ ಕ್ಯಾಡಿಲಾ ಕಂಪನಿಗಳು ಕರೊನಾ ರೋಗಿಗಳ ಮೇಲೆ ಲಸಿಕೆ ಪ್ರಯೋಗಿಸಲು ಅನುಮತಿ ಪಡೆದುಕೊಂಡಿವೆ.ಇನ್ನು ಭಾರತ್​ ಬಯೋಟೆಕ್​ನ ಲಸಿಕೆಗಂತೂ ಐಸಿಎಂಆರ್​ ಸಹಯೋಗ ನೀಡುತ್ತಿದೆ. ಆದರೆ, ಐಸಿಎಂಆರ್​ ಹೇಳಿದಂತೆ ಆಗಸ್ಟ್​ 15ರ ವೇಳೆಗೆ ಲಸಿಕೆ ಸಜ್ಜಾಗುವುದು ಕಷ್ಟಸಾಧ್ಯವಾದರೂ, ಇದು ಕೊನೆಯ ಹಂತದ ಆರಂಭ ಎಂದೇ ವಿಶ್ಲೇಷಿಸಲಾಗುತ್ತಿದೆ.
ಹೇಗೆ ಇರಲಿ, ವರ್ಷಾಂತ್ಯಕ್ಕೆ ಲಸಿಕೆ ಒಂದಕ್ಕಿಂತ ಹೆಚ್ಚು ಲಸಿಕೆಗಳು ಮಾರುಕಟ್ಟೆಯಲ್ಲಿ ಲಭ್ಯವಿರುವುದಂತೂ ಖಚಿತ. ಜಾಗತಿಕವಾಗಿ ಪೈಪೋಟಿಯಲ್ಲಿರುವ 11 ಲಸಿಕೆಗಳಲ್ಲಿ ಕನಿಷ್ಠ ನಾಲ್ಕು ಅಂದರೆ, ಆಕ್ಸ್​ಫರ್ಡ್​, ಮಾಡೆರ್ನಾ ಹಾಗೂ ಭಾರತದ ಎರಡು ಔಷಧ ಸ್ಥಳೀಯವಾಗಿ ಉತ್ಪಾದನೆಯಾಗಲಿವೆ. ಈ ಮೂಲಕ ಬೇರೆಯವರ ಮೇಲಿನ ಅವಲಂಬನೆಯನ್ನು ತಗ್ಗಿಸಲಿವೆ.
ಕರೊನಾ ಸೋಂಕು ಖಚಿತವಾದರೆ… ಮುಂದೇನು? ಈ ವಿಷಯಗಳನ್ನು ಅಗತ್ಯವಾಗಿ ತಿಳಿದಿರಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:10 + 11 =
Remember me
