ತಿರುವನಂತಪುರಂ:ಷೇರುದಾರರಿಗೆ ಹಣ ಪಾವತಿ ಮಾಡದೆ ಕೋಟ್ಯಂತರ ರೂಪಾಯಿ ಮೋಸ ಮಾಡಿರುವ ಆರೋಪದಡಿಯಲ್ಲಿ ಶಾಸಕರೊಬ್ಬರನ್ನು ಬಂಧಿಸಲಾಗಿದೆ. ಶಾಸಕನ ವಿರುದ್ಧ ಸರಣಿ ದೂರು ದಾಖಲಾದ ಹಿನ್ನೆಲೆಯಲ್ಲಿ ಬಂಧಿಸಿರುವುದಾಗಿ ತಿಳಿಸಲಾಗಿದೆ.
ಇದನ್ನೂ ಓದಿ:‘ಮರ್ಡರ್​’ ಬಿಡುಗಡೆ ಮಾಡಲು ನ್ಯಾಯಾಲಯ ಷರತ್ತುಬದ್ಧ ಒಪ್ಪಿಗೆ …
ಕೇರಳದ ಇಂಡಿಯನ್​ ಯೂನಿಯನ್​ ಮುಸ್ಲಿಂ ಲೀಗ್​ (ಐಯುಎಂಎಲ್​)ನ ಶಾಸಕ ಎಂ.ಸಿ.ಕಮರುದ್ದೀನ್​ ಬಂಧನಕ್ಕೊಳಗಾದ ಶಾಸಕ. ಈ ಶಾಸಕನ ಪಕ್ಷ ಕಾಂಗ್ರೆಸ್​ ನೇತೃತ್ವದ ಯುಡಿಎಫ್​ನೊಂದಿಗೆ ಮೈತ್ರಿ ಮಾಡಿಕೊಂಡಿದ್ದು, ಕೇರಳದ ವಿರೋಧ ಪಕ್ಷವಾಗಿ ಗುರುತಿಸಿಕೊಂಡಿದೆ.
ಇದನ್ನೂ ಓದಿ:ಬಿಹಾರ ಗದ್ದುಗೆ ಏರೋದ್ಯಾರು? ಮತದಾನೋತ್ತರ ಸಮೀಕ್ಷಾ ವರದಿ ಇಲ್ಲಿದೆ…
ಕಮರುದ್ದೀನ್​ ಫ್ಯಾಶನ್​ ಗೋಲ್ಡ್​ ಜ್ಯುವೆಲ್ಲರಿ ಗ್ರೂಪ್​ನ ಅಧ್ಯಕ್ಷರಾಗಿದ್ದಾರೆ. ಈ ಸಂಸ್ಥೆಗೆ ಅನೇಕರು ಕೋಟ್ಯಂತರ ರೂಪಾಯಿ ಹೂಡಿಕೆ ಮಾಡಿದ್ದಾರೆ. ಆದರೆ ಈ ಸಂಸ್ಥೆ ತಮ್ಮ ಹೂಡಿಕೆದಾರರಿಗೆ ಯಾವುದೇ ಮಾಹಿತಿ ನೀಡದೆ, ಕಳೆದ ಡಿಸೆಂಬರ್​ನಲ್ಲಿ ಬಾಗಿಲು ಮುಚ್ಚಿದೆ. ಸಂಸ್ಥೆ ಮುಚ್ಚಿದ ನಂತರದಲ್ಲಿ ಹೂಡಿಕೆದಾರರಿಗೆ ಯಾವುದೇ ರೀತಿಯ ಹಣ ವಾಪಾಸು ಮಾಡಲಾಗಿಲ್ಲ. ಈ ಕುರಿತಾಗಿ ನೂರಾರು ಹೂಡಿಕೆದಾರರು ವಿವಿಧ ಪೊಲೀಸ್​ ಠಾಣೆಗಳಲ್ಲಿ ದೂರು ದಾಖಲಿಸಿದ್ದಾರೆ. ಶಾಸಕರ ಬಂಧನಕ್ಕೂ ಮೊದಲು ವಿಶೇಷ ತನಿಖಾ ತಂಡವು ಸುಮಾರು ಐದು ಗಂಟೆಗಳ ಕಾಲ ಶಾಸಕರಿಗೆ ಪ್ರಶ್ನೆ ಕೇಳಿದೆ. ಅದಾದ ನಂತರ ಬಂಧಿಸಲಾಗಿದೆ. ಅರಂಭಿಕ ದೂರುಗಳು ಪ್ರಕಾರ ಸುಮಾರು 1 ಕೋಟಿ ರೂಪಾಯಿ ಮೋಸವಾಗಿರುವುದು ಕಂಡುಬಂದಿದೆ. ಇನ್ನೂ ಹೆಚ್ಚು ಹೂಡಿಕೆದಾರರಿಂದ ಮಾಹಿತಿ ಬರಬೇಕಿದೆ ಎಂದು ಪೊಲೀಸರು ತಿಳಿಸಿದ್ದಾರೆ. (ಏಜೆನ್ಸೀಸ್​)
‘ಮುಂದಿನ ವರ್ಷ ಗೆದ್ದೇ ಗೆಲ್ತೀವಿ’ ಆರ್​ಸಿಬಿ ಅಭಿಮಾನಿಗಳಲ್ಲಿ ಕ್ಷಮೆ ಕೇಳಿದ ಎಬಿಡಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × two =
Remember me
