|ಜಗತ್ ಪ್ರಕಾಶ್ ನಡ್ಡಾರಾಷ್ಟ್ರೀಯ ಅಧ್ಯಕ್ಷರು, ಭಾರತೀಯ ಜನತಾ ಪಾರ್ಟಿ
ಜನರ ಪಾಲ್ಗೊಳ್ಳುವಿಕೆ (ಜನ್ ಭಾಗೀದಾರಿ) ಪರಿಕಲ್ಪನೆ ಅಕ್ಷರಶಃ ಜನರ ಪಾಲ್ಗೊಳ್ಳುವಿಕೆಯನ್ನು ಖಾತ್ರಿಪಡಿಸಿ, ನೀತಿಗಳ ಅನುಷ್ಠಾನದಲ್ಲಿ ಸಾಮೂಹಿಕ ಪಾತ್ರವನ್ನು ಸೂಚಿಸುತ್ತದೆ. ನರೇಂದ್ರ ಮೋದಿ ನೇತೃತ್ವದ ಸರ್ಕಾರದ ನೀತಿಗಳನ್ನು ಜಾರಿಗೆ ತರುವಲ್ಲಿ ಜನರ ಶಕ್ತಿಯನ್ನು ಬಳಸಿಕೊಳ್ಳುವುದೂ ಪ್ರಮುಖ ಅಂಶವಾಗಿದೆ. ಏನಾದರೂ ತಪ್ಪು ನಡೆಯುತ್ತಿದ್ದರೆ ಅದನ್ನು ತಡೆಯಲು, ತಾವೂ ಕಿಂಚಿತ್ ಕಾರ್ಯ ಮಾಡಲು, ಅನುಷ್ಠಾನದ ವೇಳೆ ಎದುರಾಗುವ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತರುವ ಮೂಲಕ ಆಡಳಿತಕ್ಕೆ ನೆರವಾಗುವಂತೆ ಪ್ರಧಾನಮಂತ್ರಿ ಮೋದಿಯವರು ಜನಸಮುದಾಯವನ್ನು ಬಲವಾಗಿ ಪ್ರೇರೇಪಿಸಿ ಜನಶಕ್ತಿಯನ್ನು ಬಳಸಿಕೊಳ್ಳುವುದರಿಂದ ಲಭಿಸುವ ಪ್ರಯೋಜನಗಳೇನೆಂಬುದನ್ನು ತೋರಿಸಿದ್ದಾರೆ.
ಸಂವಾದ ಸಾಧನ:ಜನ ಸಂವಾದದ ನಿರಂತರ ಪ್ರಕ್ರಿಯೆಯಿಲ್ಲದೆ ಜನ್ ಭಾಗೀದಾರಿ ಅಪೂರ್ಣವಾಗುತ್ತದೆ. ನೈಜ ಆಡಳಿತದ ಸಾರವು ವಾಸ್ತವ ಅಂಶಗಳನ್ನು ಅರ್ಥಮಾಡಿಕೊಳ್ಳಲು ಜನರೊಂದಿಗೆ ನಿಯಮಿತ ಸಂವಹನ, ತರುವಾಯ ಸಮಸ್ಯೆ ಪರಿಹಾರ ಕ್ರಮಗಳೊಂದಿಗೆ ವಿಷಯಗಳ ವಿಶ್ಲೇಷಣೆಯನ್ನು ಆಧರಿಸಿದ ನೀತಿ ನಿಯಮಗಳ ಮೇಲೆ ಅವಲಂಬಿಸಿರುತ್ತದೆ. ಮೋದಿ ಸರ್ಕಾರವು ಜನರ ಜೀವನವನ್ನು ಸಶಕ್ತಗೊಳಿಸಲು ಮತ್ತು ಸುಗಮಗೊಳಿಸಲು ಜನರು ಮತ್ತು ಸರ್ಕಾರದ ನಡುವೆ ಈ ನಿರಂತರ ಸಂವಾದವನ್ನು ನಿರ್ವಹಿಸಲು ಕಾಳಜಿ ವಹಿಸಿದೆ. ಇದಕ್ಕೆ ಸೂಕ್ತ ಉದಾಹರಣೆಯೆಂದರೆ ಪ್ರಧಾನಮಂತ್ರಿ ಬೆಳೆ ವಿಮಾ ಯೋಜನೆ. 2016 ರಲ್ಲಿ ಪ್ರಧಾನಮಂತ್ರಿ ಮೋದಿ ಅವರು ಬೆಳೆ ವಿಮೆ ಮತ್ತು ಸುಸ್ಥಿರ ಕೃಷಿಯನ್ನು ಖಾತ್ರಿಪಡಿಸುವ ಎರಡು ಪ್ರಮುಖ ಯೋಜನೆಗಳನ್ನು ಸಂಯೋಜಿಸಿದ ನಂತರ ಪ್ರಾರಂಭಿಸಿದರು, 2019-2020ರಲ್ಲಿ ಇದನ್ನು ಮತ್ತೆ ಪ್ರಾರಂಭಿಸಲಾಯಿತು. ರೈತರಿಂದ ಪಡೆದ ಪ್ರತಿಸ್ಪಂದನೆಯ ಆಧಾರದಲ್ಲಿ ಈ ಪರಿಷ್ಕೃತ ಯೋಜನೆ ರೂಪಿಸಲಾಗಿದೆ; ಸಂವಾದದ ಶಕ್ತಿಗೆ ಇದು ನಿಜವಾದ ನಿದರ್ಶನವಾಗಿದೆ.
ಜಲ ಜೀವನ ಅಭಿಯಾನ:ಗ್ರಾಮಗಳಲ್ಲಿ ಈವರೆಗೆ 10 ಕೋಟಿಗೂ ಹೆಚ್ಚು ನಲ್ಲಿ ನೀರಿನ ಸಂಪರ್ಕಗಳನ್ನು ಖಾತ್ರಿಪಡಿಸಿದ ಮತ್ತೊಂದು ಉದಾಹರಣೆಯನ್ನೇ ತೆಗೆದುಕೊಳ್ಳಿ. ಮೋದಿಯವರದೇ ಮಾತುಗಳಲ್ಲಿ ಹೇಳುವುದಾದರೆ, ‘ಜಲ ಜೀವನ್ ಅಭಿಯಾನದ ಯಶಸ್ಸು ಜನರ ಭಾಗವಹಿಸುವಿಕೆ, ಎಲ್ಲ ಬಾಧ್ಯಸ್ಥರೊಂದಿಗಿನ ಪಾಲುದಾರಿಕೆ, ರಾಜಕೀಯ ಇಚ್ಛಾಶಕ್ತಿ ಮತ್ತು ಎಲ್ಲಾ ಸಂಪನ್ಮೂಲಗಳ ಗರಿಷ್ಠ ಬಳಕೆಯನ್ನು ಆಧರಿಸಿದೆ. ಜನಸಾಮಾನ್ಯರ ಜೀವನದಲ್ಲಿ ಅಂತಹ ಮೂಲಭೂತ ಆವಶ್ಯಕತೆಯನ್ನು ಪೂರೈಸುವುದು ಈಗ ಸಾಕಾರವಾಗಿದೆ. ಮಹಿಳೆಯರು ನೀರನ್ನು ತರಲು ಗಂಟೆಗಟ್ಟಲೆ ಪ್ರಯಾಣಿಸುವ ಅಗತ್ಯವಿರುವುದಿಲ್ಲ, ಕಲುಷಿತ ನೀರಿನ ಮೂಲಕ ಹರಡುವ ರೋಗಗಳನ್ನೂ ತಡೆಗಟ್ಟಲಾಗಿದೆ ಮತ್ತು ಗ್ರಾಮೀಣ ಕುಟುಂಬಗಳ ಜೀವನವನ್ನು ಸುಲಭಗೊಳಿಸುತ್ತದೆ.’
200 ಕೋಟಿಗೂ ಹೆಚ್ಚು ಕೋವಿಡ್ -19 ಡೋಸ್ ಲಸಿಕೆ ನೀಡಿಕೆಯ ದಾಖಲೆಯು ಸಂಖ್ಯೆಯ ಬಲಕ್ಕೆ ಮತ್ತೊಂದು ಪುರಾವೆಯಾಗಿದೆ, ಇದನ್ನು ಕೇವಲ 18 ತಿಂಗಳಲ್ಲಿ ಸಾಧಿಸಲಾಗಿದೆ. ಇದು ಅನೇಕರ ಸಂಘಟಿತ ಪ್ರಯತ್ನಗಳ ಫಲವಾಗಿದ್ದರೂ, ಸ್ವತಃ ಪ್ರಧಾನಮಂತ್ರಿ ಮೋದಿಯವರು ಇದನ್ನು ಮುನ್ನಡೆಸಿದರು. ಸಾಂಕ್ರಾಮಿಕ ರೋಗದ ಸಮಯದಲ್ಲಿ ಮೋದಿ ಅವರು ನಾಗರಿಕರಿಗೆ ಕರ್ಫ್ಯೂಗೆ ಮನ್ನಣೆ ನೀಡಲು, ಆರೋಗ್ಯ ಕಾರ್ಯಕರ್ತರನ್ನು ಮತ್ತು ಮುಂಚೂಣಿ ಕಾರ್ಯಕರ್ತರನ್ನು ಪ್ರಶಂಸಿಸಲು ದೀಪಗಳನ್ನು ಬೆಳಗಿಸುವಂತೆ ಮನವಿ ಮಾಡಿದಾಗ ದೇಶಾದ್ಯಂತ ಅದ್ಭುತ ಸಕಾರಾತ್ಮಕ ಸ್ಪಂದನೆ ಲಭಿಸಿತು. ಸರ್ಕಾರವು ನಾಗರಿಕರಿಗೆ ಲಸಿಕೆ ಪಡೆಯುವುದನ್ನು ಕಡ್ಡಾಯಗೊಳಿಸದಿದ್ದರೂ, ಜನರು ಲಭ್ಯವಿರುವ ಪರ್ಯಾಯಗಳ ಪೈಕಿ ಉತ್ತಮವಾದದ್ದನ್ನು ಆಯ್ಕೆ ಮಾಡಿ ಭರವಸೆ ತೋರಿಸಿದರು. ಅದೇ ರೀತಿ, ಸಬ್ಸಿಡಿ ಬಿಟ್ಟುಕೊಡಲು ಶಕ್ತರಾದವರು, ಒಂದು ಕರೆಯ ಮೇರೆಗೆ ಎಲ್​ಪಿಜಿ ಮತ್ತು ರೈಲ್ವೆ ಟಿಕೆಟ್ ಮೇಲಿನ ಸಬ್ಸಿಡಿಗಳನ್ನು ಬಿಟ್ಟುಕೊಡಲು ನಿರ್ಧರಿಸಿದರು, ಇವು ಮೋದಿ ನೇತೃತ್ವದ ಜನ ಭಾಗೀದಾರಿ ಶಕ್ತಿಗೆ ಉದಾಹರಣೆಗಳಲ್ಲದೆ ಮತ್ತೇನು?
ಪಾಲ್ಗೊಳ್ಳುವಿಕೆಯಿಂದ ಸಮೃದ್ಧಿಯವರೆಗೆ:ಮನ್ ಕಿ ಬಾತ್ ಬಾನುಲಿ ಕಾರ್ಯಕ್ರಮ ಕೂಡ ಜನ ಭಾಗೀದಾರಿಯಲ್ಲಿ ಒಂದು ಪ್ರಮುಖ ಯಶಸ್ಸಿನ ನೆಲೆಯನ್ನು ಕಂಡುಕೊಂಡಿದೆ. ಪ್ರತಿ ಸಂಚಿಕೆಯೂ ಪ್ರತಿಯೊಬ್ಬ ವ್ಯಕ್ತಿಯ ಪರಿವರ್ತನಾ ಶಕ್ತಿಯಲ್ಲಿ ಮೋದಿಯವರು ಇಟ್ಟಿರುವ ಅಚಲ ನಂಬಿಕೆಯ ಬಗ್ಗೆ ಸ್ಮರಣೆಯ ಸಂಕೇತವಾಗಿದೆ. ಗಮನಾರ್ಹವಾದ ಜನಾಂದೋಲನವಾದ ವೋಕಲ್ ಫಾರ್ ಲೋಕಲ್ (ಸ್ಥಳೀಯತೆಗೆ ಧ್ವನಿಯಾಗಿ)- ಸ್ಥಳೀಯ ವ್ಯಾಪಾರ ಉತ್ತೇಜಿಸುವ ಕರೆ ಜನರಲ್ಲಿ ಜಾಗೃತಿ ಮೂಡಿಸುವಲ್ಲಿ ಮತ್ತು ಉದ್ಯಮಶೀಲತೆಯನ್ನು ಉತ್ತೇಜಿಸುವಲ್ಲಿ ಬಹು ದೂರ ಸಾಗಿದೆ. ಇಂದು, ಈ ಜನಾಂದೋಲನವು ಹಲವಾರು ಸಣ್ಣ ಉದ್ಯಮಗಳನ್ನು ಸಶಕ್ತಗೊಳಿಸಿದೆ, ನವೋದ್ಯಮಗಳು ಉಳಿಯಲು ಮತ್ತು ಸಾಂಪ್ರದಾಯಿಕ ಕರಕುಶಲ ಕಲೆಯನ್ನು ಪುನರುಜ್ಜೀವಗೊಳಿಸಲು ಸಹಾಯ ಮಾಡಿದೆ. ಆಟಿಕೆಗಳ ತಯಾರಿಕೆಯಲ್ಲಿ ಸ್ವಾವಲಂಬನೆಯ ಅಭಿಯಾನದ ವಿಶಿಷ್ಟ ವಿದ್ಯಮಾನವೆಂದರೆ ಮೋದಿ ಅವರು ನೀಡಿದ ‘ಸ್ಥಳೀಯ ಆಟಿಕೆಗಳಿಗೆ ಧ್ವನಿಯಾಗಿ’ ಎಂಬ ಕರೆ.
‘ನಾನು 5 ರಿಂದ 7 ವರ್ಷದೊಳಗಿನ ಪುಟ್ಟ ಮಕ್ಕಳಿಗೆ ನಮಿಸಲು ಬಯಸುತ್ತೇನೆ. ರಾಷ್ಟ್ರದ ಪ್ರಜ್ಞೆ ಜಾಗೃತಗೊಂಡಿದೆ. 5-7 ವರ್ಷದ ಮಕ್ಕಳು ವಿದೇಶಿ ಆಟಿಕೆಗಳೊಂದಿಗೆ ಆಟವಾಡಲು ಈಗ ಬಯಸುವುದಿಲ್ಲ ಎಂದು ತಮ್ಮ ಹೆತ್ತವರಿಗೆ ಹೇಳುತ್ತಿದ್ದಾರೆ ಎಂದು ನಾನು ಅಸಂಖ್ಯಾತ ಕುಟುಂಬಗಳಿಂದ ಕೇಳಿದ್ದೇನೆ. 5 ವರ್ಷದ ಮಗುವು ಅಂತಹ ನಿರ್ಣಯವನ್ನು ಮಾಡಿದಾಗ, ಅದು ಅವನಲ್ಲಿ ಸ್ವಾವಲಂಬಿ ಭಾರತದ ಮನೋಭಾವವನ್ನು ಪ್ರತಿಬಿಂಬಿಸುತ್ತದೆ’ಎಂದು ಈ ಸಲದ ಸ್ವಾತಂತ್ರ್ಯ ದಿನದಂದು ಮೋದಿ ಹೇಳಿದರು. ಭಾರತವು ಜಾಗತಿಕ ಆಟಿಕೆ ಕೇಂದ್ರವಾಗಿ ಹೊರಹೊಮ್ಮುವಂತಾಗಲು, ದೇಶದಲ್ಲಿ ಆಟಿಕೆ ಕ್ಲಸ್ಟರ್​ಗಳನ್ನು ಸ್ಥಾಪಿಸಲು ನೆರವಾಗುವಂತೆ ಮೋದಿಯವರು ನವೋದ್ಯಮಗಳಿಗೆ ಕರೆನೀಡಿದ್ದಾರೆ. 2022ರಲ್ಲಿ, ದೇಶದಲ್ಲಿ ಹೆಚ್ಚು ಆಟಿಕೆ ಕ್ಲಸ್ಟರ್​ಗಳು ಬಂದಿವೆ. ಆಟಿಕೆ ತಯಾರಕರಿಗೆ ಬಿಐಎಸ್ (ಬ್ಯೂರೋ ಆಫ್ ಇಂಡಿಯನ್ ಸರ್ಟಿಫಿಕೇಷನ್) ಮಾನದಂಡಗಳ ಪ್ರಕಾರ ಪ್ರಮಾಣೀಕರಣ ಕಡ್ಡಾಯಗೊಳಿಸಲಾಗಿದೆ. ಇದರಿಂದಾಗಿ ಅನೇಕ ಚೀನೀ ಪ್ರತಿಸ್ಪರ್ಧಿಗಳನ್ನು ತೊಡೆದುಹಾಕಲಾಗಿದೆ.
ಮೋದಿಯವರು ದೇಶದ ನಾಗರಿಕರಲ್ಲಿ ತೋರಿಸುತ್ತಿರುವ ಅಚಲವಾದ ನಂಬಿಕೆಯು ಅನೂಹ್ಯವಾದ ಸಕಾರಾತ್ಮಕ ಫಲಿತಾಂಶಗಳನ್ನು ನೀಡಿದೆ. ಸರ್ಕಾರದ ನೀತಿಗಳು ಕೊನೆಯ ಮೈಲಿಯನ್ನು ತಲುಪಿದಾಗ ಮಾತ್ರ ಪ್ರಜಾಪ್ರಭುತ್ವವನ್ನು ನಿಜವಾಗಿಯೂ ಯಶಸ್ವಿ ಎಂದು ಪರಿಗಣಿಸಬಹುದು. ಹೀಗಾಗಿ, ಮೋದಿ ಅವರ ಘೊಷಣೆಯ ಸಾರ: ಎಲ್ಲರ ಪಾಲ್ಗೊಳ್ಳುವಿಕೆಯು ಎಲ್ಲರ ಸಮೃದ್ಧಿಗೆ ಕಾರಣವಾಗುತ್ತದೆ.
ಪ್ರಜಾಪ್ರಭುತ್ವ ವೆಂದರೆ ಕೇವಲ ಒಂದು ಸರ್ಕಾರಕ್ಕೆ ಐದು ವರ್ಷಗಳ ಕಾಲ ಗುತ್ತಿಗೆ ನೀಡುವುದಲ್ಲ. ವಾಸ್ತವದಲ್ಲಿ ಇದು ಜನ ಭಾಗೀದಾರಿಯಾಗಿದೆ.
|ನರೇಂದ್ರ ಮೋದಿಪ್ರಧಾನಮಂತ್ರಿ
ಆಡಳಿತದ ಫಲ ಕೊನೆಯ ಮೈಲಿಗೂ ತಲುಪಲು ಜನಸಾಮಾನ್ಯರನ್ನು ಪ್ರೇರೇಪಿಸುವ ಪ್ರಯತ್ನಗಳಲ್ಲಿ ಮೋದಿ ನಿಸ್ಸಂದೇಹವಾಗಿ ಯಶಸ್ವಿಯಾಗಿದ್ದಾರೆ. ಕಾಗದದ ಮೇಲಿನ ನೀತಿಗಳನ್ನು ವಾಸ್ತವವಾಗಿ ಯಶಸ್ಸಿಗಾಗಿ ಪರಿವರ್ತಿಸಲು ಜನರು ಅವರ ಕರೆಗಳಿಗೆ ಸ್ಪಂದಿಸಿದ್ದಾರೆ. ಮೋದಿಯವರು ಸಮಗ್ರ ಅಭಿವೃದ್ಧಿಯ ಪಯಣದಲ್ಲಿ ಜನರ ಸಮಗ್ರ ಅಭಿವೃದ್ಧಿಯ ದೃಷ್ಟಿಯಿಂದ ಯೋಚಿಸುತ್ತಾರೆ. ಸರ್ವರಿಗೂ ನೀತಿಗಳು ಮತ್ತು ಪ್ರಯೋಜನಗಳು ತಲುಪುವಂತಾಗಲು ಪ್ರತಿಯೊಬ್ಬ ನಾಗರಿಕನನ್ನು ತೊಡಗಿಸಿಕೊಳ್ಳುವ ಮೋದಿಯವರ ದೃಷ್ಟಿಕೋನ ಗಮನಾರ್ಹ. ಉದಾಹರಣೆಗೆ ಬಯಲುಶೌಚದ ವಿಷಯವನ್ನೇ ತೆಗೆದುಕೊಳ್ಳಿ. ನರೇಂದ್ರ ಮೋದಿ ಪ್ರಧಾನಮಂತ್ರಿಯಾದ ಬಳಿಕ ಮೊದಲ ಸ್ವಾತಂತ್ರೊ್ಯೕತ್ಸವ ಭಾಷಣದಲ್ಲಿ ಇದನ್ನು ಪ್ರಸ್ತಾಪಿಸಿದರು. ಸ್ವಚ್ಛ ಭಾರತ ಅಭಿಯಾನದಲ್ಲಿ ಎಲ್ಲಾ ನಾಗರಿಕರು ಭಾಗವಹಿಸುವಂತೆ ಮನವಿ ಮಾಡಿದರು. ಇದರ ಫಲವಾಗಿ ಇಂದು ದೇಶದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಬಯಲು ಶೌಚಮುಕ್ತ ಹಳ್ಳಿಗಳಿದ್ದು, ಕೇವಲ 60 ತಿಂಗಳಲ್ಲಿ 11 ಕೋಟಿಗೂ ಹೆಚ್ಚು ಶೌಚಗೃಹಗಳು ನಿರ್ವಣವಾಗಿವೆ. ಮೇಲ್ನೋಟಕ್ಕೆ ಇದು ಸ್ವಚ್ಛತಾ ಅಭಿಯಾನದಂತೆ ಕಂಡರೂ, ಇದು ಮಹಿಳೆಯರಿಗೆ ಘನತೆ ಮತ್ತು ಸುರಕ್ಷತೆಯನ್ನು ಖಾತ್ರಿಪಡಿಸಿದೆ, ಮತ್ತು ಅನೇಕ ಬಾಲಕಿಯರನ್ನು ಶಾಲೆಯಿಂದ ಹೊರಗುಳಿಯದಂತೆ ತಡೆದಿದೆ.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen + two =
Remember me
