ನವದೆಹಲಿ:ಕಳೆದ ಕೆಲವು ತಿಂಗಳ ಹಿಂದೆ ಭಾರತ ಸರ್ಕಾರದ ಜತೆ ಸಂಘರ್ಷದ ಮೂಲಕ ಭಾರಿ ಸುದ್ದಿಯಲ್ಲಿದ್ದ ಟ್ವಿಟರ್ ಈಗ ಮತ್ತೊಮ್ಮೆ ತನ್ನ ಆಡಳಿತಾತ್ಮಕ ವಿಷಯಕ್ಕೆ ಸುದ್ದಿಯಲ್ಲಿದೆ. ಅಷ್ಟಕ್ಕೂ ಟ್ವಿಟರ್​ ಬಗ್ಗೆ ಈಗ ಬಹುತೇಕರು ಮಾತನಾಡುವಂತಾಗಲು ಕಾರಣ ಟ್ವಿಟರ್​ ಸಿಇಒ. ಹೌದು.. ಟ್ವಿಟರ್​ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಸ್ಥಾನಕ್ಕೆ ಜಾಕ್ ಡಾರ್ಸಿ ನೀಡಿದ್ದಾರೆ.
ಇದನ್ನೂ ಓದಿ:ಸಾರ್ವಜನಿಕರಲ್ಲಿ ಇದ್ದಕ್ಕಿದ್ದಂತೆ ಹುಟ್ಟಿಕೊಂಡಿದೆ ಬಿಎಸ್​ಎನ್​ಎಲ್​ ಪ್ರೇಮ; ಕಾರಣ ಆ ಮೂವರು…
ಸೋಷಿಯಲ್ ಮೀಡಿಯಾದ ದಿಗ್ಗಜ ಕಂಪನಿಗಳಲ್ಲಿ ಒಂದಾಗಿರುವ ಟ್ವಿಟರ್​ನ ಸಹ ಸಂಸ್ಥಾಪಕರೂ ಆಗಿರುವ ಜಾಕ್​, 2006ರಲ್ಲಿ ಟ್ವಿಟರ್ ಆರಂಭಿಸುವಲ್ಲಿ ಕೈಜೋಡಿಸಿದ್ದರು. ಆದರೆ 2020ರಲ್ಲಿ ಟ್ವಿಟರ್ ಷೇರ್​ಹೋಲ್ಡರ್ ಪೈಕಿ ಒಂದಾಗಿರುವ ಎಲಿಯಟ್ ಮ್ಯಾನೇಜ್​ಮೆಂಟ್​ ಟ್ವಿಟರ್ ಸಿಇಒ ಸ್ಥಾನದಿಂದ ಜಾಕ್​ ಅವರನ್ನು ತೆರವುಗೊಳಿಸಲು ಯತ್ನಿಸಿತ್ತು.
ಇದನ್ನೂ ಓದಿ:ಮದುವೆ ಆಗ್ತಿದ್ದಾರೆ ‘ರಾಧಾ ರಮಣ’ ಸೀರಿಯಲ್ ನಟಿ ಕಾವ್ಯಾ ಗೌಡ; ಆ ನಂತರವೂ ನಟನೆ ಮುಂದುವರಿಸುತ್ತಾರಾ?
ಜಾಕ್​ ತಾವೇ ರೂಪಿಸಿರುವ ಹಣಕಾಸು ಪಾವತಿ ಕಂಪನಿ ಸ್ಕ್ವೇರ್​ನ ಮುಖ್ಯಸ್ಥರಲ್ಲೂ ಒಬ್ಬರಾಗಿದ್ದು, ಅದರ ಜತೆಗೆ ಟ್ವಿಟರ್​ ಕೂಡ ನಿಭಾಯಿಸಲು ಸಮರ್ಥರೇ ಎಂದು ಒಂದಷ್ಟು ಹೂಡಿಕೆದಾರರು ಬಹಿರಂಗವಾಗಿಯೇ ಪ್ರಶ್ನಿಸಿದ್ದರು. ಅದಾಗ್ಯೂ ಒಂದುಮಟ್ಟಿಗೆ ಸಮರ್ಥವಾಗಿಯೇ ನಿಭಾಯಿಸಿದ ಜಾಕ್ ಇತ್ತೀಚೆಗೆ ಕ್ರಿಪ್ಟೋಕರೆನ್ಸಿ ಕುರಿತು ಹೆಚ್ಚಿನ ಆಸಕ್ತಿ ಹೊಂದಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ:ದನ ಕೊಳ್ಳಲು ಹಣವಿಲ್ಲ ಎಂಬ ಚಿಂತೆಯಲ್ಲಿದ್ದವರ ಬ್ಯಾಂಕ್​ ಖಾತೆಗೆ ಬಂತು 2 ಕೋಟಿ ರೂಪಾಯಿ!; ಕಾರಣ ‘ಕೌ ಇನ್​ಸ್ಪೆಕ್ಟರ್’ ಝಾನ್ಸಿ..
ಇವೆಲ್ಲದರ ನಡುವೆ ಜಾಕ್​ ರಾಜೀನಾಮೆಗೆ ಮುಂದಾಗಿರುವುದು ಯಾಕೆ ಎಂಬುದರ ಕುರಿತು ಖಚಿತ ಮಾಹಿತಿ ಹೊರಬಿದ್ದಿಲ್ಲ. ಆದರೆ ಹೊಸ ಸಿಇಒ ಆಗಿ ಪರಾಗ್ ಅಗರ್​ವಾಲ್​ ಜವಾಬ್ದಾರಿ ವಹಿಸಿಕೊಳ್ಳಲಿರುವ ಕುರಿತು ಜಾಕ್​ ತಿಳಿಸಿದ್ದಾರೆ. ಟ್ವಿಟರ್​ನಲ್ಲಿನ ಈ ಬೆಳವಣಿಗೆ ಸೋಷಿಯಲ್ ಮೀಡಿಯಾ ಜಗತ್ತಿನಲ್ಲಿ ಕುತೂಹಲ ಕೆರಳಿಸಿದೆ.
ಒಮಿಕ್ರಾನ್​ ಮಾರಕವಲ್ಲ ಎಂಬ ಅಭಿಪ್ರಾಯದ ಬೆನ್ನಿಗೇ ಹೊರಬಿತ್ತು ಅದು ಜಾಗತಿಕವಾಗಿ ಅಪಾಯಕಾರಿ ಎನ್ನುವ ವಿಷಯ!
ಪುನೀತ್ ಸಾವಿಗೆ ನಿಜವಾದ ಕಾರಣ ಏನು ಎಂಬುದನ್ನು ಬಿಚ್ಚಿಟ್ಟ ರಾಘವೇಂದ್ರ ರಾಜಕುಮಾರ್
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × five =
Remember me
