ಭೋಪಾಲ್​:ಇತ್ತೀಚೆಗಷ್ಟೆ ಉತ್ತರ ಪ್ರದೇಶದಲ್ಲಿ ತೋಳಗಳ ದಾಳಿಗೆ ಜನರು ಭಯಭೀತರಾಗದ್ದರು. ಈಗ ಮನುಷ್ಯರ ಮೇಲೆ ನರಿ ದಾಳಿ ಮಾಡಿರುವ ಘಟನೆ ಮಧ್ಯಪ್ರದೇಶದಲ್ಲಿ ಬೆಳಕಿಗೆ ಬಂದಿದೆ. ನರಿ ದಾಳಿ ಮಾಡುವ ಹಾಗೂ ಅದರಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ವ್ಯಕ್ತಿಗಳು ಮಾಡುವ ಹರಸಾಹಸದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಇದನ್ನು ಓದಿ:ಪುಟ್ಟ ಪೋರನನ್ನು ಅನುಕರಿಸಿದ ಟೈಗರ್​​; ಎಷ್ಟು ಚೆಂದದ ಸಾಮರಸ್ಯ ಎಂದ ನೆಟ್ಟಿಗರು
ವೈರಲ್​ ವಿಡಿಯೋದಲ್ಲಿ ವಸತಿ ಪ್ರದೇಶದಲ್ಲಿನ ರಸ್ತೆ ಬದಿಯಲ್ಲಿ ಇಬ್ಬರು ವ್ಯಕ್ತಿಗಳು ಮಾತನಾಡುತ್ತ ಕುಳಿತಿದ್ದಾರೆ. ಹಿಂದೆಯಿಂದ ಬಂದ ನರಿ ಅವರ ಮೇಲೆ ಹಠಾತ್ತನೆ ದಾಳಿ ಮಾಡಿದೆ. ಆರಂಭದಲ್ಲಿ ನರಿಯನ್ನು ಓಡಿಸಲು ಕಲ್ಲು ಎಸೆಯುತ್ತಾರೆ. ಆದರೆ ನರಿಯೂ ಪದೇಪದೆ ದಾಳಿಗೆ ಮುಂದಾಗುತ್ತದೆ. ಇಬ್ಬರಲ್ಲಿ ಒಬ್ಬರು ಓಡಲು ಪ್ರಯತ್ನಿಸುತ್ತಾರೆ. ಮತ್ತೊಬ್ಬರ ಭಯದಿಂದಳೆ ನರಿಯನ್ನು ಎತ್ತಿ ಬೀಸಾಡುವುದನ್ನು ಕಾಣಬಹುದಾಗಿದೆ.
ರೆಹತಿ ತಹಸಿಲ್‌ನ ಸಗೋನಿಯಾ ಪಂಚಾಯತ್ ಪ್ರದೇಶದಲ್ಲಿ ಸೋಮವಾರ(ಸೆಪ್ಟೆಂಬರ್​ 9) ಸಂಜೆ ಸುಮಾರು 5 ಗಂಟೆಗೆ ಈ ದಾಳಿ ನಡೆದಿದೆ. ಗಾಯಾಳುಗಳಾದ ಶ್ಯಾಮ್ ಯಾದವ್ ಮತ್ತು ನರ್ಮದಾ ಪ್ರಸಾದ್ ಅವರು ನರ್ಮದಾಪುರಂ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನಲಾಗಿದೆ.
उत्तर प्रदेश में भेड़िया तो MP में सियार का आतंक…– CCTV में कैद हुआ हमले का वीडियो.– अब तक 6 लोगों को किया जख्मी.– घटना एमपी के सीहोर जिले की.#UttarPradesh#MadhyaPradesh#Sehore#Attack#Nedricknewspic.twitter.com/uexJT8ErAE
ಘಟನೆಯು ಈ ಪ್ರದೇಶದಲ್ಲಿ ಹೆಚ್ಚುತ್ತಿರುವ ಕಾಡು ಪ್ರಾಣಿಗಳ ದಾಳಿಯ ಕುರಿತು ಆತಂಕವನ್ನು ಸೂಚಿಸುತ್ತದೆ. ಸ್ಥಳೀಯ ಅಧಿಕಾರಿಗಳು ಘಟನೆಯ ಬಗ್ಗೆ ತನಿಖೆ ನಡೆಸುತ್ತಿದ್ದು, ಕಾಡುಪ್ರಾಣಿಗಳ ದಾಳಿ ತಡೆಗಟ್ಟಲು ಅಗತ್ಯ ಕ್ರಮಕೈಗೊಳ್ಳಲು ಮುಂದಾಗಿದ್ದಾರೆ. ಹಳ್ಳಿಯ ಸುತ್ತಲಿನ ದಟ್ಟವಾದ ಅರಣ್ಯವು ನರಿಗಳಿಗೆ ಅಡಗಿಕೊಳ್ಳಲು ಉತ್ತಮ ಸ್ಥಳವಾಗಿದೆ. ಅವುಗಳು ಮತ್ತಿ ಬರಬಹುದು ಆದ್ದರಿಂದ ಜನರು ಜಾಗರೂಕರಾಗಿರುವಂತೆ ಹಾಗೂ ಒಂಟಿಯಾಗಿ ಹೊರಹೋಗುವುದನ್ನು ತಪ್ಪಿಸಬೇಕು ಎಂದು ತಿಳಿಸಿದ್ದಾರೆ. ಸೋಮವಾರ ನಡೆದ ಮತ್ತೊಂದು ಘಟನೆಯಲ್ಲಿ ಸಲ್ಕಾನ್‌ಪುರದಲ್ಲಿ ನರಿಯು ಐವರ ಮೇಲೆ ದಾಳಿ ಮಾಡಿದ್ದು, ಇಬ್ಬರಿಗೆ ಗಂಭೀರ ಗಾಯಗಳಾಗಿರುವುದಾಗಿ ವರದಿಯಾಗಿದೆ.(ಏಜೆನ್ಸೀಸ್​​)
ವಿಶ್ವದ ಎರಡನೇ ಅತಿ ಎತ್ತರದ ಕಟ್ಟಡ; ಇಲ್ಲಿದೆ ನೋಡಿ ಇದರ ವಿಶೇಷತೆಗಳು
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
Sign in to your account
Please enter an answer in digits:eight + five =
Remember me
