
ಮುಂಬೈ:ವಂಚಕ ಸುಕೇಶ್​ ಚಂದ್ರಶೇಖರ್​ನಿಂದ ಕೋಟ್ಯಂತರ ರೂಪಾಯಿ ಮೌಲ್ಯದ ಉಡುಗೊರೆಗಳನ್ನು ಪಡೆದ ಆರೋಪ ಎದರಿಸುತ್ತಿರುವ ಬಾಲಿವುಡ್​ ನಟಿ ಜಾಕ್ವೆಲಿನ್​ ಫರ್ನಾಂಡಿಸ್​​ ಅವರನ್ನು ಎನ್​​ಫೋರ್ಸ್​ಮೆಂಟ್​ ಡೈರೆಕ್ಟೊರೇಟ್​(ಇಡಿ) ಇಂದು(ಡಿ.9) ಕೂಡ ವಿಚಾರಣೆಗೆ ಗುರಿಪಡಿಸಲಿದೆ. 200 ಕೋಟಿ ರೂ. ಮೌಲ್ಯದ ಮನಿ ಲಾಂಡರಿಂಗ್​ ಪ್ರಕರಣದಲ್ಲಿ ವಾಣಿಜ್ಯೋದ್ಯಮಿಯೊಬ್ಬರ ಪತ್ನಿಯಿಂದ ಸುಲಿಗೆ ಮಾಡಿದ ಹಣವನ್ನು ಕಾನ್​ಮ್ಯಾನ್​ ಸುಕೇಶ್,​ ಜಾಕ್ವೆಲಿನ್​ಗೆ ಹಸ್ತಾಂತರಿಸಿದ್ದಾರೆಂಬ ಶಂಕೆಯ ಹಿನ್ನೆಲೆಯಲ್ಲಿ ಈ ತನಿಖೆ ನಡೆದಿದೆ.
ನಿನ್ನೆ(ಡಿ.8) ಕೂಡ 7 ಗಂಟೆಗೂ ಹೆಚ್ಚು ಕಾಲ ಜಾಕ್ವೆಲಿನ್​ರನ್ನು ಇಡಿ ಅಧಿಕಾರಿಗಳು ವಿಚಾರಣೆ ನಡೆಸಿದ್ದರು. ಅನುಮಾನಗಳ ಸುಳಿಯಲ್ಲಿ ಸಿಕ್ಕಿರುವ ಅವರ​ ವಿರುದ್ಧ ಇಡಿ ಜಾರಿಗೊಳಿಸಿರುವ ಲುಕ್​ ಔಟ್​ ಸರ್ಕುಲರ್​ನ ಹಿನ್ನೆಲೆಯಲ್ಲಿ ಭಾನುವಾರ(ಡಿ.5)ದಂದು ಮುಂಬೈ ವಿಮಾನ ನಿಲ್ದಾಣದಲ್ಲಿ ಜಾಕ್ವೆಲಿನ್​​ರನ್ನು ತಡೆದಿರಿಸಲಾಗಿತ್ತು ಹಾಗೂ ದೇಶ ಬಿಟ್ಟು ಹೋಗದಂತೆ ಸೂಚಿಸಿ ವಾಪಸ್​ ಕಳಿಸಲಾಗಿತ್ತು.
A post shared by Salman Khan (@beingsalmankhan)

ಜಾಕ್ವೆಲಿನ್​ ಮೇಲೆ ವಿದೇಶಕ್ಕೆ ತೆರಳದಂತೆ ವಿಧಿಸಲಾಗಿರುವ ಈ ನಿರ್ಬಂಧದಿಂದ ಅವರ ಕೆಲಸದ ಮೇಲೆ ಭಾರೀ ಪರಿಣಾಮವಾಗುತ್ತಿದೆ. ಅದಾಗಲೇ ಶುಕ್ರವಾರ(ಡಿಸೆಂಬರ್​ 10) ನಡೆಯಲಿರುವ ಸಲ್ಮಾನ್​ ಖಾನ್​ರ ‘ದ-ಬಾಂಗ್​: ದ ಟೂರ್, ರೀಲೋಡೆಡ್​​’ನಿಂದ ಅವರನ್ನು ಕೈಬಿಡಲಾಗಿದೆ. ಈ ವೈಭವೋಪೇತ ಈವೆಂಟ್​ನಲ್ಲಿ ಜಾಕ್ವೆಲಿನ್​ ಪಾಲ್ಗೊಳ್ಳುವ ಯೋಜನೆಯಿತ್ತು. ಅವರನ್ನೊಳಗೊಂಡ ಪೋಸ್ಟರೇ ಈಗಲೂ ಪ್ರಚಾರದಲ್ಲಿ ಬಳಕೆಯಾಗುತ್ತಿದೆ. ಆದರೆ, ಸೌದಿ ಅರೇಬಿಯಾದ ರಿಯಾಧ್​​ನಲ್ಲಿ ನಡೆಯಲಿರುವ ಶೋನಲ್ಲಿ ಭಾಗವಹಿಸಲು ಜಾಕ್ವೆಲಿನ್​ ಪ್ರಯಾಣಿಸುವುದು ಇದೀಗ ಸಾಧ್ಯವಾಗದ ಮಾತಾಗಿದೆ.(ಏಜೆನ್ಸೀಸ್)
ZOOM​ ಕಾಲಲ್ಲೇ 900 ಜನರನ್ನ ಕೆಲಸದಿಂದ ತೆಗೆದ CEO! ವಿಡಿಯೋ ವೈರಲ್​​
ಭಾರತ-ಪಾಕ್​ ಗಡಿಯಲ್ಲಿ ಹುಟ್ಟಿದ ಈ ಕೂಸಿಗೆ ಹೆಸರೇನಿಟ್ಟರು ಗೊತ್ತಾ? ಇದೇ ಹೆಸರಿನ ಸಿನಿಮಾ ಇದೆ!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 + eighteen =
Remember me
