ಹೈದರಾಬಾದ್:ಇತ್ತೀಚೆಗೆ ವಾಹನಗಳಲ್ಲಿ ಎಳೆದೊಯ್ದು ಅಮಾನವೀಯವಾಗಿ ಸಾವಿಗೀಡಾಗುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ. ಇದೀಗ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದ್ದು, ತೆಲಂಗಾಣದ ಜಗ್ತಿಯಾಲ್​ ಜಿಲ್ಲೆಯಲ್ಲಿ ಕಾರೊಂದು ಬೈಕ್​ ಅನ್ನು ಸುಮಾರು 10 ಕಿ.ಮೀ ಎಳೆದೊಯ್ದ ಪರಿಣಾಮ ಇಬ್ಬರು ಯುವಕರು ದುರಂತ ಸಾವಿಗೀಡಾಗಿದ್ದಾರೆ.
ಈ ಘಟನೆ ಜಗ್ತಿಯಾಲ್​ ಜಿಲ್ಲೆಯ ಮಲ್ಯಾಲ ಮಂಡಲದ ಮುತ್ಯಂಪೇಟೆಯಲ್ಲಿ ನಡೆದಿದೆ. ಮೃತರನ್ನು ಮೊಹಮ್ಮದ್​ ಲತೀಫ್​ ಮತ್ತು ಆತನ ಸ್ನೇಹಿತ ಮೊಹಮ್ಮದ್​ ಹಮೀದ್​ ಖಾನ್​ ಎಂದು ಗುರುತಿಸಲಾಗಿದೆ. ಇಬ್ಬರು ಕೂಡ ಕರೀಮ್​ನಗರ ಜಿಲ್ಲೆಯ ಮಾನಕೊಂಡೂರು ಮೂಲದವರು.
ಇಬ್ಬರು ಜ. 26ರಂದು ಮೆಟಪಲ್ಲಿಗೆ ಹಿಂತಿರುಗುತ್ತಿದ್ದರು. ಇದೇ ಸಂದರ್ಭದಲ್ಲಿ ವೇಗವಾಗಿ ಬಂದ ಕಾರೊಂದು ಬೈಕ್​ ಡಿಕ್ಕಿ ಹೊಡೆದಿದೆ. ಈ ವೇಳೆ ಕಾರಿನ ಅಡಿಯಲ್ಲಿ ಬೈಕ್​ ಸಿಲುಕಿದೆ. ಕಾರು ನಿಲ್ಲಿಸದೇ ಸುಮಾರು 10 ಕಿ.ಮೀ ಹಾಗೇ ಎಳೆದುಕೊಂಡ ಪರಿಣಾಮ ಇಬ್ಬರು ಮೃತಪಟ್ಟಿದ್ದಾರೆ.
ಹಮೀದ್​ ಖಾನ್​ ಬೈಕ್​ ಓಡಿಸುತ್ತಿದ್ದ. ಆತನನ್ನು ಬೈಕ್​ ಸಮೇತ ಕಾರು ಚಾಲಕ ಎಳೆದೊಯ್ದಿದ್ದು, ಹಮೀದ್​ ಖಾನ್​ ರಕ್ತ ರಸ್ತೆಯಲ್ಲಿ ಚೆಲ್ಲಿದೆ. ಹಿಂದೆ ಕುಳಿತಿದ್ದ ಅಬ್ದುಲ್ ಲತೀಫ್, ಕಾರು ಡಿಕ್ಕಿಯಾದ ಕೆಳಗಡೆ ಬಿದ್ದಿದ್ದ. ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯದಲ್ಲೇ ಹಮೀದ್​ ಖಾನ್​ ಕೊನೆಯುಸಿರೆಳೆದನು. ಉತ್ತಮ ಚಿಕಿತ್ಸೆಗಾಗಿ ಅಬ್ಧುಲ್​ ಲತೀಫ್​ನನ್ನು ಹೈದರಾಬಾದ್​ನ ನಿಮ್ಸ್​ ಆಸ್ಪತ್ರೆಗೆ ಸ್ಥಳಾಂತರ ಮಾಡಲಾಗಿತ್ತು. ಆದರೆ, ಚಿಕಿತ್ಸೆ ಫಲಿಸಿದೇ ಮೃತಪಟ್ಟಿದ್ದಾನೆ.
ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಕಾರು ಚಾಲಕ ಸಾಯಿವರ್ಧನ್​ನನ್ನು ಬಂಧಿಸಲಾಗಿದೆ. ಸಾಯಿವರ್ಧನ್ ಜಗಿತಿಯಾಸ್​ ಮೂಲದ ವ್ಯಕ್ತಿ ಎಂದು ಗುರುತಿಸಲಾಗಿದೆ. ಅಪಘಾತಕ್ಕೆ ಅತಿವೇಗವೇ ಕಾರಣ ಎಂದು ಪೊಲೀಸರು ಪ್ರಾಥಮಿಕವಾಗಿ ತನಿಖೆಯಲ್ಲಿ ಪತ್ತೆ ಮಾಡಿದ್ದಾರೆ. ಅಪಘಾತದ ನಿಖರ ಕಾರಣ ತಿಳಿಯಲು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.(ಏಜೆನ್ಸೀಸ್​)
ಯಶಸ್ವಿಯಾಗಿ 2ನೇ ದಿನಕ್ಕೆ ಕಾಲಿಟ್ಟ ರಾಜ್ಯ ಮಟ್ಟದ ಕೃಷಿ ಮೇಳ: ವಿಜಯವಾಣಿ, ದಿಗ್ವಿಜಯ ನ್ಯೂಸ್​ ಆಯೋಜನೆ

ಬಿಎಂಟಿಸಿ ಬಸ್​ನಿಂದ ಸರಣಿ ಅಪಘಾತ: ಟ್ರಾಫಿಕ್​ನಲ್ಲಿ ನಿಂತಿದ್ದ ಬೈಕ್ ಸವಾರ​ ದುರಂತ ಸಾವು

ಜೂ.ಎನ್​ಟಿಆರ್​ ಸೋದರಸಂಬಂಧಿ ನಂದಮೂರಿ ತಾರಕ ರತ್ನಗೆ ಹೃದಯಾಘಾತ: ಬೆಂಗಳೂರು ಆಸ್ಪತ್ರೆಗೆ ಶಿಫ್ಟ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − 14 =
Remember me
