ಮುಂಬೈ:ಧರ್ಮ ಮತ್ತು ರಾಜಕೀಯ ವಿದ್ಯಾಮಾನಗಳ ಕುರಿತು ತಮ್ಮ ಅಭಿಪ್ರಾಯಗಳಿಗೆ ಹೆಸರುವಾಸಿಯಾಗಿರುವ ಹಿಂದಿ ಚಿತ್ರರಂಗದ ಹಿರಿಯ ಸಾಹಿತಿ, ಕವಿ ಜಾವೇದ್​ ಅಖ್ತರ್​ ಈಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಜೈ ಶ್ರೀರಾಮ್​ ಎಂಬ ಘೋಷಣೆ ಪ್ರೀತಿ ಮತ್ತು ಏಕತೆಯ ಸಂಕೇತ ಎಂದು ಹೇಳುವ ಮೂಲಕ ಈ ಬಾರಿ ಸುದ್ದಿಯಾಗಿದ್ದಾರೆ.
ಶ್ರೀರಾಮ ಮತ್ತು ಸೀತಾ ದೇವಿ ಆದರ್ಶ ಸತಿ-ಪತಿಗೆ ನೀಡಬಹುದಾದ ಉತ್ತಮ ಉದಾಹರಣೆ ಎಂದು ಹೇಳುವ ಮೂಲಕ ಜಾವೇದ್​ ಅಖ್ತರ್​ ಸುದ್ದಿಯಾಗಿದ್ದು, ಇವರ ಹೇಳಿಕೆಗೆ ಸಾಕಷ್ಟು ಮೆಚ್ಚುಗೆಗೆ ಪಾತ್ರವಾಗಿದೆ.
ರಾಜ್​ ಠಾಕ್ರೆ ಣೇತೃತ್ವದ ಮಹಾರಾಷ್ಟ್ರ ನವನಿರ್ಮಾಣ ಸೇನೆ (MNS) ಆಯೋಜಿಸಿದ್ದ ದೀಪೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಜಾವೇದ್​ ಅಖ್ತರ್, ಅನೇಕ ದೇವತೆಗಳಿದ್ದಾರೆ. ಆದರೆ, ನಾವು ಆದರ್ಶ ಸತಿ-ಪತಿ ಬಗ್ಗೆ ಮಾತನಾಡುವಾಗ ಮೊದಲಿಗೆ ನಮ್ಮ ತಲೆಗೆ ಬರುವುದು ಶ್ರೀರಾಮ ಮತ್ತು ಸೀತಾ ದೇವಿ. ಜೈ ಶ್ರೀರಾಮ್​ ಎಂಬ ಘೋಷನೆಯು ಪ್ರೀತಿ ಮತ್ತು ಏಕತೆಯ ಸಂಕೇತವಾಗಿದೆ.
#WATCH| Mumbai: Lyricist Javed Akhtar says, "There are many deities, but when we talk about the ideal husband and ideal wife, Ram and Sita come to mind… 'Jai Siya Ram' is the finest example of love and unity…" (09.11)pic.twitter.com/3q7ePovJCC
ಇದನ್ನೂ ಓದಿ:ಬಿಜೆಪಿಯಲ್ಲಿ ಕುಟುಂಬ ರಾಜಕಾರಣವಿಲ್ಲ ಎಂಬ ಸುಳ್ಳನ್ನು ನಂಬಬೇಕು; ಬಿ.ವೈ. ವಿಜಯೇಂದ್ರಗೆ ಟೀಕಿಸಿ ಶುಭ ಕೋರಿದ ಕಾಂಗ್ರೆಸ್​
ದೇಶದಲ್ಲಿ ಕ್ಷೀಣಿಸುತ್ತಿರುವ ಅಭಿವ್ಯಕ್ತಿ ಸ್ವಾತಂತ್ರ್ಯದ ಕುರಿತು ಕಳವಳ ವ್ಯಕ್ತಪಡಿಸಿದ ಅಖ್ತರ್​ ಯಾವಾಗಲೂ ಅಸಹಿಷ್ಣುತೆ ಹೊಂದಿರುವ ಕೆಲವರು ಇದ್ದಾರೆ. ಆದರೆ, ಹಿಂದೂಗಳ ವಿಚಾರಕ್ಕೆ ಬಂದರೆ ಹಾಗಾಗುವುದಿಲ್ಲ. ಏಕೆಂದರೆ ಅವರು ಉದಾರ ಮತ್ತು ದೊಡ್ಡ ಹೃದಯದವರು ಇದು ಹಿಂದೂ ಸಂಸ್ಕೃತಿ ಮತ್ತು ನಾಗರೀಕತೆಯನ್ನು ತೋರಿಸುತ್ತದೆ. ನಮಗೆ ಪ್ರಜಾಸತ್ತಾತ್ಮಕ ಧೋರಣೆಗಳನ್ನು ಕಲಿಸಿದೆ. ಅದಕ್ಕಾಗಿಯೇ ಈ ದೇಶದಲ್ಲಿ ಪ್ರಜಾಪ್ರಭುತ್ವವಿದೆ. ನಾವು ಸರಿ, ಎಲ್ಲರೂ ತಪ್ಪು ಎಂದು ಭಾವಿಸುವುದು ಹಿಂದೂಗಳ ಕೆಲಸವಲ್ಲ. ಕೆಲವರು ತಮ್ಮ ತಪ್ಪು ಗ್ರಹಿಕೆಯಿಂದ ಈ ರೀತಿ ಹೇಳಿಕೊಡುವ ಮೂಲಕ ಅಶಾಂತಿ ಸೃಷ್ಟಿಸುತ್ತಿದ್ದಾರೆ.
ಶ್ರೀರಾಮ ಮತ್ತು ಸೀತಾ ದೇವಿ ಹಿಂದೂ ದೇವತೆಗಳಲ್ಲ ಅವರು ಭಾರತದ ಸಾಂಸ್ಕೃತಿಕ ಪರಂಪರೆಯ ಪ್ರತೀಕ ಎಂದು ಹೇಳುವ ಮೂಲಕ ಬಾಲಿವುಡ್​ನ ಗೀತೆ ರಚನೆಕಾರ ಜಾವೇದ್​ ಅಖ್ತರ್​ MNS ದೀಪೋತ್ಸವ ಕಾರ್ಯಕ್ರಮದಲ್ಲಿ ಹೇಳಿಕೆ ನೀಡುವ ಮೂಲಕ ಸುದ್ದಿಯಾಗಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen + two =
Remember me
