ದಿಸ್​ಪುರ್:ಅಸ್ಸಾಮಿನಲ್ಲಿ ಸಿಎಎ ವಿರುದ್ಧದ ಪ್ರತಿಭಟನೆಯ ಸಮಯದಲ್ಲಿ ಬಂಧನಕ್ಕೊಳಗಾಗಿ ಜೈಲಿನಲ್ಲಿರುವ ಚಳುವಳಿಕಾರ ಅಖಿಲ್ ಗೊಗೊಯಿ​ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ. ನೂತನವಾಗಿ ರಚಿಸಲಾಗಿರುವ ತಮ್ಮ ರಾಜಕೀಯ ಪಕ್ಷ, ರಾಯ್​ಜೋರ್​ ದಳದ ಅಭ್ಯರ್ಥಿಯಾಗಿ ಸಿಬಸಾಗರ್ ಕ್ಷೇತ್ರದಲ್ಲಿ ಗೊಗೊಯಿ​ ಕಣಕ್ಕಿಳಿಯಲಿದ್ದಾರೆ.
2019 ರ ಡಿಸೆಂಬರ್​ನಲ್ಲಿ ಸಿಟಿಜನ್​ಶಿಪ್ ಅಮೆಂಡ್​ಮೆಂಟ್ ಕಾಯ್ದೆ(ಸಿಎಎ)ಯ ವಿರುದ್ಧದ ಪ್ರತಿಭಟನೆಯ ಸಂದರ್ಭದಲ್ಲಿ ಯುಎಪಿಎ ಕಾನೂನಿನಡಿ ಅಖಿಲ್ ಗೊಗೊಯಿ ಅವರನ್ನು ಬಂಧಿಸಲಾಗಿತ್ತು. ಆಗಿನಿಂದ ಜೈಲಿನಲ್ಲಿರುವ ಗೊಗೊಯ್ ಇದೀಗ ತಮ್ಮದೇ ರಾಜಕೀಯ ಪಕ್ಷವನ್ನು ಹುಟ್ಟಿಹಾಕಿದ್ದು, ಈ ವಿಧಾನಸಭಾ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿ ವಿರುದ್ಧ ಸೆಣಸಾಟ ನಡೆಸುವ ಸಿದ್ಧತೆಯಲ್ಲಿದ್ದಾರೆ.
ಇದನ್ನೂ ಓದಿ:ಬಿಜೆಪಿ ಕಾರ್ಯಕರ್ತರ ಮೇಲೆ ಬಾಂಬ್ ಧಾಳಿ
ರಾಯ್​ಜೋರ್​ ದಳದಿಂದ ಅಸ್ಸಾಂನ ವಿಧಾನಸಭಾ ಚುನಾವಣೆಯ ಮೊದಲ ಎರಡು ಹಂತಗಳಲ್ಲಿ ಕಣಕ್ಕಿಳಿಸಲಾಗುತ್ತಿರುವ ಅಭ್ಯರ್ಥಿಗಳ ವಿವರ ನೀಡಿದ ಕಾರ್ಯಾಧ್ಯಕ್ಷ ಭಾಸ್ಕೊ ಡೆ ಸಾಯ್ಕಿಯಾ ಈ ಮಾಹಿತಿ ನೀಡಿದ್ದಾರೆ. ಮೊದಲನೇ ಹಂತದಲ್ಲಿ 11 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿಯನ್ನು, ಎರಡನೇ ಹಂತಕ್ಕೆ 6 ಕ್ಷೇತ್ರಗಳ ಅಭ್ಯರ್ಥಿಗಳ ವಿವರವನ್ನೂ ಅವರು ನೀಡಿದ್ದಾರೆ.
“ನಾವು 17 ಸೀಟುಗಳಿಗೆ ಮಾತ್ರ ಸ್ಪರ್ಧಿಸಬೇಕೆಂದು ನಿರ್ಧರಿಸಿದ್ದೇವೆ. ಬಿಜೆಪಿಯನ್ನು ಸೋಲಿಸಲು, ಅನಗತ್ಯವಾಗಿ ಮತಗಳ ವಿಭಜನೆಯಾಗದಿರಲಿ ಎಂಬ ಉದ್ದೇಶದಿಂದ ಈ ನಿರ್ಧಾರ ತೆಗೆದುಕೊಂಡಿದ್ದೇವೆ. ರಾಜ್ಯದಲ್ಲಿ ಆ್ಯಂಟಿ-ಸಿಎಎ ಸರ್ಕಾರ ಬರಬೇಕೆಂಬುದು ನಮ್ಮ ಪ್ರಯತ್ನವಾಗಿದೆ” ಎಂದು ಸಾಯ್ಕಿಯಾ ಹೇಳಿದ್ದಾರೆ. ಅಸ್ಸಾಂನಲ್ಲಿ ಒಟ್ಟು 126 ವಿಧಾನಸಭಾ ಕ್ಷೇತ್ರಗಳಿಗೆ ಏಪ್ರಿಲ್​ನಲ್ಲಿ ಚುನಾವಣೆ ಘೋಷಿಸಲಾಗಿದೆ.(ಏಜೆನ್ಸೀಸ್)
ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

ಹೆದ್ದಾರಿಯಲ್ಲಿದ್ದ 12,000 ಮರಗಳ ಟ್ರಾನ್ಸ್​​ಪ್ಲಾಂಟ್ : ಸಚಿವ ಗಡ್ಕರಿ

ಪ್ರೇಮಿಯೊಂದಿಗೆ ಹೋಟೆಲ್​​ನಲ್ಲಿ ನಿಶ್ಚಿಂತೆಯಿಂದ ತಂಗಲು ಅಣ್ಣನ ಮಗುವನ್ನು ಅಪಹರಿಸಿದಳು!

ಕರೊನಾ ಲಸಿಕೆ ಪಡೆದ ಧರ್ಮಗುರು ದಲೈ ಲಾಮಾ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:ten − seven =
Remember me
