ಪಟಿಯಾಲ:ರಸ್ತೆ ಗಲಾಟೆ ಪ್ರಕರಣದ್ಲಲಿ ಸದ್ಯ ಒಂದು ವರ್ಷದ ಜೈಲು ಶಿಕ್ಷೆಯಲ್ಲಿರುವ ಕಾಂಗ್ರೆಸ್​ ನಾಯಕ ನವಜೋತ್​ ಸಿಂಗ್​ ಸಿಧು ಸದ್ಯ ಜೈಲಿನಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ.
ವೈದ್ಯಕೀಯ ಪರೀಕ್ಷೆಗಾಗಿ ಸೋಮವಾರ ಬೆಳಗ್ಗೆ ಭಾರೀ ಭದ್ರತೆಯಲ್ಲಿ ಪಟಿಯಾಲದ ರಾಜೀಂದ್ರ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ನವಜೋತ್​ ಸಿಂಗ್​ ಸಿಧು ಕೆಲ ಕಾಯಿಲೆಗಳಿಂದ ಬಳಲುತ್ತಿದ್ದು ವಿಶೇಷ ಆಹಾರಕ್ರಮವನ್ನು ಬಯಸಿದ್ದಾರೆ ಎಂದು ವಕೀಲ ಎಚ್​ಪಿಎಸ್​ ವರ್ಮಾ ತಿಳಿಸಿದ್ದಾರೆ.ವೈದ್ಯರ ತಂಡ ಪರೀಕ್ಷಿಸಲಿದ್ದು, ಅವರಿಗೆ ಯಾವ ಆಹಾರದ ಅಗತ್ಯವಿದೆ ಎಂಬುದನ್ನು ಹೇಳಲಿದೆ. ಅಂತೆಯೇ ಸ್ಥಳೀಯ ನ್ಯಾಯಾಲಯಕ್ಕೆ ಈ ಬಗ್ಗೆ ವರದಿ ಸಲ್ಲಿಸಲಾಗುವುದು ಎಂದು ಹೇಳಿದ್ದಾರೆ.
ನವಜೋತ್​ ಸಿಂಗ್​ ಸಿಧು ಗೋಧಿ, ಸಕ್ಕರೆ, ಮೈದಾ ಮತ್ತು ಇತರ ಕೆಲವು ಆಹಾರ ಪದಾರ್ಥಗಳನ್ನು ಸೇವಿಸುವಂತಿಲ್ಲ. ಅವರು ಹಣ್ಣುಗಳು, ಪ್ಪಪಾಯಿ ಪೇರಲ, ಹಾಲು ಹಾಗೂ ಫೈಬರ್​ ಆಹಾರಗಳನ್ನು ಸೇವಿಸಬಹುದು ಎಂದು ಅವರ ಪರ ವಕೀಲ ತಿಳಿಸಿದ್ದಾರೆ.1988ರ ರೋಡ್​ ರೇಜ್​ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಧುಗೆ ಸುಪ್ರೀಂಕೋರ್ಟ್​ ಒಂದು ವರ್ಷದ ಜೈಲು ಶಿಕ್ಷೆ ವಿಧಿಸಿದೆ.(ಏಜೆನ್ಸೀಸ್​)
ವೈದ್ಯ ಲೋಕದಲ್ಲೇ ಕ್ರಾಂತಿ: ಇದೇ ಮೊದಲ ಬಾರಿಗೆ ಎರಡು ತೋಳುಗಳ ಜೋಡಿಸಿ, ಯಶಸ್ವಿ ಶಸ್ತ್ರಚಿಕಿತ್ಸೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 + 14 =
Remember me
