ಹಿಮಾಚಲ ಪ್ರದೇಶ:ಭಾರತೀಯ ಸಂಸ್ಕೃತಿಯ ಶಿಸ್ತು ಹಾಗೂ ಮೌಲ್ಯಗಳನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ತುಂಡುಡುಗೆ ಧರಿಸಿ ದೇವಾಲಯ ಪ್ರವೇಶಿಸುವುದನ್ನು ನಿಷೇಧಿಸಿ ಶಿಮ್ಲಾದ ಶತಮಾನಗಳಷ್ಟು ಹಳೆಯದಾದ ಜೈನ ದೇವಾಲಯವೊಂದು ಸೂಚನೆ ಹೊರಡಿಸಿದೆ.
ಭಾರತೀಯ ಸಂಸ್ಕೃತಿ ಮೌಲ್ಯಗಳನ್ನು ಕಾಪಾಡಿಕೊಳ್ಳುವ ಅಗತ್ಯತೆಯಿಂದ ದೇವಾಲಯಕ್ಕೆ ಆಗಮಿಸುವ ಭಕ್ತರಿಗೆ ಡ್ರೆಸ್ ಕೋಡ್ ಸೂಚಿಸಿದ್ದೇವೆ. ತುಂಡುಡುಗೆ ಧರಿಸಿ ಬರುವ ಭಕ್ತರಿಗೆ ಇನ್ನು ಮುಂದೆ ಪ್ರವೇಶವಿಲ್ಲ ಎಂದು ದೇವಾಲಯದ ಅಧಿಕಾರಿಗಳು ತಿಳಿಸಿದ್ದಾರೆ. ಶತಮಾನಗಳಷ್ಟು ಹಳೆಯದಾದ ಈ ದೇವಾಲಯವನ್ನು ದಿಗಂಬರ ಜೈನ ಸಭಾ ನಿರ್ವಹಿಸುತ್ತಿದೆ ಎಂದು ವರದಿಯಾಗಿದೆ.
ಇದನ್ನೂ ಓದಿ:ಅಂಗಡಿ ಮುಂದೆ ಕಾಡಾನೆ ಕಲಾಕೃತಿ ನಿರ್ಮಿಸಿದ ವ್ಯಾಪಾರಿ; ಇದಕ್ಕೆ ಕಾರಣ ಅದೊಂದು ನಂಬಿಕೆ!
‘ಎಲ್ಲಾ ಮಹಿಳೆಯರು ಮತ್ತು ಪುರುಷರು ಸೂಕ್ತವಾದ ಬಟ್ಟೆ ಧರಿಸಿ ದೇವಾಲಯಕ್ಕೆ ಬರಬೇಕು. ಗಿಡ್ಡ ಬಟ್ಟೆ, ಹಾಫ್ ಪ್ಯಾಂಟ್, ಬರ್ಮುಡಾ, ಮಿನಿ ಸ್ಕರ್ಟ್, ನೈಟ್ ಸೂಟ್, ಟೋರ್ನ್ ಜೀನ್ಸ್, ಫ್ರಾಕ್ ಮತ್ತು ತ್ರೀ ಕ್ವಾರ್ಟರ್ ಜೀನ್ಸ್ ಧರಿಸಿ ಬಂದರೆ ದೇವಸ್ಥಾನ ಪ್ರವೇಶಕ್ಕೆ ಅವಕಾಶವಿಲ್ಲ. ಆವರಣದ ಹೊರಗಿನಿಂದಲೇ ದೇವರ ದರ್ಶನ ಪಡೆದುಕೊಳ್ಳಬೇಕು ಎಂದು ಸೂಚನೆ ನೀಡಲಾಗಿದೆ.
ದೇವಸ್ಥಾನಗಳಿಗೆ ಭೇಟಿ ನೀಡುವ ಅಭ್ಯಾಸದಿಂದ ಜನರು ಹೊರಗುಳಿಯುತ್ತಿದ್ದಾರೆ. ಪ್ರಸ್ತುತ ದಿನಗಳಲ್ಲಿ ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಕಾಪಾಡಿಕೊಳ್ಳುವುದು ಬಹುಮುಖ್ಯ. ಹಿಂದೆ ನಮ್ಮ ಹಿರಿಯರು ಸಭ್ಯ ವಸ್ತ್ರ ಧರಿಸಿ ದೇವಸ್ಥಾನಗಳಿಗೆ ಭೇಟಿ ನೀಡುತ್ತಿದ್ದರು. ಆದರೆ ಇಂದಿನ ಯುವಕ-ಯುವತಿಯರು, ವಯಸ್ಕ ಮಹಿಳೆಯರು ಚಿಕ್ಕ-ಉಡುಪು ಧರಿಸಿ ದೇವಾಲಯಗಳಿಗೆ ಭೇಟಿ ನೀಡುತ್ತಿದ್ದಾರೆ. ಪಾಶ್ಚಿಮಾತ್ಯ ಪದ್ಧತಿ ಮತ್ತು ಸಂಸ್ಕೃತಿಯ ಒಳಹರಿವು ನಮ್ಮ ಧಾರ್ಮಿಕ ಮೌಲ್ಯಗಳನ್ನು ನಾಶಪಡಿಸುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ ಎಂದು ದೇವಸ್ಥಾನದ ಅರ್ಚಕರೊಬ್ಬರು ಪ್ರತಿಕ್ರಿಯಿಸಿದ್ದಾರೆ.(ಎಜೆನ್ಸೀಸ್)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen − 5 =
Remember me
