ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಭೂಮಿ ಪೂಜೆಗೆ ಬರೀ ಹಿಂದುಗಳಷ್ಟೇ ಅಲ್ಲದೆ ಬೇರೆ ಕೆಲವು ಸಮುದಾಯದವರೂ ತಮ್ಮ ಕೈಲಾದ ಸೇವೆ ಸಲ್ಲಿಸುತ್ತಿದ್ದಾರೆ.
ಇದೀಗ ಅಹಮಾದಾಬಾದ್​ನ ಜೈನ ಸಮುದಾಯ, ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಶ್ರೀರಾಮನ ದೇವಾಲಯಕ್ಕೆ 24 ಕೆ.ಜಿ.ತೂಕದ ಬೆಳ್ಳಿಯ ಇಟ್ಟಿಗೆಗಳನ್ನು ಸಮರ್ಪಿಸಿದೆ.
ಜೈನ ಸಾಧುಗಳು ಇಟ್ಟಿಗೆಗಳನ್ನು ಇಂದು ಅಹಮದಾಬಾದ್​ನಲ್ಲಿರುವ ಆರ್​ಎಸ್​ಎಸ್​ ಹಾಗೂ ವಿಶ್ವ ಹಿಂದು ಪರಿಷದ್​ನ ಪ್ರಮುಖರಿಗೆ ಒಪ್ಪಿಸಿದ್ದು, ಅವರು ಅಯೋಧ್ಯೆಗೆ ಅದನ್ನು ಹಸ್ತಾಂತರ ಮಾಡಲಿದ್ದಾರೆ.ಇದನ್ನೂ ಓದಿ:‘ಪ್ರೀತಿಸುವುದನ್ನು..ಸತ್ಯ ಹೇಳುವುದನ್ನು, ತಾಳ್ಮೆಯಿಂದ ಇರುವುದನ್ನು ಕಲಿತಿದ್ದೇ ನನ್ನ ಸೋದರನಿಂದ…’
ಈ ಬಗ್ಗೆ ಜೈನ ಸಾಧು ಓರ್ವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಅಯೋಧ್ಯೆ ಶ್ರೀರಾಮಂದಿರ ನಿರ್ಮಾಣವಾಗುತ್ತಿರುವುದು ಇಡೀ ದೇಶದಲ್ಲಿರುವ ಜೈನರಿಗೆ ಸಂತೋಷ ತಂದಿದೆ. ನಾವೆಲ್ಲರೂ ಈ ಬಗ್ಗೆ ಉತ್ಸುಕರಾಗಿದ್ದೇವೆ. ಆಗಸ್ಟ್​ 5 ರಂದು ನಾವೂ ಸಹ ಮಂತ್ರ ಪಠಣ ಮಾಡುತ್ತೇವೆ. ಆದಷ್ಟು ಬೇಗ ಸುಲಲಿತವಾಗಿ ಶ್ರೀರಾಮಮಂದಿರ ನಿರ್ಮಾಣ ಕಾರ್ಯ ಮುಗಿಯಲಿ ಎಂಬುದು ನಮ್ಮ ಆಶಯ ಎಂದಿದ್ದಾರೆ. ಹಾಗೇ, ನಾವೀಗ ಅರ್ಪಿಸುತ್ತಿರುವ 24 ಕೆಜಿ ಬೆಳ್ಳಿಯ ಇಟ್ಟಿಗೆ, ನಮ್ಮ ಸಮುದಾಯದ ಹಲವರ ಕೊಡುಗೆ ಎಂದೂ ಹೇಳಿದ್ದಾರೆ.(ಏಜೆನ್ಸೀಸ್​)
ಭಾರತೀಯ ಸೇನೆಯ ಯೋಧನೋರ್ವ ನಿಗೂಢವಾಗಿ ನಾಪತ್ತೆ; ಕಾರು ಸುಟ್ಟ ಸ್ಥಿತಿಯಲ್ಲಿ ಪತ್ತೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 + 3 =
Remember me
