ನವದೆಹಲಿ:ಒಡಿಶಾದ ಬಾಲಸೋರ್​ನಲ್ಲಿ ಸಂಭವಿಸಿದ ಭೀಕರ ತ್ರಿವಳಿ ರೈಲು ದುರಂತದಲ್ಲಿ ಸುಮಾರು 300 ಮಂದಿ ಸಾವಿಗೀಡಾಗಿದ್ದು, ಅಂದಾಜು 800 ಮಂದಿ ಗಾಯಗೊಂಡಿದ್ದಾರೆ. ಈ ಪ್ರಕರಣದಲ್ಲಿ ಕಾಲು ಕಳೆದುಕೊಂಡ ಎಲ್ಲರಿಗೂ ಉಚಿತವಾಗಿ ಕೃತಕ ಕಾಲು ಜೋಡಣೆ ಮಾಡಲು ಸಂಸ್ಥೆಯೊಂದು ಮುಂದೆ ಬಂದಿದೆ.
ಜೈಪುರ್ ಫುಟ್​ ಉಪಕ್ರಮದಡಿ ಕೃತಕ ಕಾಲುಗಳನ್ನು ಒದಗಿಸುತ್ತಿರುವ ಭಗವಾನ್ ಮಹಾವೀರ್ ವಿಕಲಾಂಗ್ ಸಹಾಯತಾ ಸಮಿತಿ (ಬಿಎಂವಿಎಸ್​ಎಸ್​) ಇಂಥದ್ದೊಂದು ಕಾರ್ಯಕ್ಕೆ ಸಜ್ಜಾಗಿದೆ. ಬಿಎಂವಿಎಸ್ಎಸ್​ನ ಸಂಸ್ಥಾಪಕ ಹಾಗೂ ಅಧ್ಯಕ್ಷರೂ ಆಗಿರುವ ಡಿ.ಆರ್. ಮೆಹತಾ ಈ ಕುರಿತು ಘೋಷಣೆ ಮಾಡಿದ್ದಾರೆ.
ಇದನ್ನೂ ಓದಿ:ವಿಂಗ್ ಹೆಸರಲ್ಲಿ ಅಮಾಯಕ ಹಿಂದು ಹುಡುಗರನ್ನು ತಡೆದರೆ ಪರಿಣಾಮ ನೆಟ್ಟಗಿರಲ್ಲ: ವಜ್ರದೇಹಿ ಸ್ವಾಮೀಜಿ
ಒಡಿಶಾ ರೈಲು ದುರಂತದಲ್ಲಿ ಕಾಲು ಕಳೆದುಕೊಂಡ ಎಲ್ಲರಿಗೂ ಉಚಿತವಾಗಿ ಕೃತಕ ಕಾಲುಗಳನ್ನು ಒದಗಿಸುವುದಲ್ಲದೆ, ಅವರಿಗೆ ಭುವನೇಶ್ವರದಲ್ಲಿರುವ ಖ್ರೋಡಾ ಸೆಂಟರ್​​ನಲ್ಲಿ ಉಚಿತವಾಗಿ ಕೃತಕ ಕಾಲುಗಳನ್ನು ಜೋಡಣೆ ಕೂಡ ಮಾಡಿಕೊಡಲಾಗುವುದು ಎಂದು ಮೆಹತಾ ಅವರು ರೈಲ್ವೇ ಸಚಿವ ಅಶ್ವಿನ್​ ವೈಷ್ಣವ್ ಅವರಿಗೆ ಪತ್ರ ಬರೆದು ತಿಳಿಸಿದ್ದಾರೆ.
ಇದನ್ನೂ ಓದಿ:ಮುಂದಿನ ಒಂದು ವರ್ಷದಲ್ಲಿನ ಉಚಿತ ಚಿಕಿತ್ಸೆಗೆಂದೇ 65 ಕೋಟಿ ರೂ. ಮೀಸಲು: ಅಮೃತ ಆಸ್ಪತ್ರೆ
ಕಾಲು ಕಳೆದುಕೊಂಡವರ ಗಾಯ ಗುಣವಾಗಲು ಮೂರು ತಿಂಗಳ ಕಾಲಾವಕಾಶ ಬೇಕಾಗುತ್ತದೆ. ಹೀಗಾಗಿ ಅಗತ್ಯ ಇರುವ ಅಂಥ ಎಲ್ಲರಿಗೂ ಮೂರು ತಿಂಗಳ ಬಳಿಕ ಕೃತಕ ಕಾಲುಗಳನ್ನು ಜೋಡಣೆ ಮಾಡಿಕೊಡಲಾಗುವುದು. ಖ್ರೋಡಾ ಸೆಂಟರ್​ನ ಮೊಬೈಲ್​ ವರ್ಕ್​ಶಾಪ್​ ಮೂಲಕ ಒಡಿಶಾ ವಿವಿಧ ನಗರ ಹಾಗೂ ಗ್ರಾಮಗಳಲ್ಲಿ ಕೃತಕ ಕಾಲುಗಳನ್ನು ಜೋಡಣೆ ಮಾಡಲಾಗುವುದು ಎಂದು ಹೇಳಿದ್ದಾರೆ.
ರೋಗಿಗಳು ಬೇರೆ ರಾಜ್ಯಗಳಲ್ಲಿದ್ದರೆ ಅಲ್ಲಿರುವ ನಮ್ಮ ಶಾಶ್ವತ ಕೇಂದ್ರಗಳಲ್ಲಿ ಮತ್ತು ಮೊಬೈಲ್​ ವರ್ಕ್​ಶಾಪ್​ಗಳಲ್ಲಿ ಕೃತಕ ಕಾಲುಗಳನ್ನು ಜೋಡಣೆ ಮಾಡಲಾಗುವುದು. ದೇಶಾದ್ಯಂತ ಇರುವ ಇಂಥ 33 ಕೇಂದ್ರಗಳಲ್ಲಿ ಉಚಿತವಾಗಿ ಕಾಲು ಜೋಡಿಸಲಾಗುವುದು ಎಂದು ತಿಳಿಸಿದ್ದಾರೆ. –ಏಜೆನ್ಸೀಸ್
ನಾಚಿಕೆ-ಅವಮಾನ ಸಹಿಸಿಕೊಂಡು ಬಯಲಲ್ಲೇ ದೇಹದ ಒತ್ತಡ ನಿವಾರಿಸಿಕೊಂಡೆ: ಟಾಯ್ಲೆಟ್ ಇರದೆ ಪಟ್ಟ ಕಷ್ಟದ ಬಗ್ಗೆ ರಾಷ್ಟ್ರಪತಿಗೇ ಪತ್ರ ಬರೆದ ಮಹಿಳೆ

ಭ್ರಷ್ಟರಿಗೆ ‘ಕರೊನಾ ಶಾಕ್’?: ಶೀಘ್ರವೇ ಕೋವಿಡ್​ ಅವಧಿಯ ಟೆಂಡರ್​ಗಳ ಮರು ಪರಿಶೀಲನೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 + nine =
Remember me
